Saturday, May 21, 2022
HomeFilm Newsಪ್ರಭಾಸ್ ಅಭಿನಯಿಸುತ್ತಿರುವ ಪ್ರಾಜೆಕ್ಟ್ ಕೆ ಸಿನೆಮಾಗೆ ಬಾಲಿವುಡ್ ನಟಿ ಎಂಟ್ರಿ….

ಪ್ರಭಾಸ್ ಅಭಿನಯಿಸುತ್ತಿರುವ ಪ್ರಾಜೆಕ್ಟ್ ಕೆ ಸಿನೆಮಾಗೆ ಬಾಲಿವುಡ್ ನಟಿ ಎಂಟ್ರಿ….

ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನೆಮಾ ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಕಾಂಬಿನೇಷನ್ ನ ಪ್ರಾಜೆಕ್ಟ್ ಕೆ ಸಿನೆಮಾ ಈಗಾಗಲೇ ಸಿನಿರಂಗದಲ್ಲಿ ಬಹುನಿರೀಕ್ಷೆಯನ್ನು ಹುಟ್ಟಿಸಿದೆ. ಈ ಸಿನೆಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್‍ ನಟರೇ ನಟಿಸುತ್ತಿದ್ದಾರೆ. ಇದೀಗ ಈ ಸಿನೆಮಾದಲ್ಲಿ ಮತ್ತೊರ್ವ ಬಾಲಿವುಡ್ ನಟಿ ಎಂಟ್ರಿ ಕೊಟ್ಟಿದ್ದಾರೆ.

ಹೌದು ಪ್ರಾಜೆಕ್ಟ್ ಕೆ ಸಿನೆಮಾದಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ಸಹ ನಟಿಸಲಿದ್ದಾರೆ.  ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು. ಸಿನೆಮಾದ ಕುರಿತು ಮೊದಲಿನಿಂದಲೂ ಕ್ರೇಜ್ ಹುಟ್ಟಿಕೊಂಡಿದೆ. ಇನ್ನೂ ಸುಮಾರು ವರ್ಷಗಳ ಬಳಿಕ ದೀಪಿಕಾ ದಕ್ಷಿಣ ಭಾರತದ ಸಿನೆಮಾಗಳಲ್ಲಿ ನಟಿಸಲು ಕಮ್ ಬ್ಯಾಕ್ ಆಗಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ಅಷ್ಟೇ ಅಲ್ಲದೇ ಈ ಸಿನೆಮಾ ನಟ ಪ್ರಭಾಸ್ ಗೆ ತುಂಬಾ ಮುಖ್ಯವಾದ ಸಿನೆಮಾ ಆಗಿದೆ ಎಂದು ಹೇಳಲಾಗುತ್ತಿದ್ದು, ಬಾಲಿವುಡ್ ಖ್ಯಾಥ ನಟ ಅಮಿತಾಭ್ ಬಚ್ಚನ್ ಸಹ ಸಿನೆಮಾದಲ್ಲಿರುವುದು ವಿಶೇಷವಾಗಿದೆ.

ನಾಗ್ ಅಶ್ವಿನ್ ನಿರ್ದೇಶನದಲ್ಲಿ ಈ ಸಿನೆಮಾ ಶೂಟಿಂಗ್ ಕೆಲಸಗಳು ಪ್ರಾರಂಭವಾಗಿ ಅನೇಕ ತಿಂಗಳುಗಳೇ ಕಳೆದಿದೆ. ಇದೀಗ ದಿಶಾ ಪಟಾನಿ ಚಿತ್ರತಂಡದ ಜೊತೆ ಸೇರಿಕೊಂಡಿದ್ದಾರೆ. ಇನ್ನೂ ಚಿತ್ರತಂಡ ವಿಶೇಷ ಉಡುಗೊರೆ ನೀಡುವ ಮೂಲಕ ದಿಶಾ ಪಟಾನಿಯನ್ನು ಬರಮಾಡಿಕೊಂಡಿದೆ ಚಿತ್ರತಂಡ. ವಿಶೇಷ ಹೂವಿನ ಗುಚ್ಚ ನೀಡಿ, ಅದರೊಂದಿಗೆ ಕೆಲವೊಂದು ವಿಶೇಷ ಸಾಲುಗಳನ್ನು ಬರೆದಿದ್ದಾರೆ. ಇನ್ನೂ ಈ ಗಿಫ್ಟ್ ಪೊಟೋವನ್ನು ದಿಶಾ ಪಟಾನಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನೂ ಪ್ರಾಜೆಕ್ಟ್ ಕೆ ಚಿತ್ರಕ್ಕೆ ದಿಶಾ ಎಂಟ್ರಿ ಕೊಟ್ಟಿದ್ದು, ಈ ಸಿನೆಮಾದಲ್ಲಿ ದಿಶಾ ಪಟಾನಿ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಪಟಾನಿ ಅಭಿಮಾನಿಗಳಲ್ಲಿ ಮೂಡಿದೆ. ಸದಾ ಸೋಷಿಯಲ್ ಮಿಡಿಯಾ ಗಳಲ್ಲಿ ದಿಶಾ ಸಕ್ರಿಯರಾಗಿರುತ್ತಾರೆ. ಹಾಟ್ ಪೊಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ದೊಡ್ಡ ದೊಡ್ಡ ಸಿನೆಮಾಗಳಲ್ಲಿ ದಿಶಾ ಪಟಾನಿ ನಟಿಸುತ್ತಿದ್ದಾರೆ.

- Advertisement -

You May Like

More