Film News

ಶೂಟಿಂಗ್ ವೇಳೆ ಅಗ್ನಿ ಅವಘಡ: ರಿಷಭ್ ಶೆಟ್ಟಿಗೆ ಬೆಂಕಿ!

ಬೆಂಗಳೂರು: ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ರಿಷಭ್ ಶೆಟ್ಟಿ ಅಭಿನಯದ ಹಿರೋ ಸಿನೆಮಾ ಶೂಟಿಂಗ್ ವೇಳೆ ಪೆಟ್ರೋಲ್ ಬಾಂಬ್ ಸಿಡಿದಿದ್ದು, ರಿಷಭ್ ಶೆಟ್ಟಿ ತಲೆಗೆ ಹಾಗೂ ಬೆನ್ನಿಗೆ ಬೆಂಕಿ ತಗುಲಿದೆ. ಅದೃಷ್ಟಾವಶತ್ ರಿಷಭ್ ಶೆಟ್ಟಿ ಪ್ರಾಣಾಪಯದಿಂದ ಪಾರಾಗಿದ್ದಾರೆ.

ಇನ್ನೂ ವಿಭಿನ್ನ ಪೋಸ್ಟರ್ ಮೂಲಕವೇ ಕುತೂಹಲ ಸೃಷ್ಟಿಸಿದ ರಿಷಭ್ ಶೆಟ್ಟಿ ಅಭಿನಯದ ಹಿರೋ ಸಿನೆಮಾದ ಶೂಟಿಂಗ್ ಕೆಲಸ ಹಾಸನದಲ್ಲಿ ನಡೆಯುತ್ತಿತ್ತು. ಈ ವೇಳೆ ಈ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಚಿತ್ರದಲ್ಲಿನ ದೃಶ್ಯವೊಂದಕ್ಕಾಗಿ ಪೆಟ್ರೋಲ್ ಬಾಂಬ್ ಸಿಡಿಸುವ ವೇಳೆಯಲ್ಲಿ ರಿಷಭ್ ಶೆಟ್ಟಿ ತಲೆಗೆ ಬೆಂಕಿ ತಗುಲಿದೆ. ಇದರಿಂದಾಗಿ ರಿಷಭ್ ಶೆಟ್ಟಿ ತಲೆಯಲ್ಲಿನ ಕೂದಲು ಸುಟ್ಟು ಹೋಗಿದೆ. ಜೊತೆಗೆ ಬೆನ್ನಿಗೆ ಸಹ ಗಾಯಗಳಾಗಿದೆ ಎನ್ನಲಾಗುತ್ತಿದೆ. ಇನ್ನೂ ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಇನ್ನೂ ರಿಷಭ್ ಶೆಟ್ಟ ಹಾಗೂ ಹಿರೋ ಚಿತ್ರತಂಡ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ಈ ವೇಳೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರೂ ಪ್ರಾಣಪಾಯವಾಗುತ್ತಿತ್ತು ಎನ್ನಲಾಗುತ್ತಿದೆ. ಇನ್ನೂ ಇಂತಹ ಅನೇಕ ಗಂಡಾಂತರಗಳಿಂದ ಹಿರೋ ಸಿನೆಮಾ ತಂಡ ತಪ್ಪಿಸಿಕೊಂಡು ಬಂದಿದ್ದು, ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

ಅಂದಹಾಗೆ ಹಿರೋ ಸಿನೆಮಾದ ಟ್ರೈಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ಟ್ರೈಲರ್ ಕಂಡ ಸಿನಿರಸಿಕರು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತಷ್ಟು ಹೆಚ್ಚಿಸಿಕೊಂಡಿದ್ದಾರೆ. ಜೊತೆಗೆ ಈ ಚಿತ್ರದ ಒಂದು ಸಾಂಗ್ ಸಹ ರಿಲೀಸ್ ಆಗಿದ್ದು, ಸಂಗೀತ ಪ್ರಿಯರನ್ನು ರಂಜಿಸುತ್ತಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಕಿರುತೆರೆ ನಟಿ ಗಾನವಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಮಾರ್ಚ್ 5ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ.

Trending

To Top