ಅಣ್ಣನನ್ನು ನೆನೆದು ಭಾವುಕರಾದ ಧ್ರುವ ಸರ್ಜಾ

ಬೆಂಗಳೂರು: ಕನ್ನಡ ಸಿನಿರಂಗದ ಬಹುನಿರೀಕ್ಷಿತ ಪೊಗರು ಚಿತ್ರತಂಡ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ, ಚಿತ್ರದ ನಾಯಕ ತಮ್ಮ ಸಹೋದರನನ್ನು ನೆನೆದು ಭಾವುಕರಾಗಿದ್ದಾರೆ. ಫೆ.೧೯ ರಂದು ಪೊಗರು ಚಿತ್ರ ತೆರೆಮೇಲೆ ಬರಲಿದ್ದು, ಈ ಸಂಬಂಧ ಪತ್ರಿಕಾಗೋಷ್ಟಿಯನ್ನು ಕರೆಯಲಾಗಿತ್ತು.

ಇನ್ನೂ ಈ ಪತ್ರಿಕಾಗೋಷ್ಟಿಯಲ್ಲಿ ಮಾತನಾಡದ ಧ್ರುವಾ ಚಿತ್ರದ ಬಿಡುಗಡೆ ಕುರಿತಂತೆ ಕೆಲವೊಂದು ಮಾಹಿತಿ ಹಂಚಿಕೊಂಡಿದ್ದಾರೆ. ಸಿನೆಮಾ ತಡವಾಗಲು ಕಾರಣದ ಬಗ್ಗೆ ತಿಳಿಸುತ್ತಾ ನಂಬಿಕೆ ಉಳಿಸಿಕೊಳ್ಳುವುದು ತುಂಭಾ ಕಷ್ಟ ಆದ್ದರಿಂದ ಈ ಚಿತ್ರವನ್ನು ಶ್ರಮಪಟ್ಟು ತೆಗೆಯಲಾಗಿದೆ ಆದ್ದರಿಂದ ತಡವಾಗಿದೆ ಎಂದು ಹೇಳಿದರು. ಇದೇ ವೇಳೆ ತಮ್ಮ ಅಣ್ಣನನ್ನು ನೆನೆದು ಭಾವುಕರಾಗಿದ್ದಾರೆ. ನನ್ನ ಅಣ್ಣ ಪೊಗರು ಎಡಿಟಿಂಗ್ ವೇಳೆ ಸಿನೆಮಾ ನೋಡಿದ್ದರು. ಈ ದೃಶ್ಯ ಜಾಸ್ತಿ ಇದೆ, ತೆಗೆಯಿರಿ, ಅದು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಹೇಳುತ್ತಿದ್ದ. ಎಲ್ಲಾ ಚಿತ್ರಗಳನ್ನು ಫಸ್ಟ್ ಡೇ ಫಸ್ಟ್ ಶೋ ನಾವಿಬ್ಬರು ಜೊತೆಯಲ್ಲಿ ನೋಡುತ್ತಿದ್ದೆವು. ಆದರೆ ಇದೀಗ ನನ್ನ ಅಣ್ಣ ಇಲ್ಲದ ಕೊರಗು ಕಾಡುತ್ತಿದೆ ಎಂದು ಭಾವುಕರಾಗಿದ್ದಾರೆ.

ಇನ್ನೂ ಈಗಾಗಲೇ ಟ್ರೈಲರ್, ಹಾಡುಗಳ ಮೂಲಕವೇ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿರುವ ಪೊಗರು ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಮುಖ್ಯವಾಗಿ ಪೊಗರು ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಕುರಿತಂತೆ ಸಿನೆಮಾ ಪ್ರಚಾರದಲ್ಲಿ ರಶ್ಮಿಕಾ ಗೈರು ಆಗಲಿದ್ದಾರೆ ಎಂದು ತಮ್ಮ ನಟನೆಯ ಸಿನೆಮಾಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಡೇಟ್ ನೀಡುವ ಅವರು ಪೊಗರು ಸಿನೆಮಾದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಸಿನೆಮಾ ನಿರ್ದೇಶಕ ನಂದ ಕಿಶೋರ್ ಸ್ಪಷ್ಟನೆ ನೀಡಿದ್ದು, ನಾವೆಲ್ಲಾ ರಶ್ಮಿಕಾ ಮಂದಣ್ಣ ಜೊತೆ ಸಂಪರ್ಕದಲ್ಲಿದ್ದು, ಸಿನೆಮಾ ಪ್ರಚಾರಕ್ಕೆ ಬರುತ್ತಾರೆ ಎಂದಿದ್ದಾರೆ.

Previous articleನಟ ಅಜಿತ್ ಹಾಗೂ ಮೈಕಲ್ ಜಾಕ್ಸನ್ ಪೊಟೋ ವೈರಲ್!
Next articleಟಾಪ್ ನಟಿಯೊಂದಿಗೆ ಗಾಯಕ ಸಂಜಿತ್ ಹೆಗ್ಡೆ ನ್ಯೂ ಮೂವಿ!