ಸೆರಗೋಸಿ ವಿವಾದ ಬಗ್ಗೆ ಮೊದಲ ಬಾರಿಗೆ ರಿಪ್ಲೆ ಕೊಟ್ಟ ವಿಘ್ನೇಶ್, ಆತ ಹೇಳಿದ್ದು ಏನು ಗೊತ್ತಾ?

ಕಳೆದೆರಡು ದಿನಗಳ ಹಿಂದೆಯಷ್ಟೆ ಕಾಲಿವುಡ್ ಸ್ಟಾರ್‍ ಜೋಡಿ ನಯನತಾರಾ ಹಾಗೂ ವಿಘ್ನೇಶ್ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದರು. ಮದುವೆಯಾಗಿ ನಾಲ್ಕು ತಿಂಗಳು ಮುಗಿಯುವುದರ ಒಳಗೆ ತಾವು ತಂದೆ ತಾಯಿಯಾಗಿದ್ದೇವೆ ಎಂದು ಶಾಕಿಂಗ್ ನ್ಯೂಸ್ ಹಂಚಿಕೊಂಡಿದ್ದರು. ಸೆರಗೋಸಿ ಪದ್ದತಿಯ ಮೂಲಕ ಅವಳಿ ಗಂಡು ಮಕ್ಕಳ ಪೋಷಕರಾಗಿರುವ ಬಗ್ಗೆ ವಿಘ್ನೇಶ್ ತಮ್ಮ ಟ್ವಿಟರ್‍ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದರು. ಈ ಕುರಿತು ಅನೇಕ ವಿವಾದಗಳೂ ಸಹ ಹುಟ್ಟಿಕೊಂಡಿದ್ದು, ಮೊದಲ ಬಾರಿಗೆ ವಿಘ್ನೇಶ್ ವಿವಾದದ ಬಗ್ಗೆ ರಿಪ್ಲೇ ಕೊಟ್ಟಿದ್ದಾರೆ.

ಇತ್ತೀಚಿಗಷ್ಟೆ ನಯನತಾರಾ ಹಾಗೂ ವಿಘ್ನೇಶ್ ಸೋಷಿಯಲ್ ಮಿಡಿಯಾದಲ್ಲಿ ತಾವು ಅವಳಿ ಗಂಡು ಮಕ್ಕಳ ಪೋಷಕರಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಅವಳಿ ಗಂಡು ಮಕ್ಕಳು ಜನಿಸಿದ್ದು, ಎಲ್ಲರೂ ನಮ್ಮನ್ನು ಆರ್ಶಿವಾದ ಮಾಡಬೇಕೆಂದು ಕೋರಿದ್ದರು.  ಜೊತೆಗೆ ಮಕ್ಕಳ ಪಾದಗಳನ್ನು ಮುತ್ತಿಡುವ ಪೊಟೋಗಳನ್ನು ಸಹ ಶೇರ್‍ ಮಾಡಿದ್ದರು. ಈ ಪೋಸ್ಟ್ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿತ್ತು. ಕಳೆದ ಜೂನ್ ಮಾಹೆಯಲ್ಲಿ ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಅದ್ದೂರಿಯಾಗಿ ಈ ಜೋಡಿ ಮದುವೆಯಾದರು. ಆದರೆ ಮದುವೆಯಾಗಿ ನಾಲ್ಕು ತಿಂಗಳು ಪೂರ್ಣಗೊಳ್ಳುವುದರ ಒಳಗೆ ತಾವು ಸೆರಗೋಸಿ ಪದ್ದತಿಯ ಮೂಲಕ ಪೋಷಕರಾದ ಸುದ್ದಿ ಹಂಚಿಕೊಂಡ ಕೂಡಲೇ ಅನೇಕ ವಿವಾದಗಳೂ ಸಹ ಸೃಷ್ಟಿಯಾದವು. ಸೆರಗೋಸಿ ಪದ್ದತಿ ಇಂಡಿಯಾದಲ್ಲಿ ಬ್ಯಾನ್ ಆಗಿದೆ. ಅದು ಕಾನೂನುರೀತ್ಯ ಅಪರಾಧ ಎಂಬೆಲ್ಲಾ ಮಾತುಗಳು ಕೇಳಿಬಂದವು. ವಿವಾದ ಹೆಚ್ಚಾಗುತ್ತಿದ್ದಂತೆ ತಮಿಳುನಾಡು ಸರ್ಕಾರ ಸಹ ಈ ಕುರಿತು ತನಿಖೆ ನಡೆಸುವಂತೆ ಆದೇಶ ಮಾಡಿತ್ತು.

