Film News

ಅನಾರೋಗ್ಯದಿಂದ ನಿರ್ದೇಶಕ ಎಸ್.ಭರತ್ ಸಾವು

ಬೆಂಗಳೂರು: ಕನ್ನಡ ಸಿನಿರಂಗದ ಕಂಠಿ ಹಾಗೂ ಸಾಹೇಬ ಸಿನೆಮಾಗಳನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಎಸ್.ಭರತ್ ಅನಾರೋಗ್ಯದ ಹಿನ್ನೆಲೆಯಲ್ಲಿ ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೂ ನಿನ್ನೆ ರಾತ್ರಿ ಕೊರೋನಾ ವೈರಸ್ ತಗುಲಿದ್ದು, ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

45 ವರ್ಷದ ಭರತ್ ನಿರ್ದೇಶನದಲ್ಲಿ ಶ್ರೀಮುರಳಿ ಹಾಗೂ ನಟಿ ರಮ್ಯಾ ಅಭಿನಯದ ಕಂಠಿ ಸಿನೆಮಾ ಹಾಗೂ ೨೦೧೭ ರಲ್ಲಿ ಸಾಹೇಬ ಚಿತ್ರವನ್ನು ನಿರ್ದೇಶಿಸಿದ್ದರು. ಸಿನೆಮಾ ವೃತ್ತಿಯನೇ ಮಾಡಿಕೊಂಡಿದ್ದ ಭರತ್ ಮತ್ತೊಂದು ಸಿನೆಮಾ ನಿರ್ದೇಶನ ಮಾಡುವ ತಯಾರಿಯಲ್ಲಿದ್ದರಂತೆ. ಆದರೆ ಇದೀಗ ಅನಾರೋಗ್ಯದಿಂದ ಭರತ್ ವಿಧಿವಶರಾಗಿದ್ದಾರೆ.

ಇನ್ನೂ ಭರತ್ ರವರಿಗೆ 12 ವರ್ಷದ ಮುದ್ದಾದ ಹೆಣ್ಣುಮಗುವೊಂದಿದೆ. ಮೂಲತಃ ರಾಮನಗರದ ಚಿಕ್ಕಮುಳುವಾಡಿ ಗ್ರಾಮದವರಾಗಿದ್ದ ಭರತ್ ರವರು ಸುಮಾರು ವರ್ಷಗಳಿಂದ ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆಯಲ್ಲಿ ನೆಲೆಸಿದ್ದರು. ಇನ್ನೂ ಸಾಹಿತಿ ಕವಿರಾಜ್ ಭರತ್ ರವರ ನಿಧನಕ್ಕೆ ಬೇಸರಗೊಂಡಿದ್ದು, ಅವರ ಜೊತೆಗಿನ ಕೆಲಸ ಹಾಗೂ ಅವರ ವ್ಯಕ್ತಿತ್ವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭರತ್ ರವರ ನಿಧನದ ಸುದ್ದಿ ಬದುಕಿನ ಬಗ್ಗೆ ವೈರಾಗ್ಯ ಮೂಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Trending

To Top