ಟಾಲಿವುಡ್ ನ ಮೋಸ್ಟ್ ಪವರ್ ಪುಲ್ ನಿರ್ದೇಶಕ ಎಂದೇ ಕರೆಯುವ ಪೂರಿ ಜಗನ್ನಾಥ್ ಮಗ ಆಕಾಶ್ ಪೂರಿ ಸಹ ಈಗಾಗಲೇ ನಟನಾಗಿ ಎಂಟ್ರಿ ಕೊಟ್ಟಿದ್ದಾರೆ. ಆತ ನಟಿಸಿ ಮೆಹಬೂಬಾ, ರೊಮ್ಯಾಂಟಿಕ್ ಸಿನೆಮಾಗಳಿಂದ ಖ್ಯಾತಿ ಗಳಿಸಿಕೊಂಡಿದ್ದಾರೆ. ಈ ಎರಡೂ ಸಿನೆಮಾಗಳ ಮೂಲಕ ಆಕಾಶ್ ಪೂರಿ ತಮ್ಮದೇ ಆದ ಕ್ರೇಜ್ ಗಳಿಸಿಕೊಂಡಿದ್ದಾರೆ. ತನ್ನ ಸ್ವಂತ ಪ್ರತಿಭೆಯ ಮೇಲೆ ಸ್ಟಾರ್ ನಟನಾಗಲು ಶ್ರಮಿಸುತ್ತಿರುವ ಆಕಾಶ್ ಚೋರ್ ಬಜಾರ್ ಎಂಬ ಸಿನೆಮಾದ ಮೂಲಕ ಮತ್ತೊಮ್ಮೆ ಎಲ್ಲರನ್ನೂ ರಂಜಿಸಲು ಶೀಘ್ರದಲ್ಲೆ ತೆರೆಗೆ ಬರಲಿದ್ದಾರೆ. ಈ ಸಿನೆಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಆಕಾಶ್ ಕೆಲವೊಂದು ಶಾಕಿಂಗ್ ಸ್ಟೇಟ್ ಮೆಂಟ್ ಗಳನ್ನು ನೀಡಿದ್ದಾರೆ. ಇದು ಇದೀಗ ಎಲ್ಲೆಡೆ ವೈರಲ್ ಆಗಿದೆ.
ಟಾಲಿವುಡ್ ನಿರ್ದೇಶಕ ಜೀವನ್ ರೆಡ್ಡಿ ಸಾರಥ್ಯದಲ್ಲಿ ಮೂಡಿಬಂದಿರುವ ಚೋರ್ ಬಜಾರ್ ಸಿನೆಮಾ ಜೂ.24 ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ. ಈ ಸಿನೆಮಾದ ಪ್ರಮೋಷನ್ ಕೆಲಸಗಳಲ್ಲಿ ಸಿನೆಮಾದ ಹಿರೋ ಆಕಾಶ್ ಪೂರಿ ಬ್ಯುಸಿಯಾಗಿದ್ದಾರೆ. ಈ ಪ್ರಮೋಷನ್ ಕಾರ್ಯಕ್ರಮದ ಭಾಗವಾಗಿಯೇ ಆಕಾಶ್ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಕಾಶ್ ಪೂರಿ ನಟನಾಗಿ ಕಾಣಸಿಕೊಳ್ಳುವುದಕ್ಕೂ ಮುಂಚೆ ಬಾಲನಟನಾಗಿ ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ಇದೀಗ ಎರಡೂ ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕಾಶ್ ರನ್ನು ಅವರ ಸ್ನೇಹಿತರು ಚಿಕ್ಕ ಹುಡುಗನಂತೆ ಕಾಣಿಸುತ್ತಾರೆ ಎಂದು ಹೇಳುತ್ತಿದ್ದಾರಂತೆ. ಆದರೆ ಚೋರ್ ಬಜಾರ್ ಸಿನೆಮಾದಲ್ಲಿ ನಾನು ಕೊಂಚ ಫಿಟ್ ಆಗಿಯೇ ಕಾಣಿಸಿಕೊಂಡಿದ್ದೇನೆ. ಇಲ್ಲಿಯವರೆಗೂ ನಾನು ಲವ್, ಆಕ್ಷನ್, ಎಮೋಷನ್ ಸಿನೆಮಾಗಳನ್ನು ಮಾಡಿದ್ದೇನೆ. ಇನ್ನು ಮುಂದೆ ಕಾಮಿಡಿ ಓರಿಯೆಂಟೆಡ್ ಹಾಗೂ ಫ್ಯಾಮಿಲಿ ಓರಿಯೆಂಟೆಡ್ ಸಿನೆಮಾಗಳನ್ನು ಮಾಡಲು ಇಚ್ಚೆಹೊಂದಿದ್ದೇನೆ ಎಂದಿದ್ದಾರೆ.
ಇನ್ನೂ ನನ್ನ ಸಿನೆಮಾಗಳ ಮೇಲೆ ನಾನೇ ನಿರ್ಧಾರ ತೆಗೆದುಕೊಳ್ಳುತ್ತೇನೆ. ಎಂದಿಗೂ ನಾನು ಪೂರಿ ಜಗನ್ನಾಥ್ ಮಗ ಎಂದು ಸಿನೆಮಾ ಕಥೆ ಕೇಳುವುದಿಲ್ಲ. ನಾನು ಹಿರೋ ಆಗಿ ಕಥೆ ಕೇಳುವುದಿಲ್ಲ ಬದಲಿಗೆ ಒಬ್ಬ ಪ್ರೇಕ್ಷಕನಾಗಿ ಕಥೆಯನ್ನು ಕೇಳುತ್ತೇನೆ. ನನಗೆ ಇಷ್ಟವಾದರೇ ಒಪ್ಪಿಗೆ ನೀಡುತ್ತೇನೆ ಇಲ್ಲ ಅಂದ್ರೆ ಇಲ್ಲ. ಹಿರೋ ಆಗಿ ನನ್ನ ಸ್ವಂತ ಪ್ರತಿಭೆಯಿಂದ ಮುಂದುವರೆಯಲು ನಿರ್ಧಾರ ಮಾಡಿದ್ದೇನೆ. ಸಿನಿರಂಗದಲ್ಲಿ ಯಾವುದೇ ತಂದೆ ತನ್ನ ಮಗನಿಗೆ ಸ್ಟಾರ್ ಡಮ್ ಕೊಡಲು ಸಾಧ್ಯವಿಲ್ಲ. ಅವರ ಸ್ವಂತ ಪ್ರತಿಭೆಯ ಮೇಲೆ ಸ್ಟಾರ್ ಡಮ್ ಸಂಪಾದಿಸಿಕೊಳ್ಳಬೇಕು. ಅದೇ ರೀತಿ ನಾನು ಸಹ ನನ್ನ ಸ್ವಂತಿಕೆಯ ಮೇಲೆ ಸ್ಟಾರ್ ಆಗಿ ನನ್ನ ತಂದೆಯ ಹೆಸರನ್ನು ಮತಷ್ಟು ಖ್ಯಾತಿ ಗೊಳಿಸಲು ಅಂದುಕೊಳ್ಳುತ್ತೇನೆ ಎಂದಿದ್ದಾರೆ.
ಒಂದು ