ಮೊದಲ ಬಾರಿಗೆ ಮಗನ ಜೊತೆ ರೀಲ್ಸ್ ಮಾಡಿದ ನಟಿ ಸಂಜನಾ ಗಲ್ರಾನಿ..!

ದಕ್ಷಿಣ ಭಾರತದ ಅನೇಕ ಸಿನೆಮಾಗಳಲ್ಲಿ ನಟಿಸಿದ್ದ ನಟಿ ಸಂಜನಾ ಗಲ್ರಾನಿ ಇತ್ತೀಚಿಗಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಚಂದನವನದ ಹೆಚ್ಚು ಪರಿಚಿತ ನಟಿ ಸಂಜನಾ ಗಲ್ರಾನಿ ಸದಾ ಸುದ್ದಿಯಲ್ಲೇ ಇರುತ್ತಾರೆ. ತಾನು ಗರ್ಭಿಣಿಯಾದ ಪೊಟೋಗಳು, ಬೇಬಿ ಬಂಪ್ ಪೊಟೋಗಳು, ಸೀಮಂತದ ಪೊಟೋಗಳು ಮೊದಲಾದ ವಿಚಾರಗಳಿಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಆದರೆ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವುಳಿದ ಈಕೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಬ್ಯುಸಿಯಾಗಿಯೇ ಇದ್ದಾರೆ. ಇದೀಗ ಮೊದಲ ಬಾರಿಗೆ ಮಗನ ಜೊತೆ ರೀಲ್ಸ್ ಮಾಡಿದ್ದು, ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ನಟಿ ಸಂಜನಾ ಮದುವೆಯಾದಾಗಿನಿಂತ ಅವರ ಪ್ರತಿಯೊಂದು ಸಂತಸದ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕವೇ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇತ್ತೀಚಿಗೆ ತಮ್ಮ ಮಗುವಿನ ವಿಡಿಯೋ ಹಾಗೂ ಪೊಟೋಗಳನ್ನು ಸೋಷಿಯಲ್ ಮಿಡಿಯಾ ಮೂಲಕವೇ ಹಂಚಿಕೊಂಡಿದ್ದರು. ಸದಾ ಮಗುವಿನ ಬಗ್ಗೆ ಪೋಸ್ಟ್ ಮಾಡುತ್ತಾ ಸಂಜನಾ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿರುತ್ತಾರೆ. ಇನ್ನೂ ನಟಿ ಸಂಜನಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಅಲಾರಿಕ್ ಎಂಬ ನಾಮಕರಣವನ್ನು ಸಹ ಮಾಡಿದ್ದಾರೆ. ಇದೀಗ ಮಗನ ಜೊತೆಗೆ ರೀಲ್ಸ್ ಮಾಡಿದ್ದು ಇದು ಎಲ್ಲೆಡೆ ವೈರಲ್ ಆಗುತ್ತಿದೆ. ಜೊತೆಗೆ ನೆಟ್ಟಿಗರು ಹಾಗೂ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ.

ಇನ್ನೂ ನಟಿ ಸಂಜನಾ ಇತ್ತೀಚಿಗೆ ತಮ್ಮ ಮುದ್ದಿಗ ಮಗನೊಂದಿಗೆ ರೀಲ್ಸ್ ಮಾಡಿದ್ದಾರೆ. ಮೊದಲ ಬಾರಿಗೆ ಮಗನೊಂದಿಗೆ ರೀಲ್ಸ್ ಮಾಡಿದ್ದು, ಇದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ನಟಿ ಸಂಜನಾ ಮಗುವಿನ ಲಾಲನೆ ಪಾಲನೆಯಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ಈ ನಡುವೆಯೆ ಆಕೆ ಮಗನನ್ನು ಎತ್ತಿಕೊಂಡು ರೀಲ್ಸ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಕೆಲವೇ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಸಂಜನಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಹಾಗೂ ಆಕೆಯ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಸದ್ಯ ಸಂಜನಾ ತನ್ನ ಮಗನೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಗಂಡ ಹೆಂಡತಿ ಎಂಬ ಸಿನೆಮಾದ ಮೂಲಕ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡ ಈಕೆ ಶೀಘ್ರದಲ್ಲೇ ಸಿನಿರಂಗಕ್ಕೆ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲೂ ಸಹ ಅನೇಕ ಸಿನೆಮಾಗಳನ್ನು ಮಾಡಿರುವ ಈಕೆಯ ರೀ ಎಂಟ್ರಿಗಾಗಿ ಅವರ ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಶೀಘ್ರದಲ್ಲೇ ಗ್ರಾಂಡ್ ಎಂಟ್ರಿಯನ್ನು ಸಂಜನಾ ಕೊಡಲಿದ್ದಾರೆ ಎನ್ನಲಾಗುತ್ತಿದೆ.

Previous articleಸೋಷಿಯಲ್ ಮಿಡಿಯಾದಲ್ಲಿ ಹವಾ ಎಬ್ಬಿಸಿದ ಸೀನಿಯರ್ ನಟಿ ರಮ್ಯಕೃಷ್ಣ….!
Next articleಯೂರೋಪ್ ನಲ್ಲಿ ಎಂಜಾಯ್ ಮಾಡುತ್ತಿರುವ ರಾಖಿ ಭಾಯ್ ಕುಟುಂಬ..!