Film News

ಡರ್ಟಿ ಪಿಕ್ಚರ್ ನಟಿ ಆರ್ಯಾ ಬ್ಯಾನರ್ಜಿ ನಿಗೂಡ ಸಾವು!

ಮುಂಬೈ: ಬಾಲಿವುಡ್ ನಟಿ ವಿದ್ಯಾಬಾಲನ್ ನಟನೆಯ ದಿ ಡರ್ಟಿ ಪಿಕ್ಚರ್ ಚಿತ್ರದಲ್ಲಿ ಬಾಲನ್ ಜೊತೆ ನಟಿಸಿದ್ದ ನಟಿ ಆರ್ಯಾ ಬ್ಯಾನರ್ಜಿ ನಿಗೂಢ ಸಾವನ್ನಪ್ಪಿದ್ದು, ನಿಧನದ ಸುದ್ದಿ ತಿಳಿದ ಅನೇಕರು ಸಂತಾಪ ಸೂಚಿಸಿದ್ದಾರೆ. ಇನ್ನೂ ಈ ಸಾವು ಅನುಮಾನಗಳಿಂದ ಕೂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರಂತೆ.

ಬಾಲಿವುಡ್ ಚಲನಚಿತ್ರಗಳಲ್ಲಿ ಗುರ್ತಿಸಿಕೊಂಡಿದ್ದ ನಟಿ ಆರ್ಯಾ ಬ್ಯಾನರ್ಜಿ, ಕೋಲ್ಕತ್ತಾದ ಜೋಧ್ಪುರ್ ಪಾರ್ಕಿನಲ್ಲಿರುವ ಅಪಾರ್ಟ್‌ಮೆಂಟ್ ನಲ್ಲಿ ನಿಧನರಾಗಿದ್ದಾರೆ. ಬ್ಯಾನರ್ಜಿ ಅವರು ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಮಾಹಿತಿ ಗೊತ್ತಾದ ಬಳಿಕ ಮನೆ ಕೆಲಸದಾಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ನೋಡಿದಾಗ ಆರ್ಯಾ ಬ್ಯಾನರ್ಜಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡಿದ್ದು, ಸಾವು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಆರ್ಯಾ ಬ್ಯಾನರ್ಜಿ ಅವರಿಗೆ 33 ವರ್ಷ ವಯಸ್ಸಾಗಿದ್ದು, ಅವರ ಜೋಧ್ಪುರ್ ಪಾರ್ಕಿನಲ್ಲಿರುವ ಅಪಾರ್ಟ್‌ಮೆಂಟ್ ನಲ್ಲಿ ಒಂಟಿಯಾಗಿ ವಾಸಸಿಸುತ್ತಿದ್ದರು ಎನ್ನಲಾಗಿದೆ. ಆರ್ಯಾ ಅವರ ಮೂಲ ಹೆಸರು ದೇವ್ದತ್ತ ಬ್ಯಾನರ್ಜಿ. ಚಿತ್ರರಂಗದಲ್ಲಿ ಆರ್ಯಾ ಬ್ಯಾನರ್ಜಿ ಎಂಬ ಹೆಸರಿನಿಂದ ಗುರ್ತಿಸಿಕೊಂಡಿದ್ದರು. ಆರ್ಯಾ ರವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಹಿಸಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರಂತೆ.

Trending

To Top