Film News

ಸಾಲಭಾದೆಯಿಂದ ಮನೆ ಮಾರಿದ ನಿರ್ದೇಶಕ ದ್ವಾರಕೀಶ್?

ಬೆಂಗಳೂರು: ಕನ್ನಡ ಸಿನಿರಂಗದಲ್ಲಿ ದಶಕಗಳ ಕಾಲದಿಂದ ಪ್ರೇಕ್ಷಕರನ್ನು ರಂಜಿಸಿದ ಸಿನಿರಂಗದ ಕುಳ್ಳ ಎಂತಲೇ ಪ್ರಸಿದ್ದಿಯಾಗಿರುವ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಸಾಲಭಾದೆಯಿಂದಾಗಿ ತಮ್ಮ ಪ್ರೀತಿಯ ಮನೆಯನ್ನು ಮಾರಿದ್ದಾರೆ ಎನ್ನುವ ಸುದ್ದಿ ಚಂದನವನದಲ್ಲಿ ಹರಿದಾಡುತ್ತಿದೆ ಎನ್ನಲಾಗಿದೆ.

ನಿರ್ದೇಶಕ ದ್ವಾರಕೀಶ್ ರವರು 52 ವರ್ಷಗಳಲ್ಲಿ 52 ಸಿನೆಮಗಳನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಕೋಟಿ ಕೋಟಿ ಸಾಲ ಮಾಡಿ, ಸಾಲ ತೀರಿಸಲು ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ. ಸಾಲ ತೀರಿಸಲು ಅವರಿಗಿರುವ ಒಂದೇ ದಾರಿ ಅದು ತಮ್ಮ ಪ್ರೀತಿಯ ಮನೆ ಮಾರುವುದು. ಹೆಚ್.ಎಸ್.ಆರ್ ಲೇಔಟ್‌ನಲ್ಲಿರುವ ಮನೆಯನ್ನು ಸುಮಾರು 10.5 ಕೋಟಿಗೆ ಮಾರಾಟ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸುಮಾರು ವರ್ಷಗಳ ಕಾಲ ಚಿತ್ರರಂಗಕ್ಕಾಗಿ ದುಡಿದಿರುವ ದ್ವಾರಕೀಶ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಂಕಷ್ಟದಿಂದ ಪಾರಾಗಲು ತಮ್ಮ 13ನೇ ಮನೆಯನ್ನೂ ಸಹ ಮಾರಿದ್ದಾರೆ ಎನ್ನಲಾಗಿದೆ.

ಇನ್ನೂ ದ್ವಾರಕೀಶ್ ರವರ ಮನೆಯನ್ನು ಖರೀದಿಸಿದ್ದು ಸ್ಯಾಂಡಲ್‌ವುಡ್ ನಟ ರಿಷಭ್ ಶೆಟ್ಟಿ ಎಂದು ಹೇಳಲಾಗುತ್ತಿದೆ. ರಿಷಭ್ ಶೆಟ್ಟಿ ೧೦.೫ ಕೋಟಿ ಕೊಟ್ಟು ದ್ವಾರಕೀಶ್ ರವರ ಮನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಸಹ ದ್ವಾರಕೀಶ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಅವರ ಕೈ ಹಿಡಿಯುತ್ತಿದ್ದ ವ್ಯಕ್ತಿ ಸಾಹಸ ಸಿಂಹ ವಿಷ್ಣುವರ್ಧನ್. ಅನೇಕ ಬಾರಿ ವಿಷ್ಣುವರ್ಧನ್ ದ್ವಾರಕೀಶ್ ರವರಿಗೆ ಸಹಾಯ ಮಾಡಿದ್ದಾರೆ.

Trending

To Top