Film News

ತಾಯಿಗೆ ಗೋರಿ ಕಟ್ಟಿಸುತ್ತಿರುವ ನಟ ದುನಿಯಾ ವಿಜಯ್!

ಕಳೆದ ವಾರ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರ ತಾಯಿ ನಿಧನರಾದರು. ಈಗ ನಟ ದುನಿಯಾ ವಿಜಯ್ ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ವಿಜಯ್ ಅವರು ತಮ್ಮ ತಾಯಿಯನ್ನು ಉಳಿಸಿಕೊಳ್ಳಲು ಬಹಳ ಕಷ್ಟಪಟ್ಟರು. ಮನೆಯಲ್ಲಿಯೇ ತಾಯಿಗೆ ಟ್ರೀಟ್ಮೆಂಟ್ ಕೊಡಿಸುವ ವ್ಯವಸ್ಥೆ ಮಾಡಿದ್ದರು.

ವಿಜಯ್ ಅವರ ತಾಯಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು, ಕಳೆದ ವರ್ಷ ಅವರಿಗೆ ಕರೊನಾ ಸಹ ಪಾಸಿಟಿವ್ ಬಂದಿತ್ತು. ದುನಿಯಾ ವಿಜಯ್ ಅವರ ತಾಯಿಯ ಹೆಸರು ನಾರಾಯಣಮ್ಮ. ನಿಧನರಾದಾಗ ಅವರಿಗೆ 80 ವರ್ಷ ವಯಸ್ಸಾಗಿತ್ತು. ಬ್ರೇನ್ ಸ್ಟ್ರೋಕ್ ಆಗಿದ್ದ ಅವರನ್ನು ಉಳಿಸಿಕೊಳ್ಳಲು ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಸರಿ ಹೋಗಿಲ್ಲ.

ಆರೋಗ್ಯ ತೀವ್ರವಾಗಿ ಹದಗೆಟ್ಟು ಜುಲೈ 8ರಂದು ವಿಜಯ್ ಅವರ ತಾಯಿ ವಿಧಿವಶರಾದರು. ಈಗ ವಿಜಯ್ ಅವರು ತಮ್ಮ ತಾಯಿಗೆ ಗೋರಿ ಕಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಕ್ಯೂರಿಂಗ್ ಮಾಡುತ್ತಿದ್ದಾರೆ. ಇದರ ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

https://fb.watch/v/M5CN-DgD/

Trending

To Top