ಡಿಜೆ ಟಿಲ್ಲು-2 ಸಿನೆಮಾದಲ್ಲಿ ನಟಿಯಾಗಿ ಆಕೆಯೇ ಬೇಕಂತೆ, ನಟ ಸಿದ್ದು ಸಹ ಆ ನಟಿಯನ್ನೆ ಆಯ್ಕೆ ಮಾಡಿ ಎಂದಿದ್ದಾರಂತೆ…!

ಸಿನಿರಂಗದಲ್ಲಿ ಕೆಲವೊಂದು ಸಿನೆಮಾಗಳು ಹೆಚ್ಚು ಬಜೆಟ್ ಸಿನೆಮಾ ಆಗದೇ ಇದ್ದರೂ ಸಹ ದೊಡ್ಡ ಮಟ್ಟದಲ್ಲೇ ಸಕ್ಸಸ್ ಕಂಡುಕೊಳ್ಳುತ್ತದೆ. ಈ ಸಾಲಿನಲ್ಲಿ ತೆಲುಗು ಯಂಗ್ ನಟ ಸಿದ್ದು ಜೊನ್ನಲಗಡ್ಡ ಅಭಿನಯದ ಡಿಜೆ ಟಿಲ್ಲು ಸಿನೆಮಾ ಸಹ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದು, ಬಾಕ್ಸ್‌ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿತ್ತು. ಇನ್ನೂ ಇದೀಗ ಈ ಸಿನೆಮಾದ ಸೀಕ್ವೆಲ್ ಸಹ ಘೋಷಣೆಯಾಗಿದ್ದು, ಈ ಸಿನೆಮಾದಲ್ಲಿ ನಟಿಯ ಆಯ್ಕೆ ಕುರಿತಂತೆ ಅನೇಕ ಸುದ್ದಿಗಳು ಹರಿದಾಡಿದ್ದವು. ಇದೀಗ ಆ ನಟಿಯನ್ನೇ ಫೈನಲ್ ಮಾಡಬೇಕೆಂದು ಚಿತ್ರತಂಡ ಹಾಗೂ ನಟ ಸಿದ್ದು ಸಹ ಹೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕೇವಲ ನಾಲ್ಕು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನೆಮಾ ಭಾರಿ ಕಲೆಕ್ಷನ್ ಮಾಡಿತ್ತು. ಯಾರೂ ಊಹಿಸಿದ ಮಾದರಿಲ್ಲಿ ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆಯಿತು. ನಟ ಸಿದ್ದು ಜೊನ್ನಲಗಡ್ಡ ನಟನಾಗಿ ಬರಹಗಾರನಾಗಿ ಈ ಸಿನೆಮಾವನ್ನು ವಿಮಲ್ ಕೃಷ್ಣ ನಿರ್ದೇಶನದಲ್ಲಿ, ಯಂಗ್ ಪ್ರೊಡ್ಯುಸರ್‍ ಸೂರ್ಯದೇವರ ನಾಗವಂಶಿ ನಿರ್ಮಾಣ ಮಾಡಿದ್ದಾರೆ. ಈ ಸಿನೆಮಾದ ಸೀಕ್ವೆಲ್ ಸಹ ಮಾಡಬೇಕೆಂದು ಚಿತ್ರತಂಡ ಪ್ಲಾನ್ ಮಾಡಿದೆ. ಡಿಜೆ ಟಿಲ್ಲು-2 ಸಿನೆಮಾವನ್ನು ತೆರೆಗೆ ತರಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಡಿಜೆ ಟಿಲ್ಲು-2 ಸಿನೆಮಾವನ್ನು ಮಲ್ಲಿಕ್ ರಾಮ್ ನಿರ್ದೇಶನ ಮಾಡಲಿದ್ದಾರೆ. ಈ ಸಿನೆಮಾದಲ್ಲಿ ನಟಿಯಾಗಿ ಅನುಪಮ ಪರಮೇಶ್ವರನ್ ರವರನ್ನು ಆಯ್ಕೆ ಮಾಡಲಾಗಿತ್ತು.  ಶೂಟಿಂಗ್ ಸಹ ಶುರುವಾಗಿತ್ತು. ಆದರೆ ಏನಾಯಿತೋ ತಿಳಿಯದು ಅನುಪಮಾ ಈ ಸಿನೆಮಾದಿಂದ ಹೊರಬಂದರು. ಈ ಬಗ್ಗೆ ನಟಿ ಅನುಪಮಾ ಸಹ ಟಿಜೆ-2 ಸಿನೆಮಾದಿಂದ ಹೊರಬಂದಿದ್ದಾಗಿ ಕ್ಲಾರಿಟಿ ಕೊಟ್ಟರು.

