Film News

ಅನುಷ್ಕಾ-ಕೊಯ್ಲಿ ಆತ್ಮೀಯತೆಯನ್ನು ಕೊಂಡಾಡಿದ ಕ್ರಿಕೆಟಿಗ!

ಮುಂಬೈ: ವಿರಾಟ್ ಕೊಯ್ಲಿ ಸ್ಟಾರ್ ಕ್ರಿಕೆಟಿಗ, ಈತನ ಪತ್ನಿ ಅನುಷ್ಕಾ ಶರ್ಮಾ ಖ್ಯಾತ ನಟಿ ಇವರಿಬ್ಬರೂ ಕೋಟಿ ಕೋಟಿ ಆದಾಯ ಗಳಿಸಿದರೂ ಕೂಡ ಅವರ ಮನೆಯಲ್ಲಿ ಮನೆಕೆಲಸದವರೇ ಇಲ್ಲ. ಅವರ ಮನೆಗೆ ಹೋದವರಿಗೆ ಅವರೇ ಆತ್ಮೀಯತೆಯಿಂದ ಉಪಚಾರ ಮಾಡುತ್ತಾರೆ ಎಂಬ ಮಾಹಿತಿಯನ್ನು ಮಾಜಿ ಭಾರತೀಯ ಕ್ರಿಕೆಟಿಗ ಸರಂದೀಪ್ ಸಿಂಗ್ ತಿಳಿಸಿದ್ದಾರೆ.

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ರವಲ್ಲಿನ ಆತ್ಮೀಯತೆಯ ಗುಣವನ್ನು ಮನಸಾರೆ ಹೊಗಳಿದ್ದಾರೆ ಸರಂದೀಪ್ ಸಿಂಗ್. ವಿರಾಟ್ ಹಾಗೂ ಅನುಷ್ಕಾ ಇಬ್ಬರಿಗೂ ಮಿಲಿಯನ್ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅವರ ಮನೆಯಲ್ಲಿ ಏನಾದರೂ ಸಮಾರಂಭಗಳಾಗಲೀ ಅಥವಾ ಕಾರ್ಯಕ್ರಮಗಳಾಗಲಿ ನಡೆದರೇ ಅವರ ಮನೆಗೆ ಬರುವಂತ ಅತಿಥಿಗಳಿಗೆ ಅವರೇ ಉಪಚಾರ ಮಾಡುತ್ತಾರೆ. ಊಟವನ್ನು ಬಡಿಸುತ್ತಾರೆ. ವಿರಾಟ್ ಕೊಯ್ಲಿ ಅಷ್ಟು ದೊಡ್ಡ ಮಟ್ಟಿಗೆ ಬೆಳೆದರೂ ಕೂಟ ಅವರಿಗೆ ಅಹಂಕಾರ ಎಂಬುದೇ ಇಲ್ಲ. ಎಲ್ಲರಿಗೂ ಸಮನಾದ ಗೌರವನ್ನು ವಿರಾಟ್ ಅನುಷ್ಕಾ ನೀಡುತ್ತಾರೆ ಎಂದಿದ್ದಾರೆ.

ಇನ್ನೂ ಇತ್ತೀಚಿಗಷ್ಟೆ ಅನುಷ್ಕಾ ಹಾಗೂ ವಿರಾಟ್ ದಂಪತಿಗೆ ಹೆಣ್ಣು ಮಗು ಜನನವಾಗಿದ್ದು, ತಮ್ಮ ಮಗಳಿಗೆ ವಾಮಿಕಾ ಎಂಬ ಹೆಸರನ್ನು ಸಹ ಇಟ್ಟಿದ್ದಾರೆ. ವಾಮಿಕಾ ಜನಿಸಿದಾಗಿನಿಂದ ಇಲ್ಲಿಯವರೆಗೂ ಸಾರ್ವಜನಿಕವಾಗಿ ಮಗಳ ಮುಖವನ್ನು ಯಾರಿಗೂ ತೋರಿಸಿಲ್ಲ. ಅಷ್ಟೇ ಅಲ್ಲದೇ ವಾಮಿಕಾಳನ್ನು ಬಣ್ಣದ ಲೋಕದಿಂದ ದೂರವಿಟ್ಟು ಸಂಸ್ಕಾರಯುತವಾಗಿ ಬೆಳೆಸುವುದಾಗಿಯೂ ಸಹ ವಿರಾಟ್ ಅನುಷ್ಕಾ ದಂಪತಿ ತಿಳಿಸಿದ್ದಾರೆ ಎನ್ನಲಾಗಿದೆ.

Trending

To Top