ಆಚಾರ್ಯ ಚಿತ್ರಕ್ಕಾಗಿ ನಿರ್ಮಾಣವಾಯ್ತು ದುಬಾರಿ ವೆಚ್ಚದ ಸೆಟ್!

ಹೈದರಾಬಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ಆಚಾರ್ಯ ಸಿನೆಮಾದ ಶೂಟಿಂಗ್ ಗಾಗಿ ಸುಮಾರು 20 ಎಕರೆ ಜಾಗದಲ್ಲಿ ಭರ್ಜರಿಯಾದ ಸೆಟ್ ನಿರ್ಮಾಣ ಮಾಡುತ್ತಿದ್ದು, ಇದಕ್ಕಾಗಿ ಬರೋಬ್ಬರಿ 20 ಕೋಟಿವರೆಗೂ ಖರ್ಚಾಗಿದೆ ಎನ್ನಲಾಗುತ್ತಿದೆ.

ಮೆಗಸ್ಟಾರ್ ಚಿರಂಜೀವಿ ನಾಯಕನಾಗಿ ನಟಿಸುತ್ತಿರುವ ಆಚಾರ್ಯ ಸಿನೆಮಾ ಮೇಲೆ ಭಾರಿ ನಿರೀಕ್ಷೆ ಈಗಾಗಲೇ ಹುಟ್ಟಿದೆ. ಈಗಾಗಲೇ ಈ ಚಿತ್ರದ ಪ್ರತಿಯೊಂದು ಅಪ್ ಡೇಟ್ ಗೂ ಸೋಷಿಯಲ್ ಮಿಡೀಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದೀಗ ಆಚಾರ್ಯ ಚಿತ್ರಕ್ಕಾಗಿ ಒಂದು ಪ್ರತ್ಯೇಕವಾದ ದೇವಾಲಯ ಹಾಗೂ ಪಟ್ಟಣವೊಂದರ ಸೆಟ್ ನ್ನು ನಿರ್ಮಾಣ ಮಾಡಲಾಗುತ್ತಿದೆಯಂತೆ. ಈ ಸೆಟ್ ನಿರ್ಮಾಣದಲ್ಲಿ ಖ್ಯಾತ ತಮಿಳು ಆರ್ಟ್ ಡೈರೆಕ್ಟರ್ ಸುರೇಶ್ ಸೆಲ್ವರಾಜನ್ ಶ್ರಮ ಬಹಳಷ್ಟಿದೆಯಂತೆ. ಮೊದಲಿಗೆ 10 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿ, ಉಳಿದದ್ದನ್ನು ವಿ.ಎಫ್.ಎಕ್ಸ್ ನಲ್ಲಿ ಸರಿದೂಗಿಸಲು ಯೋಜನೆ ಮಾಡಿದ್ದರಂತೆ. ಆದರೆ ಈ ಚಿತ್ರಕ್ಕೆ ಈ ಸೆಟ್ ಮುಖ್ಯವಾಗಿ ಬೇಕಿದ್ದು, 20 ಕೋಟಿ ವೆಚ್ಚದಲ್ಲಿ ಪೂರ್ತಿ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಈ ಮಟ್ಟಿಗೆ ಭಾರತದ ಯಾವುದೇ ಸಿನೆಮಾದಲ್ಲೂ ನಿರ್ಮಿಸಿಲ್ಲವಂತೆ. ಇನ್ನೂ ಈ ಸೆಟ್ ನ್ನು ಹೈದರಾಬಾದ್ ನ ಕೋಕಾಪೇಟಾ ಎಂಬಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದೆ.

ಇನ್ನೂ ಈ ಆಚಾರ್ಯ ಚಿತ್ರ ದೇವಾಲಯವೊಂದನ್ನು ಸಂರಕ್ಷಣೆ ಮಾಡಲು ಹೋರಾಟ ಮಾಡುವಂತಹ ಕಥನವನ್ನು ಒಳಗೊಂಡಿದ್ದು, ಮೆಗಾಸ್ಟಾರ್ ಚಿರಂಜೀವಿ ಮಗ ರಾಮ್ ಚರಣ್ ತೇಜ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಜೊತೆಗೆ ಈ ಚಿತ್ರವನ್ನು ರಾಮ್ ಚರಣ್ ಹಾಗೂ ನಿರಂಜನ್ ರೆಡ್ಡಿ ರವರು ಬಂಡವಾಳ ಹೂಡಿದ್ದಾರೆ.

Previous articleಪೌರಾಣಿಕ ಸಿನೆಮಾದಲ್ಲಿ ನಟಿಸಲಿದ್ದಾರೆ ಸಮಂತಾ!
Next articleಪೋಸ್ಟರ್ ರಿಲೀಸ್ ಮಾಡಿ ಇನಷ್ಟು ಕುತೂಹಲ ಹೆಚ್ಚಿಸಿದ ಕೆಜಿಎಫ್-2