Film News

ಸಾರ್ವಜನಿಕವಾಗಿಯೇ ನಟಿಯೊಂದಿಗೆ ಅನುಚಿತ ವರ್ತನೆ ತೋರಿದ ನಿರ್ದೇಶಕ

ಚೆನೈ: ಕಾಲಿವುಡ್ ನ ಖ್ಯಾತ ನಟ ಸಿಂಭು ಅಭಿನಯದ ಈಶ್ವರನ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ಚಿತ್ರದ ನಾಯಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಘಟನೆಯ ವಿವರಕ್ಕೆ ಬಂದರೇ ನಟ ಸಿಂಭು ಅಭಿನಯದ ಈಶ್ವರನ್ ಚಿತ್ರದ ಅಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಈ ಚಿತ್ರದ ಬಹುತೇಕ ಎಲ್ಲಾ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸಿನೆಮಾದ ನಾಯಕಿ ನಿಧಿ ಅಗರ್ವಾಲ್ ಮಾತನಾಡಲು ವೇದಿಕೆಯ ಮೇಲೆ ಬರುತ್ತಾರೆ. ಇನ್ನೂ ನಿಧಿ ಮಾತನಾಡಲು ಪ್ರಾರಂಭಿಸುತ್ತಿದ್ದಂತೆಯೇ ಚಿತ್ರದ ನಿರ್ದೇಶಕ ಸಿಂಭು ಮಾಮ ಕುರಿತು ಮಾತನಾಡು ಎಂದಾಗ, ನಿಧಿ ಮಾತನಾಡುತ್ತೇನೆ ಎನ್ನುತಾ, ನನಗೆ ಸಿನೆಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದ ಎಂದು ನಿರ್ದೇಶಕ ಸುಸೀಂದ್ರನ್ ಗೆ ಹೇಳುತ್ತಾರೆ. ಇದಕ್ಕೆ ಒಪ್ಪದ ಸುಸೀಂದ್ರನ್ ನನ್ನ ಬಗ್ಗೆ ಮಾತಾನಾಡಿದರೇ ಯಾರು ಕೇಳುವುದಿಲ್ಲ ಸಿಂಭು ಮಾಮ ಬಗ್ಗೆ ಮಾತನಾಡು ಎಂದು ಒತ್ತಾಯ ಮಾಡುತ್ತಾರೆ ನಿರ್ದೇಶಕರು. ಜೊತೆಗೆ ಸಿಂಭು ಮಾಮ ಐ ಲವ್ ಯೂ ಎಂತಲೂ ಹೇಳು ಎಂದು ಒತ್ತಾಯಿಸುತ್ತಾರೆ. ಇದಕ್ಕೆ ಒಪ್ಪದ ನಿಧೀ ಹೇಳುವುದಿಲ್ಲ ಎಂದರೂ ಕೂಡ ಬಿಡದ ನಿರ್ದೇಶಕ ಸುಸೀಂದ್ರನ್ ಒತ್ತಾಯ ಮಾಡುತ್ತಾರೆ.

ಈ ಘಟನೆಯ ವಿಡೀಯೊ ಸೋಷಿಯಲ್ ಮಿಡೀಯಾದಲ್ಲಿ ವೈರಲ್ ಆಗಿದ್ದು, ಅನೇಕರು ನಿರ್ದೇಶಕರ ವರ್ತನೆ ಕುರಿತು ಟೀಕೆ ಮಾಡಿ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಸುಸೀಂದ್ರನ್ ಮಹಿಳೆಯೊಂದಿಗೆ ಈ ರೀತಿ ವರ್ತನೆ ಮಾಡುವುದು ಸರಿಯಲ್ಲ. ಓರ್ವ ಮಹಿಳೆಯೊಂದಿಗೆ ಯಾವ ರೀತಿ ವರ್ತನೆ ಮಾಡಬೇಕೆಂದು ಆತನಿಗೆ ಗೊತ್ತಿಲ್ಲವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಷ ವ್ಯಕ್ತವಾಗಿದೆ.

Trending

To Top