Karnataka

100 ವರ್ಷಗಳಿಂದ ಹೃದಯದಲ್ಲೇ ಅನ್ನ ಬೆಳೆಯುತ್ತಿರೋ ಕರುನಾಡ ಅನ್ನದಾತ! ಹೆಮ್ಮೆಯಿಂದ ಶೇರ್ ಮಾಡಿ

ಪ್ರಕೃತಿಗೆ ಬಹಳ ಹತ್ತಿರವಿರುವ ಊರು ಚಿಕ್ಕಮಗಳೂರು. ಇಲ್ಲಿನ ರಮ್ಯ ಸೊಬಗಿನ ಪ್ರಕೃತಿಯ ನೋಟವನ್ನು ಸವಿಯಲು ಕರ್ನಾಟಕದ ಜನರು ಮಾತ್ರವಲ್ಲದೆ, ಹೊರ ರಾಜ್ಯ ಹೊರದೇಶಗಳಿಂದಲೂ ಬರುತ್ತಾರೆ. ಸದಾ ಹಸಿರಿನಿಂದ ತುಂಬಿರುವ ಚಿಕ್ಕಮಗಳೂರು ಪ್ರವಾಸಿ ತಾಣ, ಇಲ್ಲಿ ಹಲವಾರು ಸಿನಿಮಾ ಶೂಟಿಂಗ್ ಗಳು ಸಹ ನಡೆದಿದೆ. ಚಿಕ್ಕಮಗಳೂರಿನಲ್ಲಿ ಸುಮಾರು ನೂರು ವರ್ಷಕ್ಕೂ ಹಿಂದಿನ ಕಾಲದಿಂದ ಒಂದು ಸುಂದರವಾದ ವಿಶೇಷವಾದ ತಾಣ ಇದೆ. ಈ ಜಾಗದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ, ಸೋಶಿಯಲ್ ಮೀಡಿಯಾದಲ್ಲಿ, ಇದರ ಫೋಟೋಗಳು ಹರಿದಾಡಿದ ಕ್ಷಣದಿಂದ ಈ ಜಾಗ ಪ್ರವಾಸಿ ತಾಣದಂತೆ ಆಗಿದೆ. ಹಲವಾರು ಜನರು ಬಂದು ಈ ಜಾಗವನ್ನು ವೀಕ್ಷಿಸುತ್ತಿದ್ದಾರೆ. ಸ್ಕ್ರೋಲ್ ಡೌನ್ ಮಾಡಿ ಇದರ ವಿಡಿಯೋ ನೋಡಿ
ಯಾವುದು ಈ ಜಾಗ ಎಂದು ಯೋಚನೆ ಮಾಡುತ್ತಿದ್ದೀರಾ, ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ, ಬಾದಾಮಿಗೊಂಡ ಗ್ರಾಮದ ರೈತ ಕೃಷ್ಣ ಅವರ ಗದ್ದೆ. ಇದರ ವಿಶೇಷತೆ ಏನೆಂದರೆ, 4 ಎಕರೆ ವಿಸ್ತೀರ್ಣವಿರುವ ಈ ಗದ್ದೆಯ ಮಧ್ಯಭಾಗದಲ್ಲಿ ಹೃದಯದ ಆಕಾರದಲ್ಲಿ ನೆಲ ಇದೆ, ಭೂದೇವಿಯ ಹೃದಯಭಾಗದಲ್ಲೇ ಅವರು ವರ್ಷಗಳಿಂದ ಭತ್ತವನ್ನು ಬೆಳೆಯುತ್ತಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ
ತಮ್ಮ ಗದ್ದೆಗೆ ಹೃದಯದ ಆಕಾರವನ್ನು ನೀಡಿರುವ ಇವರು ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿಲ್ಲ. ಹಿಂದಿನ ಕಾಲದಲ್ಲಿ ಟ್ರ್ಯಾಕ್ಟರ್, ಜೆಸಿಬಿ ಯಾವುದು ಇಲ್ಲದ ಸಮಯದಲ್ಲಿ ಎತ್ತಿನ ಹೆಗಲಿಗೆ ನೊಗ ಕಟ್ಟಿ ಗುಡ್ಡವನ್ನ ಸಮಮಾಡಿ ಮಾಡಿದ ಭತ್ತದ ಗದ್ದೆ ಇದಾಗಿದೆ. ಅಂದಿನಿಂದಲೂ ಇದನ್ನು ಹಾಗೇ ಬಿಟ್ಟಿದ್ದಾರೆ. ಅಲ್ಲೇ ಭತ್ತ ಬೆಳೆಯುತ್ತಿದ್ದಾರೆ. ಇದೀಗ ಈ ಜಾಗ ಪ್ರವಾಸಿ ತಾಣವಾಗಿದೆ. ಸುತ್ತಲೂ ಹಚ್ಚ ಹಸಿರು ಮಧ್ಯದಲಲ್ಲಿ ಗದ್ದೆ, ಗದ್ದೆಯ ಮಧ್ಯದಲ್ಲಿ ಹೃದಯ ಆಕಾರದ ಜಾಗ. ಈ ಜಾಗ ಜನಸಾಮಾನ್ಯರಿಗೆ ಆಕರ್ಷಕ ಕೇಂದ್ರ ಬಿಂದುವಾಗಿದೆ.
ವಿದೇಶಗಳಲ್ಲಿ ಇಂತಹ ಸ್ಥಳಗಳನ್ನು ನೋಡಿ ನಮ್ಮ ಜನ ಆಶ್ಚರ್ಯರಾಗುತ್ತಿದ್ದರು ಆದರೆ 100 ವರ್ಷಗಳ ಹಿಂದೆ ನಮ್ಮ ರೈತರೇ ಸೃಷ್ಟಿಸಿರೋ ಈ ಜಾಗ ನಮ್ಮ ಹೆಮ್ಮೆ. ಎರಡು ವರ್ಷದ ಹಿಂದೆ ಈ ಜಾಗದಲ್ಲಿ ಶೂಟಿಂಗ್ ಸಹ ನಡೆದಿತ್ತಂತೆ. ಈ ಬಗ್ಗೆ ಮಾತನಾಡಿದ ರೈತ ಕೃಷ್ಣ ಅವರು, ಎರಡು ವರ್ಷದ ಹಿಂದೆ ಶೂಟಿಂಗ್ ನಡೆದಿತ್ತು ಆದರೆ ಯಾವ ಸಿನಿಮಾ ಎಂಬುದು ನೆನಪಿಲ್ಲ ಎಂದಿದ್ದಾರೆ. ಹೃದಯದ ಆಕಾರದಲ್ಲಿರುವ ಈ ಗದ್ದೆ, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಜನಪ್ರಿಯತೆ ಪಡೆಯುವುದರಲ್ಲಿ ಸಂಶಯವಿಲ್ಲ.

Trending

To Top