Film News

ಫೆ.8 ರಂದು ದೃಶ್ಯಂ-2 ಟ್ರೈಲರ್ ಬಿಡುಗಡೆ

ತಿರುವನಂತಪುರಂ: ಬಹುನಿರೀಕ್ಷಿತ ಚಿತ್ರ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ದೃಶ್ಯಂ-2 ಚಿತ್ರ ಇದೇ ಫೆ.8, 2021 ರಂದು ರಿಲೀಸ್ ಆಗಲಿದೆಯಂತೆ.

ದಕ್ಷಿಣ ಭಾರತದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ದೃಶ್ಯಂ-2 ಚಿತ್ರ ಟ್ರೈಲರ್ ಫೆ.೮ ರಂದು ಬಿಡುಗಡೆಯಾಗಲಿದ್ದು, ಈ ವಿಷಯವನ್ನು ನಟ ಮೋಹನ್ ಲಾಲ್ ರವರೇ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಬಹಿರಂಗ ಪಡಿಸಿದ್ದಾರೆ. ಇನ್ನೂ ಟ್ರೈಲರ್ ಬಿಡುಗಡೆಯ ದಿನವೇ ಚಿತ್ರದ ರಿಲೀಸ್ ದಿನಾಂಕವನ್ನು ಸಹ ಘೋಷಣೆ ಮಾಡಬಹುದೆಂದು ಹೇಳಲಾಗುತ್ತಿದೆ.

ಇನ್ನೂ ಈ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಸಿನೆಮಾ ಒಟಿಟಿಯಲ್ಲಿ ಬಿಡುಗಡೆಯಾಗುವುದ ಬಹುತೇಕ ಖಚಿತವಾಗಿದೆ. ಇದು ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯಾದರೂ ಕೂಡ ಆದಷ್ಟು ಬೇಗ ದೃಶ್ಯಂ ಚಿತ್ರವನ್ನು ನೋಡಬಹುದಾಗಿದೆ.

ದೃಶ್ಯ-2 ಚಿತ್ರವನ್ನು ನಿರ್ದೇಶಿಸಿದ್ದ ಜಿತು ಜೋಸೆಫ್ ರವರೇ ದೃಶ್ಯಂ-2 ಚಿತ್ರವನ್ನೂ ಸಹ ನಿರ್ದೇಶನ ಮಾಡಿದ್ದು, ಮೊದಲ ಭಾಗದಲ್ಲಿನ ಪಾತ್ರಗಳೂ ಸಹ ಈ ಚಿತ್ರದಲ್ಲಿ ಮುಂದುವರೆದಿವೆ ಅಂತೆ. ನಾಯಕನಾಗಿ ಮೋಹನ್ ಲಾಲ್ ಹಾಗೂ ನಾಯಕಿಯಾಗಿ ಮೀನಾ ನಟಿಸಿದ್ದು, ಇವರ ಮಕ್ಕಳ ಪಾತ್ರದಲ್ಲಿ ಎಸ್ತರ್ ಅನೀಲ್ ಮತ್ತು ಅನ್ಸಿಬಾ ಹಸನ್ ನಟಿಸಿದ್ದಾರೆ. ಜೊತೆಗೆ ಮೋಹನ್ ಲಾಲ್ ನಟನೆಯ ಮರಕ್ಕರ್ ಸಿನೆಮಾ ಕೂಡ ಬಿಡುಗಡೆಗೆ ಸಿದ್ದವಾಗಿದ್ದು, ಈ ಚಿತ್ರದಲ್ಲಿ ಖ್ಯಾತ ಕಲಾವಿದರಾದ ಕೀರ್ತಿ ಸುರೇಶ್, ಅರ್ಜುನ್ ಸರ್ಜಾ, ಮಂಜು ವಾರಿಯರ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.

Trending

To Top