ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ದಿವ್ಯ ಉರುಡುಗ!

ಬಿಗ್ ಬಾಸ್ ಮನೆ ಹೊಕ್ಕಿ ಕಿರುತೆರೆಯಲ್ಲಿ ಸಡ್ಡು ಮಾಡಿದ ದಿವ್ಯ ಉರುಡುಗ. ಬಿಗ್ ಬಾಸ್ ನ ಟಾಪ್ 5 ಸ್ಪರ್ದಿಗಳಲ್ಲಿ ಒಬ್ಬರಾಗಿದ್ದರು.ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ದಿವ್ಯ ಅವರು ಸಿನಿಮಾ ದತ್ತ ಮುಖ ಮಾಡಿದ್ದಾರೆ.ಬಿಗ್ ಬಾಸ್ ಸೀಸನ್ ರ ಸ್ಪರ್ದಿ ದಿವ್ಯ ಉರುಡುಗ ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ದಿವ್ಯ ಜೋಡಿ ಅಭಿಮಾನಿಗಳ ಮನಸೆಳೆದಿತ್ತು.

ಬಿಗ್ ಬಾಸ್ ಮುಗಿದು ಒಂದು ವರ್ಷ ಕಳೆದರು ಇದೀಗ ಅವರಿಗೆ ಬಿಗ್ ಬಾಸ್ ಬಳಿಕ ಮೊದಲ ಸಿನಿಮಾ ಹಾಫ್ಹರ್ ಸಿಕ್ಕಿದೆ. ಇದೀಗ ಈ ಸುದ್ದಿಯನ್ನ ಚಿತ್ರತಂಡ ಅಂಚಿಕೊಂಡಿದೆ. ಬಿಗ್ ಬಾಸ್ ಬಳಿಕ ದಿವ್ಯ ಅವರಿಗೆ ಬೇಡಿಕೆ ಹೆಚ್ಚಾಗಬಹುದು ಇನ್ನೇನು ತಮ್ಮ ಮೊದಲ ಸಿನಿಮಾವನ್ನ ಪ್ರಕಟಿಸಿಬಿಡುತ್ತಾರೆ ಎಂಬ ನಿರೀಕ್ಷೆಗಳು ಅವರ ಅಭಿಮಾನಿಗಳಲ್ಲಿದ್ದವು. ಆದರೆ ಇದೀಗ ದಿವ್ಯ ಉರುಡುಗ ಅವರ ಮೊದಲ ಸಿನಿಮಾ ಪ್ರಕಟವಾಗಿದೆ.

ದೊಡ್ಮನೆಯಿಂದ ಹೊರ ಬಂದ ಬಳಿಕ ಇದೀಗ ದಿವ್ಯ ಅವರು ಪದವಿ ಪೂರ್ವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ದಿವ್ಯ ಅವರ ಪಾತ್ರದ ಬಗ್ಗೆ ಚಿತ್ರದ ನಿರ್ದೇಶಕ ಹರಿಪ್ರಸಾದ್ ಅವರು ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ದಿವ್ಯ ಅವರು ಅತಿ ಮುಖ್ಯವಾದ ಪಾತ್ರ ಒಂದರಲ್ಲಿ ನಟಿಸುಯುತ್ತಿದ್ದಾರೆ. ದಿವ್ಯ ಅವರ ಪಾತ್ರ ಇಡೀ ಚಿತ್ರಕ್ಕೆ ಬೈಂಡಿಂಗ್ ಮಾದರಿ ಇರಲಿದೆ. ದಿವ್ಯ ಅವರ ಪಾತ್ರ ಎಲ್ಲರ ಕನಸುಗಳು , ಸಾರ್ಥಕತೆಯ ಬಗ್ಗೆ ಹೇಳುತ್ತದೆ ಎಂದು ನಿರ್ದೇಶಕ ಹರಿಪ್ರಸಾದ್ ಹೇಳಿದ್ದಾರೆ