Film News

ಡಿಸೆಂಬರ್ 21 ಕ್ಕೆ ಕೆಜಿಎಫ್-2 ತಂಡದಿಂದ ಸರ್ಪ್ರೈಸ್!

ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಕೆಜಿಎಫ್-2 ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಅಂತಿಮ ಹಂತದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು, ಡಿ.21 ರಂದು ಕೆಜಿಎಫ್-2 ಅಭಿಮಾನಿಗಳಿಗಾಗಿ ಚಿತ್ರ ತಂಡ ಒಂದು ಭರ್ಜರಿಯಾದ ಸುದ್ದಿಯನ್ನು ನೀಡಲಿದೆ.

ಈ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಲಿದೆ, ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದೆ. ಡಿಸೆಂಬರ್ 21 ರಂದು ಕೆಜಿಎಫ್-2 ಸಿನೆಮಾ ಕುರಿತಂತೆ ಮಹತ್ತರವಾದ ಅಪ್ಡೇಟ್ ಒಂದನ್ನು ನೀಡಲಿದ್ದೇವೆ ಎಂದು ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಡಿ.21 ರಂದೇ ಕೆಜಿಎಫ್-1 ಬಿಡುಗಡೆಯಾಗಿ ಸಿನಿರಂಗದಲ್ಲಿಯೇ ಇತಿಹಾಸ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಡಿ.21 ಚಿತ್ರತಂಡಕ್ಕೆ ಅತ್ಯಂತ ಮಹತ್ವವಾದ ದಿನವೆಂದು ಹೇಳಲಾಗುತ್ತಿದೆ. ಅದೇ ರೀತಿ ಕೆಜಿಎಫ್-2 ಚಿತ್ರದ ಪ್ರಮುಖ ಅಪ್ಡೇಟ್ ನ್ನು ಡಿ.21 ರಂದು ಬೆಳಿಗ್ಗೆ 10 ಗಂಟೆಗೆ ನಮ್ಮ ತಂಡದ ಎಲ್ಲಾ ಅಧಿಕೃತ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಸಿಗಲಿದೆ ಎಂದು ಪ್ರಶಾಂತ್ ನೀಲ್ ತಿಳಿಸಿದ್ದಾರೆ. ಕೆಜಿಎಫ್-2 ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಕೇಳಿಬರುತ್ತಿದೆ.

Trending

To Top