Film News

ಪ್ರತೀ ದಿನ ಸಂಜೆ ಮಾಸ್ಟರ್ ಚಿತ್ರತಂಡದಿಂದ ಅಭಿಮಾನಿಗಳಿಗೆ ಗಿಫ್ಟ್!

ಚೆನೈ: ಕೊರೋನಾ ಲಾಕ್ ಡೌನ್ ಬಳಿಕ ಬಿಡುಗಡೆಯಾಗುತ್ತಿರುವ ಬಿಗ್ ಬಜೆಟ್ ಸಿನೆಮಾ ಮಾಸ್ಟರ್ ಇದೇ ಜ.೧೩ ರಂದು ಬಿಡುಗಡೆಯಾಗಲಿದ್ದು, ಈ ಚಿತ್ರತಂಡದಿಂದ ಬಗೆ ಬಗೆಯ ಪೊ?ರಮೊಗಳನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ನೀಡಿದೆ.

ಕೊರೋನಾ ಲಾಕ್ ಡೌನ್ ಬಳಿಕ ಚಿತ್ರಮಂದಿರಗಳಲ್ಲಿ ಭಾರಿ ಬಜೆಟ್ ಚಿತ್ರಗಳನ್ನು ರಿಲೀಸ್ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದರು. ಇದಕ್ಕೆ ಕಾರಣ ಚಿತ್ರಮಂದಿರಗಳಿಗೆ ಶೇ.೫೦ ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶ ನೀಡಿದ್ದು, ಇದೀಗ ತಮಿಳುನಾಡು ಸರ್ಕಾರ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ಅವಕಾಶ ನೀಡಿದ್ದು, ಮೊದಲಿಗೆ ದಳಪತಿ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಬಿಡುಗಡೆಯಾಗಲಿದೆ.

ಈಗಾಗಲೇ ಬಹುಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಮಾಸ್ಟರ್ ಚಿತ್ರ ವಿಧ ವಿಧವಾದ ಪೊ?ಸ್ಟರ್ ಗಳನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇದೀಗ ಪ್ರತಿದಿನ ಸಂಜೆ ಮಾಸ್ಟರ್ ಚಿತ್ರದ ಪೊ?ರಮೊಗಳನ್ನು ಬಿಡುಗಡೆ ಮಾಡುವ ಕಾರ್ಯಕ್ಕೆ ಮುಂದಾದ ಚಿತ್ರತಂಡ ಮತಷ್ಟು ಅಭಿಮಾನಿಗಳನ್ನು ಸೇರಲು ಪ್ಲಾನ್ ಮಾಡಿದೆ. ಇನ್ನೂ ಈ ಪೊ?ರಮೊಗಳು ಸೊಶಿಯಲ್ ಮೀಡಿಯಾದಲ್ಲಿ ಭಾರಿ ಮಟ್ಟದಲ್ಲಿ ವೈರಲ್ ಆಗುತ್ತಿದೆ.

ಕೊರೋನಾ ಸೋಂಕು ಧಾಳಿಯಿಲ್ಲದೇ ಇದ್ದರೇ ಮಾಸ್ಟರ್ ಚಿತ್ರ ೨೦೨೦ನೇ ವರ್ಷದಲ್ಲಿಯೇ ಬಿಡುಗಡೆಯಾಗಬೇಕಿತ್ತು. ಜೊತೆ ಒಟಿಟಿಯಲ್ಲಿ ರಿಲೀಸ್ ಮಾಡಲು ಸಲಹೆ ಸಿಕ್ಕಿದ್ದರೂ ಕೂಡ ಅದಕ್ಕೆ ನಿರ್ಮಾಪಕರು ಒಪ್ಪಲಿಲ್ಲ. ಇದೀಗ ಮಾಸ್ಟರ್ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಜ.೧೩ ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Trending

To Top