ಗೋವಾದಲ್ಲಿ ನಟ ದಿಗಂತ್ ಗೆ ಆಗಿದ್ದೇನು? ಆ ಅಪಘಾತ ನಡೆದಿದ್ದು ಆದರೂ ಹೇಗೆ?

ಸದ್ಯ ನಟ ದಿಗಂತ್ ರವರದ್ದೇ ಸುದ್ದಿ ಹರಿದಾಡುತ್ತಿದೆ. ಗೋವಾಗೆ ಕುಟುಂಬದೊಂದಿಗೆ ಪ್ರವಾಸ ಹೊರಟ್ಟಿದ್ದ ದಿಗಂತ್ ಬ್ಯಾಕ್ ಡೈವ್ ಹೊಡೆಯಲು ಹೋಗಿ ಆಯಾತಪ್ಪಿ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿತ್ತು. ಸಿನೆಮಾಗಳಲ್ಲಿ ಸಾಹಸ ದೃಶ್ಯಗಳಿಂದಲೇ ಅನೇಕ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ದಿಗಂತ್ ರವರಿಗೆ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ತುಂಬಾ ಇಷ್ಟವಂತೆ. ಅದಕ್ಕಾಗಿ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಅವರು ಫ್ಲಿಪ್ ಡೈವ್ ಹೊಡೆಯುವ ವಿಡಿಯೋಗಳನ್ನು ಶೇರ್‍ ಮಾಡುತ್ತಿರುತ್ತಾರೆ. ಇದೀಗ ಅದೇ ಕಾರಣದಿಂದ ಬ್ಯಾಕ್ ಫ್ಲಿಪ್ ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ನಟ ದಿಗಂತ್ ತಮ್ಮ ಕುಟುಂಬದೊಂದಿಗೆ ಗೋವಾಗೆ ಪ್ರಯಾಣ ಬೆಳೆಸಿದ್ದರು. ಪ್ರಯಾಣದ ಟ್ರೆಕ್ಕಿಂಗ್ ಸೇರಿದಂತೆ ಅನೇಕ ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಗೋವಾ ಬೀಚ್ ನಲ್ಲಿ ಸಖತ್ ಮೋಜು ಮಸ್ತಿ ಮಾಡಿದ್ದಾರೆ. ನಟ ದಿಗಂತ್ ಗೆ ಸಮುದ್ರದ ದಡದಲ್ಲಿ ಸಾಹಸ ಕ್ರೀಡೆಗಳನ್ನು ಮಾಡುವುದು ಎಂದರೇ ತುಂಬಾನೆ ಇಷ್ಟ. ಆದ್ದರಿಂದ ಸಮುದ್ರದ ತಟದಲ್ಲಿ ಫ್ಲಿಪ್ ಬ್ಯಾಕ್ ಮಾಡುತ್ತಿರುತ್ತಾರೆ. ಆದರೆ ದುರದೃಷ್ಟವಶಾತ್ ಆಯತಪ್ಪಿ ಕೆಳಗೆ ಬಿದ್ದು ದಿಗಂತ್ ರವರ ಕುತ್ತಿಗೆಗೆ ಹಾಗೂ ಬೆನ್ನು ಮೂಳೆಗೆ ತುಂಬಾ ಪೆಟ್ಟಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಏರ್‍ ಲಿಫ್ಟ್ ಮೂಲಕ ಬೆಂಗಳೂರಿಗೆ ಕೆರೆತರಲಾಗಿದೆ.

ಫ್ಲಿಪ್ ಮಾಡುವಾಗ ದಿಗಂತ್ ತಲೆಗೆ ತೀವ್ರ ಪೆಟ್ಟಾಗಿದೆ. ಕತ್ತಿನ ಮೂಳೆಗೆ ತೀವ್ರ ಪಟ್ಟಾಗಿದೆ. ಏರ್‍ ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಅನೇಕ ಬಾರಿ ಫ್ಲಿಪ್ ಬ್ಯಾಕ್ ಮಾಡುವ ಮೂಲಕ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದ್ದರು. ಆದರೆ ಇದೀಗ ಅದೇ ಸಾಹಸ ಮಾಡಲು ಹೋಗಿ ಆಸ್ಪತ್ರೆ ಸೇರುವಂತಾಗಿದೆ. ಇನ್ನೂ ನಟ ದಿಗಂತ್ ರನ್ನು ಏರ್‍ ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗಿದೆ. ದಿಗಂತ್ ರನ್ನು ಅವರ ಪತ್ನಿ ಐಂದ್ರಿತಾ ರೈ ಹಾಗೂ ಕುಟುಂಬಸ್ಥರು ಏರ್‍ ಆಂಬ್ಯುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ದಿಗಂತ್ ರವರನ್ನು ಗೋವಾದಿಂದ ಏರ್‍ ಅಂಬ್ಯುಲೆನ್ಸ್ ಮೂಲಕ HAL ಏರ್‍ ಪೋರ್ಟ್ ಗೆ ಕರೆತರಲಾಗಿತ್ತು. ಅಲ್ಲಿಂದ ನೇರವಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ನಟ ದಿಂಗತ್ ಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದ್ದು, ಅವರ ಗಾಯ ತುಂಬಾನೆ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ದಿಗಂತ್ ರ ಕುತ್ತಿಗೆ ಹಾಗೂ ಬೆನ್ನು ಮೂಳೆಗೂ ಸಹ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ದಿಗಂತ್ ರವರು ಈ ಘಟನೆಯಿಂದ ಮೃತಪಟ್ಟಿದ್ದಾರೆ ಎಂದು ಸುದ್ದಿ ಹರಿದಾಡಿದ್ದು, ಅವರ ಕುಟುಂಬಸ್ಥರು ಈ ಕುರಿತು ಪ್ರತಿಕ್ರಿಯೆ ನೀಡಿ ಯಾರು ಈ ಕುರಿತು ಆತಂಕ ಪಡುವ ಅಗತ್ಯವಿಲ್ಲ. ದಿಗಂತ್ ರವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.

Previous articleಮೊದಲ ಬಾರಿಗೆ ವಿಚ್ಚೇದನದ ಬಗ್ಗೆ ಮಾತನಾಡಿದ ಸ್ಯಾಮ್, ವಿಚ್ಚೇದನದ ಬಗ್ಗೆ ಒಪೆನ್ ಸ್ಟೇಟ್ ಮೆಂಟ್ ಕೊಟ್ರಾ ನಟಿ..!
Next articleಪ್ರಾಜೆಕ್ಟ್ ಕೆ ಶೂಟಿಂಗ್ ಮುಗಿಸಿ ಸ್ರೀಕೇಟ್ ಆಗಿ ಮುಂಬೈಗೆ ತೆರಳಿದ ದೀಪಿಕಾ..!