Film News

ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ ದೃಶ್ಯಂ-2!

ಹೈದರಾಬಾದ್: ಈ ಹಿಂದೆ ದೃಶ್ಯಂ-2 ಚಿತ್ರ ಹಲವು ಭಾಷೆಗಳಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಹೊಡೆದಿತ್ತು. ಇದೀಗ ಮಲಯಾಳಂ ನಲ್ಲಿ ದೃಶ್ಯಂ-೨ ಚಿತ್ರ ಅಮೇಜಾನ್ ಪ್ರೈಂ ನಲ್ಲಿ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಬೆನ್ನಲ್ಲೆ ತೆಲುಗು ಭಾಷೆಯಲ್ಲಿ ರಿಮೇಕ್ ಆಗಲು ಸಜ್ಜಾಗಿದೆ ಎನ್ನಲಾಗಿದೆ.

ಕಳೆದ 2013 ರಲ್ಲಿ ಬಿಡುಗಡೆಯಾದ ದೃಶ್ಯಂ ಚಿತ್ರ ಮೋಹನ್ ಲಾಲ್ ಹಾಗೂ ಜೀತು ಜೋಸೆಫ್ ನಿರ್ದೇಶನದಲ್ಲಿ ಮೂಡಿಬಂದಿತ್ತು. ಬಿಡುಗಡೆಯಾದ ಬಳಿಕ ಸೂಪರ್ ಡೂಪರ್ ಹಿಟ್ ಹೊಡೆದಿತ್ತು. ನಂತರ ಅತೀ ಹೆಚ್ಚು ಭಾಷೆಗೆ ರಿಮೇಕ್ ಆದ ಭಾರತದ ಸಿನೆಮಾ ಎಂಬ ಖ್ಯಾತಿಯನ್ನು ಸಹ ಗಳಿಸಿಕೊಂಡಿತ್ತು. ಇವರಿಬ್ಬರ ಕಾಂಬಿನೇಷನ್ ನಲ್ಲಿಯೇ ದೃಶ್ಯಂ-೨ ಚಿತ್ರ ಮಳಯಾಳಂ ಭಾಷೆಯಲ್ಲಿ ರಿಲೀಸ್ ಆಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನೂ ದೃಶ್ಯಂ ಚಿತ್ರವನ್ನು ಅದೇ ಹೆಸರಿನಲ್ಲಿ ತೆಲುಗು ಭಾಷೆಯಲ್ಲಿ ರಿಮೇಕ್ ಮಾಡಲಾಗಿತ್ತು. ಈ ಚಿತ್ರವನ್ನು ತೆಲುಗಿನಲ್ಲಿ ಶ್ರೀಪ್ರಿಯಾ ಎಂಬುವವರು ನಿರ್ದೇಶನ ಮಾಡಿದ್ದರು. ಇದೀಗ ದೃಶ್ಯಂ-೨ ಚಿತ್ರವನ್ನು ಜೀತು ಜೋಸೆಫ್ ರವರೆ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಈ ಚಿತ್ರದಲ್ಲೂ ಸಹ ಟಾಲಿವುಡ್ ಸ್ಟಾರ್ ವಿಕ್ಟರಿ ವೆಂಕಟೇಶ್ ರವರೇ ಅಭಿನಯಿಸಲಿದ್ದಾರೆ. ಜೊತೆಗೆ ಈಗಾಗಲೇ ಶೂಟಿಂಗ್‌ಗಾಗಿ ಲೊಕೇಶನ್ ಹುಡುಕಾಟದಲ್ಲಿ ಜೋಸೆಫ್ ನಿರತರಾಗಿದ್ದಾರಂತೆ. ಇನ್ನೂ ಮಾರ್ಚ್ ಮಾಹೆಯಲ್ಲಿ ಶೂಟಿಂಗ್ ಕೆಲಸಗಳು ಪ್ರಾರಂಭವಾಗಲಿದೆ ಎನ್ನಲಾಗಿದೆ.

ದೃಶ್ಯಂ ಮೊದಲ ಪಾರ್ಟ್ ಕನ್ನಡ, ತೆಲುಗು ತಮಿಳು, ಹಿಂದಿ, ಚೈನೀಸ್ ಭಾಷೆಗೂ ಸಹ ರಿಮೇಕ್ ಆಗಿತ್ತು. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಸಹ ಸೂಪರ್ ಹಿಟ್ ಹೊಡೆದಿತ್ತು. ಸದ್ಯ ಮಲಯಾಳಂನಲ್ಲಿ ಬಿಡುಗಡೆಯಾದ ದೃಶ್ಯಂ-೨ ಚಿತ್ರ ಸಹ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದ್ದು, ಹಿಟ್ ನತ್ತ ಮುನ್ನುಗ್ಗುತ್ತಿದೆ.

Trending

To Top