Saturday, May 21, 2022
HomeFilm Newsನನ್ನನ್ನು ಕಂಡರೇ ಅಮಿತಾಭ್ ಬಚ್ಚನ್ ರವರಿಗೂ ಭಯನಾ ಎಂದ ಕಂಗನಾ…

ನನ್ನನ್ನು ಕಂಡರೇ ಅಮಿತಾಭ್ ಬಚ್ಚನ್ ರವರಿಗೂ ಭಯನಾ ಎಂದ ಕಂಗನಾ…

ಬಾಲಿವುಡ್ ನಲ್ಲಿ ಅನೇಕ ಸ್ಟಾರ್‍ ನಟ ನಟಿಯರನ್ನೂ ಬಗ್ಗೆ ಮಾತನಾಡಿರುವ ಬಾಲಿವುಡ್ ಫೈರ್‍ ಬ್ರಾಂಡ್ ಎಂತಲೇ ಕರೆಯುವ ಕಂಗನಾ ರಾಣವತ್ ಸಿನೆಮಾಗಳ ಮೂಲಕ ಪ್ರಚಾರವಾಗುವುದಕ್ಕಿಂತ ವಿವಾದಗಳ ಮೂಲಕ ಹೆಚ್ಚು ಪ್ರಚಾರದಲ್ಲಿರುತ್ತಾರೆ. ತಮ್ಮ ಈ ಸ್ವಭಾವದಿಂದ ತುಂಬಾನೇ ಫೇಮಸ್ ಆಗಿದ್ದಾರೆ. ಇಂಡಸ್ಟ್ರಿಯಲ್ಲಿರುವ ವಾರಸುದಾರರೆಲ್ಲಾ ವ್ಯರ್ಥ ಎಂದು ಆಕೆಯ ಬಲವಾದ ಅಭಿಪ್ರಾಯ. ಇದೇ ಹಾದಿಯಲ್ಲಿ ಅನೇಕ ಬಾರಿ ಸ್ಟಾರ್‍ ಹಿರೋ ಹಿರೋಯಿನ್ ಗಳ ಬಗ್ಗೆ ಮಾತನಾಡುತ್ತಿರುತ್ತಾರೆ.

ಇನ್ನೂ ಕಂಗನಾ ಧಾಕಡ್ ಸಿನೆಮಾ ಬಿಡುಗಡೆಗೆ ಸಿದ್ದವಾಗುತ್ತಿರುವ ವಿಚಾರ ತಿಳಿದಿದ್ದೇ ಆಗಿದೆ. ಇನ್ನೂ ಇತ್ತೀಚಿಗೆ ಸಿನೆಮಾದ ಫೈರ್‍ ಸಾಂಗ್  ಸಹ ಬಿಡುಗಡೆಯಾಗಿದ್ದು, ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿತ್ತು. ಧಾಕಡ್ ಸಿನೆಮಾದ ಶೀ ಈಸ್ ಆನ್ ಫೈರ್‍ ಎಂಬ ಹಾಡಿನ ಪ್ರೊಮೊ ಬಿಡುಗಡೆಯಾಗಿದ್ದು ಎಲ್ಲೆಡೆ ಇದು ವೈರಲ್ ಆಗುತ್ತಿತ್ತು. ಇನ್ನೂ ಬಾಲಿವುಡ್ ನ ಮೆಗಾಸ್ಟಾರ್‍ ಬಿಗ್ ಬಿ ಅಮಿತಾಭ್ ಬಚ್ಚನ್ ಸಹ ಟ್ವಿಟರ್‍ ಮೂಲಕ ಈ ಹಾಡನ್ನು ಹಂಚಿಕೊಂಡಿದ್ದರು. ಕೆಲವು ಗಂಟೆಗಳ ಬಳಿಕ ಈ ಟ್ವೀಟ್ ಅನ್ನು ನಟ ಅಮಿತಾಭ್ ಡಿಲೀಟ್ ಮಾಡಿದ್ದಾರೆ. ಒಮ್ಮೆ ಟ್ವೀಟ್ ಮಾಡಿದರೇ ಅಮಿತಾಭ್ ಅದನ್ನು ಡಿಲೀಟ್ ಮಾಡುವುದು ತುಂಬಾ ವಿರಳ. ಇದೀಗ ಕಂಗನಾರ ಧಾಕಡ್ ಸಿನೆಮಾದ ಈ ಪೋಸ್ಟ್ ಡಿಲೀಟ್ ಮಾಡಿರುವುದು ಕಂಗನಾ ರವರ ಕೆಂಗೆಣ್ಣಿಗೆ ಗುರಿಯಾಗಿದೆ.

