gossip

FlashBack Friday : ಧನುಷ್ ಮತ್ತು ಶ್ರುತಿ ಹಾಸನ್ ಬಗ್ಗೆ ಕೇಳಿಬಂದ ಗಾಸಿಪ್ ಗೆ ಬ್ರೇಕ್ ಹಾಕಿದ್ದರು ಐಶ್ವರ್ಯ ರಜನಿಕಾಂತ್ !

ರಜನಿಕಾಂತ್ ಅವರ ಮಗಳು ಐಶ್ವರ್ಯ ಮತ್ತು ಅಳಿಯ ಧನುಷ್. ರಜನಿಕಾಂತ್ ಅವರ ಮಗಳು ಐಶ್ವರ್ಯ ನಿರ್ದೇಶಕಿಯಾಗಿ 2 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಐಶ್ವರ್ಯ ನಿರ್ದೇಶಿಸಿದ ಮೊದಲ ಚಿತ್ರ ‘3’(Moonu) .. ಈ ಚಿತ್ರದ ಕೊಲವೆರಿ ಹಾಡಿನ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಟ್ ಆಯಿತು.. 3 ಚಿತ್ರ ಸಹ ಬಿಡುಗಡೆಯಾದ ನಂತರ ಯಶಸ್ವಿ ಪ್ರದರ್ಶನ ಕಂಡಿತು.

ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಗಾಸಿಪ್ ಶುರುವಾಗಿತ್ತು. ಅದೇನು ಅಂದರೆ ಶ್ರುತಿ ಹಾಸನ್ ಮತ್ತು ಧನುಷ್ ನಡುವೆ ಡೇಟ್ ನಡೆಯುತ್ತಿದೆ ಎಂದು. ಮೊದಲಿಗೆ ಸಣ್ಣದಾಗಿ ಶುರುವಾದ ಈ ಗಾಸಿಪ್, ನಂತರ ಎಲ್ಲೆಡೆ ಹರಿದಾಡಿತು. ಒಂದೆರಡು ಕಾರ್ಯಕ್ರಮಗಳಿಗೆ ಧನುಷ್ ಜೊತೆಯಲ್ಲಿ ಪತ್ನಿ ಬರದ ಕಾರಣ ಇಟ್ಟುಕೊಂಡು ಮಾಧ್ಯಮಗಳಲ್ಲಿ ಈ ಮದುವೆ ಮುರಿದು ಬಿದ್ದಂತೆ ಎಂದು ಸಹ ಸುದ್ದಿ ಬಂದಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಐಶ್ವರ್ಯ ರಜನಿಕಾಂತ್, ಶ್ರುತಿ ನನ್ನ ಬಾಲ್ಯದ ಗೆಳತಿ, 3 ಚಿತ್ರದಲ್ಲಿ ಅವಳೇ ನಟಿಸಬೇಕು ಎಂದು ಹಠ ಹಿಡಿದದ್ದು ನಾನು, ಹಾಗೆಯೇ ಧನುಷ್ ಶ್ರುತಿ ಸಹ ಒಳ್ಳೆಯ ಗೆಳೆಯರೇ , ಇಂತಹ ವಾದಂತಿಗಳನ್ನು ಸೃಷ್ಟಿಸಬೇಡಿ , ನೀವು ಹೇಳುವಂತೆ ಅವರಿಬ್ಬರ ಚಲನವಲನಗಳನ್ನು ಪತ್ತೆಹಚ್ಚಲು ದೇಹದಲ್ಲಿ ಕ್ಯಾಮೆರಾ ಇರಿಸಬೇಕಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಇದರ ಬೆನ್ನಲ್ಲೇ ಇಂತಹ ರೂಮರ್ಗಳ ಬಗ್ಗೆ ಮಾತನಾಡಿದ ಶ್ರುತಿ ಹಾಸನ್, ನಾನು ಧನುಷ್ ಉತ್ತಮ ಸ್ನೇಹಿತರಷ್ಟೇ. ನನಗೇ ದೈರ್ಯವಿಲ್ಲದಿದ್ದಾಗ ಐಶ್ವರ್ಯಾ ಹಾಗೂ ಧನುಷ್ ಸೇರಿ 3 ಚಿತ್ರದಲ್ಲಿ ನನ್ನಿಂದ ಅಂತಹದೊಂದು ಪಾತ್ರ ತೆಗೆದಿದ್ದರು. ಹೀಗಾಗಿ ಅವರಿಗೆ ನಾನು ಋಣಿಯಾಗಿದ್ದೇನೆ. ಸಂಬಂಧ ಕಲ್ಪಿಸುವ ವದಂತಿಗಳನ್ನು ನಂಬಬೇಡಿ ಎಂದು ತಿಳಿಸಿದ್ದರು.

Trending

To Top