News

(video)ಸಿದ್ದಗಂಗಾ ಶ್ರೀಗಳ ಚರಿತ್ರೆ ಬಗ್ಗೆ ಮಕ್ಕಳು ಮಾಡಿದ ಅದ್ಭುತ ದ್ರಾಮ! ನೋಡಿದ್ರೆ ಕಣ್ಣೀರು ಬರುತ್ತೆ

aa

ನಮ್ಮ ಕರುನಾಡ ಹೆಮ್ಮೆ, ನಡೆದಾಡುವ ದೇವರು ಎಂದೇ ಪ್ರಸಿದ್ಧ ವಾಗಿದ್ದ ತುಮಕೂರಿನ ಸಿದ್ದಗಂಗಾ ಶಿವಕುಮಾರ ಶ್ರೀಗಳು ಸುಮಾರು 15 ದಿನಗಳ ಕೆಳಗೆ ಲಿಂಗೈಕ್ಯ ರಾದರು. ಸಿದ್ದಗಂಗಾ ಶ್ರೀಗಳು ಮಾಡಿರುವ ಅದ್ಭುತ ಕೆಲಸಗಳು ಒಂದಾ ಎರಡಾ? ಪ್ರತಿ ದಿನ ಸುಮಾರು 1 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ಉಚಿತವಾಗಿ ವಸತಿ ಹಾಗು ಉಚಿತವಾಗಿ ಊಟವನ್ನು ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲದಿಂದ ಕೊಡುತ್ತಾ ಬಂದಿದ್ದರು. ಇದಲ್ಲದೆ ಬಹಳಷ್ಟು ಬಡ ಮಕ್ಕಳಿಗೆ ತಮ್ಮ ಜೀವನವನ್ನು ರೂಪಿಸಕೊಳ್ಳಲು ಸಹಾಯ ಮಾಡುತ್ತಿದ್ದರು. ಈಗ ಝೀ ಕನ್ನಡದಲ್ಲಿ ಬರುವ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋನಲ್ಲಿ ಮಕ್ಕಳು ಶ್ರೀಗಳ ಕುರಿತಾಗಿ ಒಂದು ಅದ್ಭುತ ನಾಟಕವನ್ನು ಮಾಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ! ಮಕ್ಕಳ ಈ ನಟನೆ ನೋಡಿದ್ರೆ ಕಣ್ಣೀರು ಬರುತ್ತದೆ! ಈ ಕೆಳಗಿನ ವಿಡಿಯೋ ನೀವು ನೋಡಲೇಬೇಕು
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕರುನಾಡ ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾಗಿ ನೆನ್ನೆಗೆ 11 ದಿನ ಕಳೆದವು. ಈ ಸಮಯದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನರಿಗೆ ಮಠದಲ್ಲಿ ಅನ್ನ ದಾನವನ್ನು ಇಟ್ಟುಕೊಂಡಿದ್ದರು. ಸುಮಾರು 3 ಲಕ್ಷಕ್ಕೂ ಹೆಚ್ಚು ಜನರಿಗೆ ಕುದ್ದು ಮಠದ ಮಕ್ಕಳೇ, ಊಟವನ್ನು ಬಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರ ರಾಗಿದ್ದಾರೆ! ಕೆಲವು ದಿನಗಳ ಹಿಂದೆ ಒಬ್ಬರು ಊಟ ವೇಸ್ಟ್ ಮಾಡುವಾಗ ಮಠದ ಮಕ್ಕಳು ಆತನಿಗೆ ಬೈದು ಊಟವನ್ನು ವೇಸ್ಟ್ ಮಾಡಬೇಡಿ ಎಂದು ಕ್ಲಾಸ್ ತಗೊಂಡಿದ್ದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ಏನೇ ಆಗಲಿ! ನಮ್ಮ ಸಿದ್ದಗಂಗಾ ಮಠಕ್ಕೆ ಮಕ್ಕಳೇ ಆಸ್ತಿ ಎಂದು ಹೇಳಿದರೆ ತಪ್ಪಾಗಲಾರದು. