Kannada Reality Shows

ಫ್ರೆಂಚ್ ಬಿರಿಯಾನಿ ನಟಿ ದಿಶಾ ಮದನ್ ಮಗುವಿನ ಹುಟ್ಟುಹಬ್ಬ ಹೇಗಿತ್ತು ನೋಡಿ!

ಇತ್ತೀಚೆಗೆ ಆನ್ ಲೈನ್ ಪ್ಲಾಟ್ ಫಾರ್ಮ್ ನಲ್ಲಿ ತೆರೆಕಂಡ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ನಿರೂಪಕಿ ಮಾಲಿನಿ ಪಾತ್ರದಲ್ಲಿ ನಟಿಸಿದ್ದ ನಟಿ ದಿಶಾ ಮದನ್ ಅವರು ತಮ್ಮ ಮಗ ವಿಯಾನ್ ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಪತಿ ಶಶಾಂಕ್ ಹಾಗು ಕುಟುಂಬದವರ ಸಮ್ಮುಖದಲ್ಲಿ ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಜುಲೈ 27, 2019ರಂದು ದಿಶಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವರ್ಷ ಜುಲೈ 27 ಕ್ಕೆ ಮಗನ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಫಾರ್ಮ್ ಹೌಸ್ ಒಂದರಲ್ಲಿ ಸಂಪ್ರದಾಯದ ಪ್ರಯುಕ್ತ ಆಯುಷ್ಮನ್ ಹೋಮ ಮಾಡಿಸಿ ಅದಾದ ನಂತರ ಆಧುನಿಕವಾಗಿ ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಮಗನ ಹುಟ್ಟುಹಬ್ಬದ ಸಂಭ್ರಮದ ಕ್ಷಣಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದಿಶಾ ಮದನ್ ಅವರ ಮಗನ ಹುಟ್ಟುಹಬ್ಬದ ಕ್ಷಣಗಳನ್ನು ಅಮೃತಾ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ್ದಾರೆ. ವಿಯಾನ್ ಗೆ ಈಗ ಒಂದು ವರ್ಷ ತುಂಬಿದ್ದು, ತಾಯಿ ದಿಶಾ ಈಗಾಗಲೇ ತಮ್ಮ ಮಗುವಿಗೆ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದಿದ್ದು, ಒಂದು ವರ್ಷದ ವಿಯಾನ್ ಗೆ ಇನ್ಸ್ಟಾಗ್ರಾಮ್ ನಲ್ಲಿ ಈಗಾಗಲೇ 27,000ಕ್ಕು ಹೆಚ್ಚು ಫಾಲೋವರ್ಸ್ ಗಳು ಇದ್ದಾರೆ.
ನಟಿ ದಿಶಾ ಮದನ್, ಮೊದಲು ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದರು. ನಂತರ ಇಂಡಿಯನ್ ರಿಯಾಲಿಟಿ ಶೋ ವಿನ್ನರ್ , ಕಿಟ್ಟಿ ಅವರಿಗೆ ಜೋಡಿಯಾಗಿ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕಮದಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕುಲವಧು ಧಾರಾವಾಹಿಯಲ್ಲಿ, ವಚನ ಪಾತ್ರದಲ್ಲಿ ನಟಿಸಿದ್ದರು.
ಕುಲವಧು ಧಾರಾವಾಹಿಯಲ್ಲಿ ಇವರು ಸ್ವಲ್ಪ ದಿನ ಮಾತ್ರ ನಟಿಸಿದ್ದರು. ನಂತರ ಧಾರಾವಾಹಿಯಿಂದ ಹೊರನಡೆದರು. ನಂತರ ಅಷ್ಟಾಗಿ ತೆರೆಮೇಲೆ ಕಾಣಿಸಿಕೊಳ್ಳದ ದಿಶಾ, ಮ್ಯೂಸಿಕಲಿ ಹಾಗೂ ಟಿಕ್ ಟಾಕ್ ಸ್ಟಾರ್ ಆಗಿ ಹೊರಹೊಮ್ಮಿದರು. ಇವರ ವಿಡಿಯೋಗಳು ಸಾಕಷ್ಟು ಫೇಮಸ್ ಆಗಿವೆ. ಇಂದಿಗೂ ಸಹ ಇನ್ಸ್ಟಾಗ್ರಾಮ್ ನಲ್ಲಿ ಇವರು ಆಪ್ಲೊಡ್ ಮಾಡುವ ವಿಡಿಯೋಗಳಿಗೆ ಸಾಕಷ್ಟು ಪ್ರಶಂಸೆ ಬರುತ್ತವೆ.

Trending

To Top