Film News

ತೆಲುಗಿನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ್ರಾ ಸ್ಯಾಂಡಲ್ವುಡ್ ನಟ ಯಶ್!

ಹೈದಾರಾಬಾದ್: ಸ್ಯಾಂಡಲ್‌ವುಡ್‌ನ ನಟ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದ ಬಲಿಕ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ದೇಶ ಸೇರಿದಂತೆ ವಿದೇಶದಲ್ಲೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಜೊತೆಗೆ ತೆಲುಗಿನಲ್ಲಿ ಯಶ್ ಸಿನೆಮಾಗಳಿಗೆ ಭಾರಿ ಬೇಡಿಕೆಯಿದೆ ಎನ್ನಲಾಗುತ್ತಿದೆ.

ಹೌದು ಕೆಜಿಎಫ್ ಚಿತ್ರದ ಬಳಿಕ ನಟ ಯಶ್ ರವರಿಗೆ ತೆಲುಗು ರಾಜ್ಯಗಳಲ್ಲಿ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಜೊತೆಗೆ ಯಶ್ ರವರ ಸಿನೆಮಾಗಳಿಗೆ ಕ್ರೇಜ್ ಹೆಚ್ಚಾಗಿದೆ. ಕೆಜಿಎಫ್ ಸಿನೆಮಾದ ಬಳಿಕ ಯಶ್ ಗೆ ಅಭಿಮಾನಿ ಬಳಗ ಹೆಚ್ಚಾಗಿದ್ದು, ಮಾಸ್ ಸಿನೆಮಾಗಳನ್ನು ಹೆಚ್ಚಾಗಿ ಪ್ರೀತಿಸುವ ತೆಲುಗು ರಾಜ್ಯಗಳಲ್ಲಿ ಯಶ್ ಅಭಿನಯದ ಹಳೆಯ ಸಿನೆಮಾಗಳನ್ನು ಸಹ ತೆಲುಗಿಗೆ ಡಬ್ ಮಾಡಲಾಗುತ್ತಿದೆ ಎನ್ನಲಾಗಿದೆ.

ಕಳೆದ 2014 ರಲ್ಲಿ ತೆರೆಕಂಡು ಸೂಪರ್ ಹಿಟ್ ಹೊಡೆದ ಸಿನೆಮಾ ಗಜಕೇಸರಿ ಚಿತ್ರವನ್ನು ತೆಲುಗಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ. ನಿನ್ನೆಯಷ್ಟೆ ಈ ಚಿತ್ರದ ಟೀಸರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಇನ್ನೂ ಗಜಕೇಸರಿ ಸಿನೆಮಾದಲ್ಲಿ ಅದ್ಬುತವಾದ ದೃಶ್ಯಗಳು, ಫೈಟ್ಸ್, ಕಾಮಿಡಿ, ಪ್ರೇಮ ಭಾವನೆಗಳಿರುವ ಈ ಚಿತ್ರ ತೆಲುಗು ಪ್ರೇಕ್ಷರನ್ನು ರಂಜಿಸುತ್ತದೆ ಎನ್ನಲಾಗುತ್ತಿದೆ.

ಇನ್ನೂ ಗಜಕೇಸರಿ ಸಿನೆಮಾ ತೆಲುಗು ಡಬ್ಬಿಂಗ್ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು, ಟಾಲಿವುಡ್ ನಿರ್ಮಾಪಕ ದಿಲ್ ರಾಜು ಸಿನೆಮಾದ ವಿತರಣೆ ಹಕ್ಕನ್ನು ಖರೀದಿಸಿದ್ದಾರೆ. ಇನ್ನೂ ಈ ಚಿತ್ರ ಮಾರ್ಚ್ 5 ರಂದು ತೆಲುಗು ರಾಜ್ಯಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಯಶ್ ಗೆ ನಾಯಕಿಯಾಗಿ ಅಮೂಲ್ಯ ನಟಿಸಿದ್ದು, ಅನಂತ್‌ನಾಗ್, ಸಾಧುಕೋಕಿಲ, ರಂಗಾಯಣ ರಘು ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದರು.

Trending

To Top