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ವಾರವಷ್ಟೇ ನಮ್ಮ ಕರುನಾಡ ನಡೆದಾಡುವ ದೇವರು ಎಂದೇ ಪ್ರಖ್ಯಾತಿ ಆಗಿದ್ದ, ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯ ರಾದರು. ಈ ಸುದ್ದಿಯನ್ನು ಕೇಳಿ ಇಡೀ ಕರ್ನಾಟಕವೇ ಕಣ್ಣೀರಿಟ್ಟಿತು. ಕಳೆದವಾರವಷ್ಟೇ ಶ್ರೀಗಳನ್ನು ಮಠದ ಆವರಣದಲ್ಲಿ ಅಂತಿಮ ಸಂಸ್ಕಾರವನ್ನು ಮಾಡಲಾಯಿತು. ಈಗ ಸ್ವಾಮಿಗಳ ಬಗ್ಗೆ ಮತ್ತೊಂದು ಸ್ಪೋಟಕ ಸುದ್ದಿ ಹೊರ ಬಿದ್ದಿದೆ! ಇಂತಹ ನಡೆದಾಡುವ ದೇವರಿಗೆ ತಾವು ಲಿಂಗೈಖ್ಯೆ ಆಗುವ 6 ತಿಂಗಳ ಹಿಂದೆ ಈ ವಿಷ್ಯ ಗೊತ್ತಿತ್ತಾ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಇದಕ್ಕೆ ಕಾರಣ ಬಾಗಲಕೋಟೆಯ ವಿಭೂತಿ ತಯಾರಿಕರ ಆ ಒಂದು ಹೇಳಿಕೆ! ನಮ್ಮ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಪ್ರತಿ ವರ್ಷ ಕೂಡ ಬಾಗಲಕೋಟೆ ಅಲ್ಲಿರುವ ವಿಭೂತಿ ತಯಾರಿಕರ ಹತ್ತಿರ ವಿಭೂತಿಗಳಿರುವ ಮೂಟೆ ಗಳನ್ನೂ ತರಿಸಿ ಕೊಳ್ಳುತ್ತಿದ್ದರು. ಮೊನ್ನೆ ನಮ್ಮ ಶ್ರೀಗಳು ಲೈಂಗೈಕ್ಯ ಆದ ನಂತರ ಬಾಗಲಕೋಟೆಯ ವಿಭೂತಿ ತಯಾರಿಕರು ಕೊಟ್ಟರು ಒಂದು ಸ್ಪೋಟಕ ಹೇಳಿಕೆ! ಅವರು ಏನ್ ಹೇಳಿದ್ದಾರೆ ಗೊತ್ತ “ಸಿದ್ದಗಂಗಾ ಶ್ರೀಗಳು, ಆರು ತಿಂಗಳ ಹಿಂದೆ ಅಷ್ಟೇ ನಮ್ಮನ್ನು, ಮಠಕ್ಕೆ ಕರೆಸಿಕೊಂಡಿದ್ದರು, ನಮಗೆ ಶ್ರೀಗಳು 2 ಸಾವಿರ ಕ್ರಿಯಾ ಗಟ್ಟಿ, 8000 ವಿಭೂತಿ ಘಟ್ಟಿ ಗಳನ್ನೂ ತಯಾರಿಸಿ ಇಟ್ಟಿರಿ, ಎಂದು ಶ್ರೀಗಳು ನಮಗೆ ಹೇಳಿದ್ದರು, ನಾವು ಯಾಕೆ ಬುದ್ದಿ ಇಷ್ಟೊಂದು ಅಂತ ಕೇಳಿದಾಗ, ಅದು ಮಠದ ಕೆಲಸಗಳಿಗೆ ಬೇಕು” ಎಂದು ಶ್ರೀಗಳು ಹೇಳಿದ್ದರು. ಇದಲ್ಲದೆ ಇದನೆಲ್ಲ ಶುದ್ಧ ದೇಸಿ ಹಸುವಿನ ಸಗಣಿ ಇಂದ ತಯಾರಿಸಿ ಎಂದು ಶ್ರೀಗಳು ಇವರು ಹೇಳಿದ್ದರು.
ಈ ಸುದ್ದಿ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯ ರಾದ ನಂತರ ಎಲ್ಲರಿಗೂ ತಿಳಿದು ಬಂದಿದೆ. ಈ ವಿಷ್ಯ ಕೇಳಿ ಮಠದ ಭಕ್ತರಿಗೆ ಶಾಕ್ ಆಗಿದೆ. ನಮ್ಮ ಶ್ರೀಗಳಿಗೆ ತಾವು ಲಿಂಗೈಕ್ಯ ರಾಗುವ ಸುದ್ದಿ ಮುಂಚೆಯೇ ಗೊತ್ತಿತ್ತಾ? ಎಂದು ಎಲ್ಲಾರು ಮಾತಾಡುತ್ತಿದ್ದಾರೆ. ಇನ್ನೊಂದು ಕಡೆ ಸಿದ್ದಗಂಗಾ ಮಠದ ಒಂದು ಶ್ವಾನ ಕೂಡ ಶ್ರೀಗಳು