Film News

ಆರ್.ಆರ್.ಆರ್ ಸಿನೆಮಾ ಬಗ್ಗೆ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಆರ್.ಜಿ.ವಿ

ಹೈದರಾಬಾದ್: ಟಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಆರ್.ಆರ್.ಆರ್ ಸಿನೆಮಾ ಕುರಿತಂತೆ ಕಾಂಟ್ರವರ್ಸಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಶಾಕಿಂಗ್ ಸ್ಟೇಟ್‌ಮೆಂಟ್ ಒಂದನ್ನು ಕೊಟ್ಟಿದ್ದಾರೆ.

ಇತ್ತೀಚಿಗೆ ಸಿನೆಮಾ ಪ್ರಮೋಷನ್ ಒಂದರಲ್ಲಿ ಮಾತನಾಡಿದ ರಾಮ್ ಗೋಪಾಲ್ ವರ್ಮಾ ಸಿನೆಮಾ ಇಂಡಸ್ಟ್ರಿ ಕುರಿತು ಕೆಲವೊಂದು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಿನೆಮಾ ಇಂಡಸ್ಟ್ರಿ ಒಂದಾಗುತ್ತದೆ ಎಂಬುದು ಭ್ರಮೆ ಮಾತ್ರ. ಈ ಸಿನೆಮಾ ರಂಗದಲ್ಲಿ ಅವರ ಕೆಲಸ ಅವರದ್ದು, ಅವರ ಕಾಂಪಿಟೇಷನ್ ಅವರದ್ದು. ಇದೇ ರಂಗದಲ್ಲಿ ಮಾತ್ರವಲ್ಲ ಎಲ್ಲ ರಂಗದಲ್ಲೂ ಇದೆ ನಡೆಯುತ್ತದೆ. ರಾಜಮೌಳಿ ನಿರ್ದೇಶನ ಆರ್.ಆರ್.ಆರ್ ಸಿನೆಮಾ ಫ್ಲಾಪ್ ಆದ್ರೆ ಇಂಡಸ್ಟ್ರಿಯ ಕೆಲವರು ರೋಡಿಗೆ ಬಂದು ಬಟ್ಟೆ ಬಿಚ್ಚಿ ಛಾಂಪಿಯನ್ ನಲ್ಲಿ ಸ್ನಾನ ಮಾಡುತ್ತಾರೆ. ಒಬ್ಬ ಅಭಿವೃದ್ದಿಯಲ್ಲಿದ್ದಾನೆ ಎಂದರೇ, ಇಂಡಸ್ಟ್ರಿಗೆ ಅಷ್ಟೊಂದು ಅಸೂಯೆ ಇರುತ್ತದೆ. ಬೇರೆಯವರ ಸಿನೆಮಾ ಫ್ಲಾಪ್ ಆದರೆ, ಉಳಿದವರು ಪುಲ್ ಖುಷಿಯಾಗುತ್ತಾರೆ ಎಂದಿದ್ದಾರೆ.

ಇದೇ ರೀತಿಯಲ್ಲಿ ರಾಜಮೌಳಿ ಸಿನೆಮಾದ ಮೇಲೂ ಅಸೂಯೆಯಿದ್ದು, ಒಂದು ವೇಳೆ ಆರ್.ಆರ್.ಆರ್ ಸಿನೆಮಾ ಫ್ಲಾಪ್ ಆದರೆ ಬೇರೆಯವರು ಪುಲ್ ಖುಷಿಯಾಗುತ್ತಾರೆ ಎಂದಿದ್ದಾರೆ. ಇನ್ನೂ ಸೆನ್ಸಾರ್ ನಿಬಂಧನೆಗಳ ಕುರಿತಂತೆಯೂ ಮಾತನಾಡಿರುವ ಆರ್.ಜಿ.ವಿ. ಆನ್‌ಲೈನ್ ಮಾಧ್ಯಮಗಳಿಗೆ ಸೆನ್ಸಾರ್ ಎಂಬುದೇ ಇರುವುದಿಲ್ಲ. ಥಿಯೇಟರ್‌ಗೆ ಮಾತ್ರ ಸೆನ್ಸಾರ್ ಎಂಬುದಾಗಿ ಹೇಳಿದ್ದಾರೆ.

Trending

To Top