Film News

ಮತ್ತೊಮ್ಮೆ ಜಾನಪದ ಗೀತೆಯೊಂದಿಗೆ ರಂಜಿಸಲಿದ್ದಾರೆ ಪವನ್ ಕಲ್ಯಾಣ್!

ಹೈದರಾಬಾದ್: ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯಿಸುತ್ತಿರುವ ಅಯ್ಯುಪ್ಪನುಮ್ ಕೋಶಿಯಂ ಚಿತ್ರದ ರಿಮೇಕ್‌ನಲ್ಲಿ ಜಾನಪದ ಗೀತೆಯೊಂದಿದ್ದು, ಅದು ಪ್ರೇಕ್ಷಕರನ್ನು ತುಂಬಾ ರಂಜಿಸಲಿದೆ ಎಂದು ಹೇಳಲಾಗುತ್ತಿದೆ.

ಅಂದಹಾಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನೆಮಾ ಎಂದ ಕೂಡಲೇ ಚಿತ್ರದಲ್ಲಿ ಜಾನಪದ ಗೀತೆಯೊಂದನ್ನು ಅಭಿಮಾನಿಗಳು ನಿರೀಕ್ಷೆ ಮಾಡುತ್ತಾರೆ. ಪವನ್ ರವರ ಹಿಂದಿನ ಸಿನೆಮಾಗಳನ್ನು ಗಮನಿಸಿದರೇ ತಮ್ಮುಡು ಸಿನೆಮಾದಲ್ಲಿ ತಾಟಿ ಚೆಟ್ಟು ಎಕ್ಕಲೇವು, ಖುಷಿ ಸಿನೆಮಾದಲ್ಲಿ ಬಯ್ ಬಯ್ಯೇ ಬಂಗಾರು ರಮಣಮ್ಮ, ಜಾನಿ ಸಿನೆಮಾದಲ್ಲಿ ಬೀಟ್ ಸಾಂಗ್, ಪಂಜಾ ಸಿನೆಮಾದಲ್ಲಿ ಪಾಪಾರಾಯುಡು, ಅತ್ತಾರಿಂಟಿಕಿ ದಾರೇದಿ ಚಿತ್ರದಲ್ಲಿ ಕಾಟಮರಾಯುಡಾ ಇಂತಹ ಜಾನಪದ ಗೀತೆಗಳು ಅಭಿಮಾನಿಗಳನ್ನು ಹಾಗೂ ಸಿನಿರಸಿಕರನ್ನು ಮತಷ್ಟು ರಂಜಿಸುತ್ತಿದ್ದವು.

ಇದೀಗ ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಅಯ್ಯುಪ್ಪನುಮ್ ಕೋಶಿಯಂ ಚಿತ್ರದಲ್ಲೂ ಸಹ ಒಂದು ಜಾನಪದ ಗೀತೆಯಿದ್ದು, ಅದರ ರೇಂಜ್ ಸಹ ಬೇರೇಯಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಆ ಗೀತೆ ಸಹ ಸಿದ್ದವಾಗಿದೆಯಂತೆ. ಅಡಕಚೊಕ್ಕ ಎಂಬ ಜಾನಪದ ಗೀತೆ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಜೊತೆಗೆ ಈಗಾಗಲೇ ಈ ಗೀತೆ ಶೂಟಿಂಗ್ ಸೆಟ್‌ನಲ್ಲಿ ಹಾಡುತ್ತಿದ್ದು, ಸಿನೆಮಾ ಟೀಸರ್ ನಲ್ಲಿ ಕಾಣಿಸಿಕೊಂಡ ಬಿಲ್ಲಾ ರಂಗಾ ಎಂಬ ಗೀತೆಯೇ ಈ ಜಾನಪದ ಗೀತೆನಾ ಎಂಬ ಕುತೂಹಲದ ಜೊತೆಗೆ ಅನುಮಾನ ಸಹ ಅಭಿಮಾನಿಗಳಲ್ಲಿ ಮೂಡಿದೆ .

Trending

To Top