BBK8

ದಿವ್ಯ ಅರವಿಂದ್ ಕ್ಯೂಟ್ ಲವ್ ಸ್ಟೋರಿ ನೋಡಿ!

ಬಿಗ್ ಬಾಸ್ ಮನೆ ಈಗ ಬಾಯ್ಸ್ ಮತ್ತು ಗರ್ಲ್ಸ್ ಹಾಸ್ಟೆಲ್ ಅಂತೆ ಕಾಣುತ್ತಿದೆ.ಬಿಗ್ ಬಾಸ್ ನೀಡಿರುವ ಟಾಸ್ಕ್ ಅನ್ವಯ ಸ್ಪರ್ದಿಗಳು ಆಕ್ಟ್ ಮಾಡುತ್ತಿದ್ದಾರೆ, ಹುಡುಗರು ಹುಡುಗಿಯರಿಗೆ ರಾಗ್ಗಿಂಗ್ ಮಾಡುವುದು, ಹುಡುಗಿಯರಿಗೆ ಕಾಳು ಹಾಕುತ್ತಿದ್ದಾರೆ, ಪಕ್ಕ ಹಾಸ್ಟೆಲ್ ಅಲ್ಲಿ ಮಾಡುವ ಎಲ್ಲಾ ಕೀಟಲೆ ತರ್ಲೆಗಳನ್ನು ಮಾಡುತ್ತಿದ್ದಾರೆ.ಎಲ್ಲರೂ ಈ ಟಾಸ್ಕ್ ನಲ್ಲಿ ಕಾಲೇಜಿನ ಹುಡುಗ ಹುಡುಗಿಯರಂತೆ ವರ್ತಿಸುತ್ತಿದ್ದಾರೆ.

ಈ ವಾರದ ಮೊದಲ ಟಾಸ್ಕ್ ಆಗಿರುವ ಹಾಸ್ಟೆಲ್ ಟಾಸ್ಕ್ ಮನರಂಜಕವಾಗಿದೆ.ಎಲ್ಲರೂ ಟಾಸ್ಕ್ ಮೂಡ್ ನಲ್ಲಿ ಇದ್ದರೆ ಇಲ್ಲಿ ಬಿಗ್ ಬಾಸ್ ಮನೆಯ ಕ್ಯೂಟ್ ಜೋಡಿ ಕುಳಿತು ಮಾತನಾಡುತ್ತಿದ್ದಾರೆ.

ನನಗೆ ನೀನು ಅಂದ್ರೆ ಇಷ್ಟ ಕೈಹಿಡಿದುಕೊಳ್ಳಲ ಎಂದು ಅರವಿಂದ್ ದಿವ್ಯಾಗೆ ಹೇಳಿದ್ದಾರೆ, ಈ ವೇಳೆ ದಿವ್ಯ ಕಿರುನಗೆ ಬೀರುತ್ತಾ ನಮ್ಮ ಅಪ್ಪಾಜಿಯನ್ನು ಕೇಳಬೇಕು ಎಂದು ಹೇಳುತ್ತಾ ಇಬ್ಬರೂ ಜೋರಾಗಿ ನಕ್ಕಿದ್ದಾರೆ. ಇನ್ನೂ ಏನೆಲ್ಲಾ ನಡೆಯಲಿದೆ ಯಾರು ಯಾರ ಬಲೆಗೆ ಬೀಳಲಿದ್ದಾರೆ ಎಂದು ಕಾದು ನೋಡಬೇಕು.

Trending

To Top