Film News

ತನ್ನ ನೆಚ್ಚಿನ ನಟನ ಸಿನಿಮಾ ಫ್ಲಾಪ್ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ…..

ಟಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ ಎಂದರೆ ಅದು ರಾಧೆ ಶ್ಯಾಮ್. ರಾಧೆ ಶ್ಯಾಮ್ ಸಿನಿಮಾದಲ್ಲಿ ನಟ ಪ್ರಭಾಸ್ ಹಾಗೂ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ರಿಲೀಸ್ ಆಗುವ ಮುನ್ನ ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಸೃಷ್ಟಿಸಿತ್ತು. ಮಾರ್ಚ್ 11 ರಂದು ರಾಧೆ ಶ್ಯಾಮ್ ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಿದೆ.

ರಾಧೆ ಶ್ಯಾಮ್ ಸಿನಿಮಾ ಬಿಡುಗಡೆಯಾದ ನಂತರ ಸಿನಿಮಾ ನೋಡಿದ ಅಭಿಮಾನಿಗಳು ಬೇಸರ ಮಾತುಗಳನ್ನ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ನಿರೀಕ್ಷೆಯನ್ನ ಮುಟ್ಟುವಲ್ಲಿ ಯಶಸ್ವಿಯಾಗಿಲ್ಲ ಪ್ರಭಾಸ್ ಅವರ ರಾಧೆ ಶ್ಯಾಮ್ ಸಿನಿಮಾ ಆದರೆ ಇದೀಗ ಈ ಕಾರಣಕ್ಕೆ ಪ್ರಭಾಸ್ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೌದು ಆಂಧ್ರಪ್ರದೇಶದ ಕರ್ನೂಲಿನ ಪ್ರಭಾಸ್ ಅಭಿಮಾನಿ ರವಿತೇಜ ಎಂಬ ಯುವಕ ಇದೀಗ ಪ್ರಭಾಸ್ ರಾಧೆ ಶ್ಯಾಮ್ ಸಿನಿಮಾದ ಬಗ್ಗೆ ಬ್ಯಾಡ್ ಕಾಮೆಂಟ್ಸ್ ಕೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮ್ಮ ಕುಟುಂಬಸ್ಥರು ಹಾಗೂ ಕೆಲವು ಸ್ನೇಹಿತರು ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಿದ ಮಾತುಗಳನ್ನು ಕೇಳಿದ ಯುವಕ ಡಿಪ್ರೆಷನ್ ಗೆ ಹೋಗಿ ನಂತರ ತನ್ನ ಮನೆಯಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.

Trending

To Top