ಚೆನೈ: ದಕ್ಷಿಣ ಭಾರತದಲ್ಲಿ ಮೋಸ್ಟ್ ಸಕ್ಸಸ್ ಫುಲ್ ಡೈರೆಕ್ಟರ್ ಎಂದು ಕರೆಯಲಾಗುವ ನಿರ್ದೇಶಕ ಶಂಕರ್ ರವರ ಸಿನೆಮಾ ಒಂದರಲ್ಲಿ ಸ್ಯಾಂಡಲ್ವುಡ್ ಸ್ಟಾರ್ ನಟ ಯಶ್ ಹಾಗೂ ಟಾಲಿವುಡ್ ಸ್ಟಾರ್ ನಟ ರಾಮಚರಣ್ ತೇಜ್ ಅಭಿನಯಿಸಲಿದ್ದಾರೆಂಬ ಮಾಹಿತಿ ಸಿನಿರಂಗದಲ್ಲಿ ಕೇಳಿಬರುತ್ತಿದೆ.
ತಮಿಳು ಸಿನಿರಂಗದ ಖ್ಯಾತ ನಿರ್ದೇಶಕ ಶಂಕರ್ ರವರು ಬಿಗ್ ಬಜೆಟ್ ಸಿನೆಮಾ ಒಂದನ್ನು ನಿರ್ದೇಶಿಸಲು ಮುಂದಾಗಿದ್ದು, ಈ ಚಿತ್ರದಲ್ಲಿ ಸ್ಟಾರ್ ನಟರನ್ನು ಆಯ್ಕೆ ಮಾಡಿಕೊಳ್ಳಲು ಶಂಕರ್ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಬಂದಿರುವ ಮಾಹಿತಿಯಂತೆ ಇಲ್ಲಿಯವರೆಗೂ ಭಾರತೀತ ಚಿತ್ರರಂಗದಲ್ಲಿ ಬಂದಿರದ ದೊಡ್ಡ ಮಟ್ಟದ ಸಿನೆಮಾ ಇದಾಗಲಿದೆಯಂತೆ. ಐತಿಹಾಸಿಕ ಕಥನವುಳ್ಳ ಸಿನೆಮಾ ಇದಾಗಿದ್ದು, ಈ ಚಿತ್ರದಲ್ಲಿ ಸ್ಟಾರ್ ನಟರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಇನ್ನೂ ಶಂಕರ್ ಯಶ್ ಹಾಗೂ ರಾಮ್ ಚರಣ್ ತೇಜ್ ರವರಿಗೆ ಕಥೆಯನ್ನು ಹೇಳಿದ್ದು, ಇಬ್ಬರೂ ಪಾಸಿಟೀವ್ ಆಗಿ ರೆಸ್ಪಾನ್ಸ್ ಕೊಟ್ಟಿದ್ದಾರಂತೆ. ಮಲ್ಟಿಸ್ಟಾರ್ ಸಿನೆಮಾ ಇದಾಗಿದ್ದು, ಪಾನ್ ಇಂಡಿಯಾದಡಿ ಬಿಡುಗಡೆಯಾಗಲಿದೆಯಂತೆ. ಅಷ್ಟೇ ಅಲ್ಲದೇ ಮಾಸ್ಟರ್ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿರುವ ವಿಜಯ್ ಸೇತುಪತಿ ಸಹ ಅಭಿನಯಿಸಲಿದ್ದಾರೆ ಎನ್ನಲಾಗಿದೆ.
ಇನ್ನೂ ಈ ಚಿತ್ರದ ಶೂಟಿಂಗ್ 2022 ರಲ್ಲಿ ಪ್ರಾರಂಭವಾಗಲಿದ್ದು, 5 ವರ್ಷಗಳ ಕಾಲ ಚಿತ್ರದ ಶೂಟಿಂಗ್ ಕೆಲಸ ನಡೆಯಲಿದೆಯಂತೆ. ಸದ್ಯ ಸ್ಕ್ರಿಪ್ಟ್ ಸಿದ್ದಪಡಿಸುವ ಕೆಲಸದಲ್ಲಿ ಶಂಕರ್ ನಿರತರರಾಗಿದ್ದು, ಕಲಾವಿದರ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ತೆಲುಗು ಸೇರಿದಂತೆ ತಮಿಳು, ಕನ್ನಡ, ಹಿಂದಿ, ಮಲಾಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆಯಂತೆ ಮುಖ್ಯವಾಗಿ ವಿದೇಶಿ ಭಾಷೆಯಲ್ಲೂ ಸಹ ಚಿತ್ರ ಬರಲಿದೆಯಂತೆ. ಇನ್ನೂ ಚಿತ್ರದಲ್ಲಿ ಯಾರ್ಯಾರು ಅಭಿನಯಿಸಲಿದ್ದಾರೆಂಬ ಮಾಹಿತಿ ಚಿತ್ರತಂಡದಿಂದ ಅಧಿಕೃತವಾಗಿ ಬರಬೇಕಿದೆ.