ಬಳಿಕ ನಟಿಗಾಗಿ ಚಿತ್ರತಂಡ ತುಂಬಾ ಹುಡುಕಾಟ ನಡೆಸಿತ್ತು. ಬಳಿಕ ಪ್ರೇಮಂ ಖ್ಯಾತಿಯ ಮಡೊನ್ನಾ ಸೆಬಾಸ್ಟಿಯನ್ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಸಹ ಬಂತು. ಬಳಿಕ ಆಕೆಯ ಲುಕ್ ಪರೀಕ್ಷೆ ಮಾಡಿದ ಬಳಿಕ ಆ ಕ್ಯಾರೆಕ್ಟರ್‍ ಆಕೆಗೆ ಸೆಟ್ ಆಗಲ್ಲ ಎಂದು ಮೇಕರ್ಸ್ ಆಕೆಯನ್ನು ಸಹ ರಿಜೆಕ್ಟ್ ಮಾಡಿದ್ದರಂತೆ. ಬಳಿಕ ಮೀನಾಕ್ಷಿ ದೀಕ್ಷಿತ್ ರವರನ್ನು ಕರೆತರಲು ಚಿತ್ರತಂಡ ಪ್ರಯತ್ನ ಮಾಡಿದೆ. ಬಳಿಕ ಅದೂ ಸಹ ಕೇವಲ ಗಾಳಿ ಸುದ್ದಿ ಎಂದು ತಿಳಿಯಿತು. ಬಳಿಕ ಕೊನೆಯದಾಗಿ ಆ ಪಾತ್ರಕ್ಕೆ ಅನುಪಮಾ ಪರಮೇಶ್ವರನ್ ರವರೇ ಪಕ್ಕಾ ಸ್ಯೂಟ್ ಆಗುತ್ತಾರೆ ಎಂದು ನಟ ಸಿದ್ದು ಜೊನ್ನಲಗಡ್ಡ ಜೊತೆಗೆ ಚಿತ್ರತಂಡ ಸಹ ಭಾವಿಸಿದ್ದಾರಂತೆ.

ಇನ್ನೂ ನಟಿ ಅನುಪಮಾ ಯಾವ ಕಾರಣದಿಂದ ಸಿನೆಮಾದಿಂದ ಹೊರನಡೆದರೋ ತಿಳಿಯದು. ಆದರೆ ಅನುಪಮಾ ರವರನ್ನೇ ಈ ಸಿನೆಮಾದಲ್ಲಿ ಕರೆತರಲು ಪ್ಲಾನ್ ಮಾಡಿದ್ದಾರಂತೆ. ಸದ್ಯ ಅನುಪಮಾ ಮತ್ತೆ ಸಿನೆಮಾಗೆ ಎಂಟ್ರಿ ಕೊಡಲಿದ್ದಾರಾ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

Previous articleಮಯೋಸೈಟಿಸ್ ಕಾರಣದಿಂದ ದೊಡ್ಡ ಪ್ರಾಜೆಕ್ಟ್ ನಿಂದ ಹೊರಬಂದ್ರೆ ಸಮಂತಾ?
Next articleಜಿರೋ ಸೈಜ್ ಸೊಂಟದ ಸೌಂದರ್ಯ ಶೋ ಮಾಡಿದ ಬ್ಯೂಟಿ, ವೈರಲ್ ಆದ ಹಾಟ್ ಬ್ಯೂಟಿ ಅನನ್ಯಾ ಪೊಟೋಸ್….!