ಲಿಂಗೈಕ್ಯ ಆದಾಗಿನಿಂದ ಕಾಣಿಸುತ್ತಿಲ್ಲ! ಶ್ರೀಗಳಿಗೆ ಈ ಶ್ವಾನ ಎಂದರೆ ಬಹಳ ಪ್ರೀತಿ ಇತ್ತು, ಆ ಶ್ವಾನಕ್ಕೆ ಯಾವಾಗಲು ಶ್ರೀಗಳು ತಿನಲ್ಲಿಕ್ಕೆ ಊಟವನ್ನು ಹಾಕುತ್ತಿದ್ದರು. ಈ ಎಲ್ಲಾ ಸುದ್ದಿ ಗಳನ್ನೂ ಕೇಳಿ, ಶ್ರೀಗಳು ನಿಜವಾಗಿಯೂ ಒಬ್ಬ ಪವಾಡ ಪುರುಷರು ಎಂದು ಗೊತ್ತಾಗುತ್ತದೆ. ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ! ನಮ್ಮ ಕರುನಾಡ ಹೆಮ್ಮೆ, ನಡೆದಾಡುವ ದೇವರು ಎಂದೇ ಹೆಸರು ವಾಸಿ ಆಗಿರುವ ತುಮಕೂರಿನ ಸಿದ್ದಗಂಗಾ ಶ್ರೀಗಳು ನೆನ್ನೆ ಲಿಂಗೈಕ್ಯ ರಾಗಿದ್ದಾರೆ. 112 ವರ್ಷ ಸಿದ್ದಗಂಗಾ ಶ್ರೀಗಳು ಕೆಲವು ದಿನಗಳಿಂದ ತಮ್ಮ ಅನಾರೋಗ್ಯ ದಿಂದ ಬಳಲುತ್ತಿದ್ದರು. ಕಳೆದ ವರ್ಷ ಜಿ ಕನ್ನಡ ವಾಹಿನಿ ಯಲ್ಲಿ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮದಲ್ಲಿ ನಮ್ಮ ತುಮಕೂರಿನ ಸಿದ್ದಗಂಗಾ ಶ್ರೀಗಳನ್ನು ಕಳೆದ ಸಾಲಿನ ಹೆಮ್ಮೆಯ ಕನ್ನಡಿಗ ಎಂದು ಪರಿಗಣಿಸಲಾಗಿತ್ತು. ನಮ್ಮ ಶ್ರೀಗಳ ಬಗ್ಗೆ ಒಂದು ಅದ್ಭುತ ವಿಡಿಯೋವನ್ನು ಜಿ ಕನ್ನಡದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟರಾದ ಯಶ್, ಪುನೀತ್, ಸುದೀಪ್, ರವಿಚಂದ್ರನ್, ಜಗ್ಗೇಶ್ ಇನ್ನು ಹಲವಾರು ನಟರು ಬಂದಿದ್ದರು, ಈ ಅದ್ಭುತ ವಿಡಿಯೋವನ್ನು ನೀವು ನೋಡಲೇಬೇಕು, ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ನಮ್ಮ ಕರುನಾಡ ನಡೆದಾಡುವ ದೇವರು ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ನಿಧನ ಹೊಂದಿದ್ದರು. ಶ್ರೀಗಳ ಅಂತಿಮ ಸಂಸ್ಕಾರ ಇಂದು ತುಮಕೂರು ನಲ್ಲಿಯೇ ನಡೆಯಲಿದೆ. ಶ್ರೀಗಳ ಅಂತಿಮ ದರ್ಶನವನ್ನು ಪಡೆಯಲು ಕನ್ನಡ ಚಿತ್ರ ರಂಗದ ನಟರು ಹಾಗು ಕಲಾವಿದರು ತುಮಕೂರಿಗೆ ಬಂದಿದ್ದಾರೆ. ಕನ್ನಡ ನಟರಾದ ದರ್ಶನ್, ಜಗ್ಗೇಶ್, ಪುನೀತ್ ರಾಜಕುಮಾರ್, ಶಿವಣ್ಣ, ಯಶ್, ಉಪೇಂದ್ರ ಅವರು ಕೂಡ ಬಂದಿದ್ದಾರೆ. ಇಂದು ಶ್ರೀಗಳ ಅಂತಿಮ ದರ್ಶನ ಪಡೆದ ನವರಸ ನಾಯಕ ಜಗ್ಗೇಶ್ ಅವರು ಮಾಧ್ಯಮದವರ ಜೊತೆ ಶ್ರೀಗಳ ಬಗ್ಗೆ ಭಾವುಕರಾಗಿ ಮಾತಾಡಿದ್ದಾರೆ, ಜಗ್ಗೇಶ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ

Trending

To Top