ಇನ್ನೂ ಈ ಕುರಿತು ಕಂಗನಾ ಪ್ರತಿಕ್ರಿಯೆ ನೀಡಿದ್ದು, ಬಾಲಿವುಡ್ ಸಿನಿರಂಗದಲ್ಲಿ ನನ್ನನ್ನು ಕಂಡರೆ ತುಂಬಾ ಮಂದಿಗೇ ಆಗಿಬರೊಲ್ಲ. ನನ್ನ ಮೇಲೆ ಹಗೆ ಸಾಧಿಸುವಂತಹವರು ಬಹಳಷ್ಟು ಮಂದಿ ಇದ್ದಾರೆ. ನಾನು ಅಂದರೇ ಅವರಿಗೆಲ್ಲ ಭಯ. ನನ್ನಿಂದ ಅವರಿಗೆ ಅಭದ್ರತೆಯ ಭಾವನೆ ಇದೆ. ಆದ್ದರಿಂದಲೇ ಅವರು ನನ್ನ ವಿಚಾರದಲ್ಲಿ ಸದಾ ನೆಗೆಟೀವ್ ಆಗಿರುತ್ತಾರೆ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಜೊತೆಗೆ ಮೆಗಾಸ್ಟಾರ್‍ ಅಮಿತಾಭ್ ಬಚ್ಚನ್ ಗೂ ಸಹ ನಾನು ಅಂದರೇ ಭಯ ಬಂದಿದೆಯಾ, ಅದಕ್ಕಾಗಿಯೇ ನನ್ನ ಹಾಡಿನ ಪ್ರೊಮೊ ಟ್ವೀಟ್ ಡಿಲೀಟ್ ಮಾಡಿದ್ದಾರೆ, ಅಥವಾ ಅವರ ಮೇಲೆ ಯಾರಾದರೂ ಒತ್ತಡ ಹೇರಿ ಡಿಲೀಟ್ ಮಾಡಿಸಿರಲೂ ಬಹುದು ಎಂದಿದ್ದಾರೆ.

ಸದಾ ಸ್ಟಾರ್‍ ಹಾಗೂ ರಾಜಕೀಯ ಗಣ್ಯರ ಮೇಲೆ ವಿವಾದಾತ್ಮಕವಾದ ಹೇಳಿಕೆಗಳನ್ನು ನೀಡುತ್ತಾ ಬರುತ್ತಿರುವ ಕಂಗನಾ ಈ ಬಾರಿ ಅಮಿತಾಭ್ ಬಚ್ಚನ್ ರವರ ಮೇಲೂ ವಿಮರ್ಶೆ ಮಾಡಿ ಸೋಷಿಯಲ್ ಮಿಡೀಯಾದಲ್ಲಿ ಸುದ್ದಿಯಾಗಿದ್ದಾರೆ. ಈಕೆಯೊಂದಿಗೆ ಚರ್ಚೆ ಏಕೆ ಎಂದು ಅನೇಕ ಸ್ಟಾರ್‍ ಹಿರೋಗಳು ಆಕೆಯ ತಂಟೆಗೆ ಹೋಗುವುದಿಲ್ಲ. ಅದು ಏನೆ ಆಗಿರಲಿ ಅಮಿತಾಭ್ ಮಾತ್ರ ಟ್ವೀಟ್ ಮಾಡಿದ್ದು, ಬಳಿಕ ಅದನ್ನು ಡಿಲೀಟ್ ಮಾಡಿದ್ದು ಯಾಕೆ ಎಂಬ ಕಾರಣ ಮಾತ್ರ ನಿಗೂಡವಾಗಿಯೇ ಉಳಿದಿದೆ.

- Advertisement -

You May Like

More