Saturday, May 21, 2022
HomeEntertainmentನಟ ದುನಿಯಾ ವಿಜಯ್ ತೆಲುಗು ಸಿನಿಮಾದಲ್ಲಿ ನಟಿಸಲು ಕಾರಣ ಏನು ಗೊತ್ತಾ?

ನಟ ದುನಿಯಾ ವಿಜಯ್ ತೆಲುಗು ಸಿನಿಮಾದಲ್ಲಿ ನಟಿಸಲು ಕಾರಣ ಏನು ಗೊತ್ತಾ?

ಸಲಗ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ಸ್ಯಾಂಡಲ್ ವುಡ್ ನ ಕರಿ ಚಿರತೆ ದುನಿಯಾ ವಿಜಯ್ ಅವರು ಇದೀಗ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ದುನಿಯಾ ವಿಜಯ್ ಅವರು ನಂದಮುರಿ ಬಾಲಕೃಷ್ಣ ಅವರ ಜೊತೆ ನಟನೆ ಮಾಡುವುದು ಕನ್ಫರ್ಮ್ ಆಗಿದೆ. ಈ ಹಿಂದೆ ಬಾಲಯ್ಯ ಜೊತೆ ವಿಜಯ್ ಅಭಿನಯಿಸುತ್ತಿದ್ದಾರ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

ಆದರೆ ಈ ಬಗ್ಗೆ ವಿಜಯ್ ಎಲ್ಲಿಯೂ ಕೂಡ ಬಹಿರಂಗ ಪಡಿಸಿರಲಿಲ್ಲ. ಆಸರೆ ಇದೀಗ ಚಿತ್ರತಂಡವೆ ಇದೀಗ ಅಧಿಕೃತ ಮಾಡಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗೋಪಿ ಚಂದ್ ಮಾಲನೆನಿ ಯಾಕ್ಷನ್ ಕಟ್ ಹೇಳಲ್ಲಿದ್ದಾರೆ. ವಿಜಯ್ ತೆರೆ ಅಂಚಿಕೊಳ್ಳುತ್ತಿರುವ ಬಾಲಯ್ಯ ಅವರ 107 ನೆ ಸಿನಿಮಾ,ಚಿತ್ರಕ್ಕೆ ಟೈಟಲ್ ಇಡಲಾಗಿಲ್ಲ ಆದರೆ ಚಿತ್ರಕ್ಕೆ ವಿಜಯ್ ತಮ್ಮ ಲುಕ್ ಅನ್ನ ಬದಲಾಯಿಸಿಕೊಂಡಿರುವುದು ವಿಶೇಷ.

ಈ ಹೊಸ ಲುಕ್ ನಲ್ಲಿ ಮಿಂಚುತ್ತಿದ್ದಾರೆ ವಿಜಯ್. ಆದರೆ ವಿಜಯ್ ಯಾವ ಪಾತ್ರ ಮಾಡುತ್ತಿದ್ದಾರೆ ಎನ್ನುವುದು ಮಾತ್ರ ತಿಳಿದುಬಂದಿಲ್ಲ. ನೈಜ್ಯ ಘಟನೆಗಳನ್ನ ಆಧರಿಸಿ ನಿರ್ದೇಶಕರು ಈ ಚಿತ್ರವನ್ನ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನ ನಿರ್ಮಾಣಿಸುತ್ತಿದೆ. ಈಗಾಗಲೇ ನಿರ್ದೇಶಕರು ಪೋಸ್ಟರ್ ಅನ್ನ ಬಿಡುಗಡೆ ಮಾಡಿ ವಿಜಯ್ ಅವರನ್ನ ಸ್ವಾಗತಿಸಿದ್ದಾರೆ.

- Advertisement -

You May Like

More