ಇನ್ನೂ ಒಂದು ವೇಳೆ ಅವರು ಕಾನೂನು ಮೀರಿ ಮಕ್ಕಳನ್ನು ಪಡೆದಿದ್ದರೇ ಅದು ಶಿಕ್ಷಾರ್ಹ ಅಪರಾಧವಾಗಿದ್ದು, ಭಾರಿ ದಂಡದ ಜೊತೆಗೆ ಶಿಕ್ಷೆಯನ್ನು ಸಹ ವಿಧಿಸು ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದೀಗ ವಿಘ್ನೇಶ್ ಶಿವನ್ ಸೋಷಿಯಲ್ ಮಿಡಿಯಾದಲ್ಲಿ ಈ ಕುರಿತು ರಿಪ್ಲೇ ಕೊಟ್ಟಿದ್ದಾರೆ. ಆತ ಕೊಟ್ಟ ರೀಪ್ಲೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಿನ್ನನ್ನು ಜಾಗ್ರತೆಯಿಂದ ನೋಡಿಕೊಂಡು ನಿನ್ನೊಂದಿಗೆ ಇದ್ದು, ಎಲ್ಲಾ ಒಳ್ಳೆಯದಾಗಲಿ ಎಂದು ಕೋರುವವರ ಬಗ್ಗೆ ಮಾತ್ರ ಯೋಚಿಸಿ, ಏಕೆಂದರೇ ಅವರು ಮಾತ್ರ ನಿನ್ನವರು, ಎಂದಿಗೂ ಇದೇ ವಾಸ್ತವ, ಸಮಯ ಬಂದಾಗ ಎಲ್ಲಾ ನಿನ್ನನ್ನು ಸೇರುತ್ತೆ. ಅಲ್ಲಿಯವರೆಗೂ ಕಾಯಬೇಕು. ಪ್ರತಿಯೊಂದು ಕ್ಷಣವನ್ನು ಆಸ್ವಾದಿಸು ಎಂದು ಬರೆದಿದ್ದಾರೆ. ಸದ್ಯ ಈ ಪೋಸ್ಟ್ ಹಾಟ್ ಟಾಪಿಕ್ ಆಗಿ ಹರಿದಾಡುತ್ತಿದೆ.

ನಯನತಾರಾ ಹಾಗೂ ವಿಘ್ನೇಶ್ ಮಕ್ಕಳನ್ನು ಪಡೆದುಕೊಂಡ ಬಗ್ಗೆ ಬರುತ್ತಿರುವ ಹೇಳಿಕೆಗಳ ಕುರಿತಂತೆ ವಿಘ್ನೇಶ್ ಈ ರೀತಿಯಲ್ಲಿ ಉತ್ತರ ನೀಡಿದ್ದು, ಎಲ್ಲರ ಗಮನ ಸೆಳೆದಿದೆ. ಕೆಲವರು ಬೆಂಬಲ ನೀಡುತ್ತಿದ್ದರೇ, ಕೆಲವರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಇದೀಗ ವಿಘ್ನೇಶ್ ಪೋಸ್ಟ್ ಬಗ್ಗೆ ಯಾವ ರೀತಿಯಲ್ಲಿ ಕಾಮೆಂಟ್ ಗಳು ಬರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Previous articleಅಗತ್ಯಬಿದ್ದರೇ ರಕ್ತದಲ್ಲಿ ಬೇಕಾದರು ಬರೆದುಕೊಡುತ್ತೇನೆ ಎಂದ ಜಾನ್ವಿ ಕಪೂರ್, ವೈರಲ್ ಆದ ಆಕೆ ಹೇಳಿಕೆಗಳು…!
Next articleತಾಯಿಯಾದರೂ ಸಹ ಹಾಟ್ ನೆಸ್ ಮಾತ್ರ ಕಡಿಮೆಯಾಗಿಲ್ಲ, ಪ್ರಣಿತಾ ಟೂ ಮಚ್ ಹಾಟ್ ಗುರೂ…!