ಬಾಲಿವುಡ್ ನ ಹೆಸರಾಂತ ನಟ ಸಂಜಯ್ ದತ್ ಅವರು ಲಂಗ್ ಕ್ಯಾನ್ಸರ್ ಗೆ ತುತ್ತಾಗಿದ್ದು, ಶೀಘ್ರದಲ್ಲಿ ಅವರು ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದಾರೆ. ಲಾಕ್ ಡೌನ್ ಶುರುವಾಗುವ ಮುನ್ನ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದರು ಸಂಜಯ್ ದತ್. ಇದೀಗ, ಅವರು ಚುಕಿತ್ಸೆಗಾಗಿ ಅಮೆರಿಕಾಗೆ ತೆರಳಿದರೆ, ಅವರಿಲ್ಲದೆ ಸಿನಿಮಾ ಕೆಲಸಗಳು ನಡೆಯುವುದು ಅಸಾಧ್ಯವಾಗಿದೆ. ಸಂಜಯ್ ದತ್ ಅವರ ಮೇಲೆ ಬರೋಬ್ಬರಿ 735 ಕೋಟಿ ಹೂಡಿಕೆ ಮಾಡಿದೆ ಬಾಲಿವುಡ್. ಕೆಜಿಎಫ್2, ಸಡಕ್2, ಶಂಶೆರ್ ಸೇರಿದಂತೆ ಹಲವರು ಸಿನಿಮಾಗಳಲ್ಲಿ ಸಂಜಯ್ ನಟಿಸುತ್ತಿದ್ದು, ಇವೆಲ್ಲವೂ ವಿವಿಧ ಹಂತಗಳ ಚಿತ್ರೀಕರಣದಲ್ಲಿದೆ. ಸಂಜಯ್ ದತ್ ಅವರು ಅಮೆರಿಕಾದಿಂದ ಚಿಕಿತ್ಸೆ ಮುಗಿಸಿಕೊಂಡು ಬರುವವರೆಗೂ ಸಿನಿಮಾಗಳ ಚಿತ್ರೀಕರಣ ಸಂಪೂರ್ಣವಾಗುವುದು ಅಸಾಧ್ಯ.
ಕನ್ನಡದ ಕೆಜಿಎಫ್2 ಸಿನಿಮಾದಲ್ಲಿ ಸಂಜಯ್ ದತ್ ಅವರ ಶೂಟಿಂಗ್ 3 ದಿನಗಳ ಕಾಲ ಬಾಕಿ ಇದೆ. ಶಂಶೆರ್ ಹಿಂದಿ ಸಿನಿಮಾಗೆ 6 ದಿನಗಳ ಶೂಟಿಂಗ್ ಬಾಕಿ ಇದೆ, ಪೃಥ್ವಿರಾಜ್ ಸಿನಿಮಾದ ಬಹುತೇಕ ಶೂಟಿಂಗ್ ಬಾಕಿ ಉಳಿದಿದೆ. ಹಾಗೂ ಸಡಕ್2 ಸಿನಿಮಾದ ಡಬ್ಬಿಂಗ್ ಕೆಲಸ ಬಾಕಿ ಉಳಿದಿದೆ. ಇನ್ನುಳಿದಂತೆ ಭುಜ್:ದಿ ಪ್ರೈಡ್ ಆಫ್ ಇಂಡಿಯಾ ಮತ್ತು ತೋರ್ ಬಾಜ್ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಚಿಕಿತ್ಸೆಗಾಗಿ ಅಮೆರಿಕಾಗೆ ಹೊರಡುವ ಮೊದಲು, ಸಡಕ್2 ಸಿನಿಮಾದ ಡಬ್ಬಿಂಗ್ ಕೆಲಸವನ್ನು ಪೂರ್ಣಗೊಳಿಸಿ ನಂತರ ಚಿಕಿತ್ಸೆಗೆ ತೆರಳುವುದಾಗಿ ಮಾತು ಕೊಟ್ಟಿದ್ದಾರಂತೆ ಸಂಜಯ್ ದತ್