ಆದಿಪುರುಷ್ ಶೂಟಿಂಗ್: ಮೊದಲ ದಿನವೇ ಅಗ್ನಿ ಅವಘಡ!

ಮುಂಬೈ: ಬಹುನಿರೀಕ್ಷಿತ ಪೌರಾಣಿಕ ಕಥೆಯನ್ನ ಆಧರಿಸಿ ನಿರ್ಮಾಣ ಮಾಡಲಾಗುತ್ತಿರುವ ಬಾಹುಬಲಿ ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರದ ಶೂಟಿಂಗ್ ಕೆಲಸ ಪ್ರಾರಂಭವಾಗಿದ್ದು, ಶೂಟಿಂಗ್ ಪ್ರಾರಂಭವಾದ ಮೊದಲ ದಿನವೇ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಆದಿಪುರುಷ್ ಸಿನೆಮಾ ಶೂಟಿಂಗ್ ಕೆಲಸಗಳು ಭರದಿಂದ ಸಾಗಿದ್ದು, ಮುಂಬೈನ್ ಗೊರೆಗಾಂವ್ ಎಂಬ ಪ್ರದೇಶದಲ್ಲಿ ಚಿತ್ರದ ಶೂಟಿಂಗ್ ಗಾಗಿ ಸಿನೆಮಾ ಸೆಟ್ ನಿರ್ಮಾಣ ಮಾಡಲಾಗಿದ್ದು, ಈ ಸೆಟ್‌ನಲ್ಲಿ ಸುಮಾರು ೬೦ ಜನ ಹಾಜರಿದ್ದರು ಎನ್ನಲಾಗಿದೆ. ಶೂಟಿಂಗ್ ಕೆಲಸಗಳು ನಡೆಯುತ್ತಿದ್ದು ಸಂಜೆ ೪ ಗಂಟೆ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಮಾದ್ಯಮಗಳು ವರದಿ ಮಾಡಿದೆ.

ಸ್ಥಳೀಯ ಮಾದ್ಯಮಗಳ ವರದಿಗಳಂತೆ ಆದಿಪುರುಷ್ ಸೆಟ್‌ನ ಅಗ್ನಿ ಅವಘಡ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳು, ಜಂಬೋ ಟ್ಯಾಂಕರ್‌ಗಳು, ವಾಟರ್ ಟ್ಯಾಂಕರ್ ಹಾಗೂ ಜೆಸಿಬಿ ವಾಹನಗಳು ತೆರಳಿ ಬೆಂಕಿ ನಂದಿಸುವ ಕೆಲಸ ಮಾಡಿದೆ. ಇನ್ನೂ ಈ ಘಟನೆಯಲ್ಲಿ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎನ್ನಲಾಗಿದೆ.

ಮತ್ತೊಂದು ಪ್ರಮುಖ ವಿಚಾರವೆಂದರೇ ಆದಿಪುರುಷ್ ಶೂಟಿಂಗ್ ಸೆಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಚಿತ್ರದಲ್ಲಿ ನಟಿಸಲಿರುವ ನಟರಾದ ಪ್ರಭಾಸ್ ಹಾಗೂ ಸೈಫ್ ಅಲಿ ಖಾನ್ ಇರಲಿಲ್ಲ ಎಂದು ಚಿತ್ರತಂಡದ ಮೂಲಗಳು ತಿಳಿಸಿದೆ. ಆದರೆ ನಿರ್ದೇಶಕ ಓಂ ರಾವತ್ ಹಾಗೂ ನಟ ಸೂರ್ಯ ಸೆಟ್‌ನಲ್ಲಿದ್ದರಂತೆ. ಇನ್ನೂ ಚಿತ್ರತಂಡ ಅಧಿಕೃತವಾಗಿ ಮೂಹೂರ್ತ ಕಾರ್ಯಕ್ರಮ ನೆರವೇರಿಸಿ ಚಿತ್ರೀಕರಣ ಪ್ರಾರಂಭ ಮಾಡಲಾಗಿದೆ ಎಂದು ನಟ ಪ್ರಭಾಸ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಸಹ ಪೋಸ್ಟ್ ಮಾಡಿದ್ದರು.

Previous articleಅಲ್ಲು ಅರ್ಜುನ್ ಪುಷ್ಪ ಚಿತ್ರದ ಸಾಂಗ್ ಮೇಕಿಂಗ್ ವಿಡೀಯೊ ಲೀಕ್!
Next articleದೇವ್ರು ವರ ಕೊಟ್ರು, ಪೂಜಾರಿ ಕೊಡಲಿಲ್ಲ ಅಂದಂಗಾಯ್ತು ಚಿತ್ರಮಂದಿರಗಳ ಪಾಡು!