BBK8

ದಿವ್ಯ ಉರುಡುಗ ಅರವಿಂದ್.ಕೆ.ಪಿ ಮದುವೆ ಫಿಕ್ಸ್ ?

ಬಿಗ್ ಬಾಸ್ ಕನ್ನಡದ ಈ ಸೀಸನ್ ಬೇರೆ ವಿಚಾರಗಳಿಗಿಂತ ಅರವಿಂದ್ ಮತ್ತು ದಿವ್ಯ ಉರುಡುಗ ಅವರ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿತ್ತು.ಕೇವಲ ಟಾಸ್ಕ್ ಗಾಗಿ ಮಾತ್ರವಲ್ಲ ದಿವ್ಯ ಉರುಡುಗ ನಿಜವಾಗಿಯೂ ಸಹ ಅರವಿಂದ್ ನ ಮೇಲೆ ಪ್ರೀತಿಯ ಭಾವನೆಗಳನ್ನ ಇಟ್ಟುಕೊಂಡಿದ್ದು ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕಾಣುತ್ತಿತ್ತು.ಅತ್ತ ಅರವಿಂದ್ ನೇರವಾಗಿ ಹೇಳಿಕೊಳ್ಳದಿದ್ದರು ಸಹ ದಿವ್ಯ ಅವರ ಜೊತೆ ಬಹಳ ಆತ್ಮೀಯವಾಗಿ ನಡೆದುಕೊಳ್ಳುತಿದಿದ್ದು ಹಾಗೂ ಆಕೆಗಾಗಿ ಕಣ್ಣೀರು ಇಟ್ಟಿದ್ದು ಎಲ್ಲವೂ ಅರವಿಂದ್ ಗು ಸಹ ದಿವ್ಯ ಉರುಡುಗ ಅವರ ಮೇಲೆ ಪ್ರೀತಿ ಇರಬಹುದು ಎನ್ನುವಂತೆ ಕಂಡಿತ್ತು.

ಇನ್ನು ಈ ಜೋಡಿಯನ್ನ ಇಷ್ಟಪಡುವ ಪ್ರೇಕ್ಷಕರು ಅದಾಗಲೇ ಈ ಇಬ್ಬರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿ ಪೇಜ್ ಸಹ ತೆರೆದಿರುವುದು ಉಂಟು.ಇನ್ನು ಅರವಿಂದ್ ಹಾಗೂ ದಿವ್ಯ ಅವರ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿಚಾರ ಹರಿದಾಡುತ್ತಿದೆ.

ಬಿಗ್ ಬಾಸ್ ಷೋ ಮುಗಿದ ನಂತರ ದಿವ್ಯ ಮತ್ತು ಅರವಿಂದ್ ರನ್ನ ಮದುವೆ ಮಾಡಿಕೊಳ್ಳಿ ಎಂದು ಅಭಿಮಾನಿಗಳು ಸಿಕ್ಕಾಪಟ್ಟೆ ಮನವಿ ಮಾಡಿಕೊಳ್ಳುತ್ತಿದ್ದಾರೆ.ನಿಜಕ್ಕೂ ತೆರೆ ಮೇಲೆ ನಡೆದುಕೊಳ್ಳುವ ರೀತಿ ಜನರ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂದರೆ ಇವರಿಬ್ಬರನ್ನ ಇಷ್ಟ ಪಡುವ ಕೆಲವರು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ, ಔದು ದಿವ್ಯ ಹಾಗೂ ಅರವಿಂದ್ ಅವರ ಮಕ್ಕಳಿಗೆ ಅದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹೆಸರಿಟ್ಟಿದ್ದು ಅರವಿವ್ಯ ಎಂದು ವೈರಲ್ ಆಗಿದೆ.

Trending

To Top