News

Filmfare Awards South 2019: ಅತ್ಯುತ್ತಮ ನಟ ಯಶ್, ನಟಿ ಮಾನ್ವಿತಾ ಕಾಮತ್

66ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಿನ್ನೆ (ಡಿಸೆಂಬರ್ 21) ಚೆನ್ನೈನಲ್ಲಿ ನಡೆದಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ.

ಕನ್ನಡದಲ್ಲಿ ಯಶ್ ‘ಕೆಜಿಎಫ್’ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅತ್ಯುತ್ತಮ ನಟಿ ಪ್ರಶಸ್ತಿ ಮಾನ್ವಿತಾ ಕಾಮತ್ ಗೆ ಸಿಕ್ಕಿದೆ. ‘ಕೆಜಿಎಫ್’ ಸಿನಿಮಾ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದೆ. 2018ರಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪೈಕಿ ‘ನಾತಿಚರಾಮಿ’ ಸಿನಿಮಾ 4 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ‘ಕೆಜಿಎಫ್’ ಹಾಗೂ ‘ಟಗರು’ ಸಿನಿಮಾಗೆ 2 ಪ್ರಶಸ್ತಿಗಳು ಬಂದಿವೆ.

ಈ ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಸಿನಿಮಾಗಳ ಪಟ್ಟಿ ಹೀಗಿದೆ..

ಅತ್ಯುತ್ತಮ ಸಿನಿಮಾ: ಕೆಜಿಎಫ್

ಅತ್ಯುತ್ತಮ ನಟ: ಯಶ್ (ಕೆಜಿಎಫ್)

ಅತ್ಯುತ್ತಮ ನಟಿ: ಮಾನ್ವಿತಾ ಕಾಮತ್ (ಟಗರು)

ನಾತಿಚರಾಮಿ
ಅತ್ಯುತ್ತಮ ನಟ, ನಟಿ (ಕ್ರಿಟಿಕ್ಸ್)

ಅತ್ಯುತ್ತಮ ನಿರ್ದೇಶಕ ಮಂಸೋರೆ (ನಾತಿಚರಾಮಿ)

ಅತ್ಯುತ್ತಮ ನಟ (ಕ್ರಿಟಿಕ್ಸ್): ಸತೀಶ್ ನೀನಾಸಂ (ಅಯೋಗ್ಯ)

ಅತ್ಯುತ್ತಮ ನಟಿ (ಕ್ರಿಟಿಕ್ಸ್): ಶ್ರುತಿ ಹರಿಹರನ್ (ನಾತಿಚರಾಮಿ)

ಅತ್ಯುತ್ತಮ ಪೋಷಕ ನಟ: ಧನಂಜಯ್ (ಟಗರು)

ಅತ್ಯುತ್ತಮ ಪೋಷಕ ನಟಿ: ಶರಣ್ಯ (ನಾತಿಚರಾಮಿ)

ಅತ್ಯುತ್ತಮ ಗಾಯಕ: ಸಂಚಿತ್ ಹೆಗ್ಡೆ- ಶಾಕುಂತ್ಲೇ ಸಿಕ್ಕಳು (ನಡುವೆ ಅಂತರವಿರಲಿ)

ಅತ್ಯುತ್ತಮ ಗಾಯಕಿ: ಬಿಂದುಮಾಲಿನಿ- ಭಾವಲೋಕದ (ನಾತಿಚರಾಮಿ)

ಅತ್ಯುತ್ತಮ ಸಾಹಿತ್ಯ: ಹೆಚ್ ಎಸ್ ವೆಂಕಟೇಶಮೂರ್ತಿ- ಸಕ್ಕರೆ ಪಾಕದಲ್ಲಿ (ಹಸಿರು ರಿಬ್ಬನ್)

ಅತ್ಯುತ್ತಮ ಮ್ಯೂಸಿಕ್ ಆಲ್ಬಂ: ವಾಸುಕಿ ವೈಭವ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು)

Trending

To Top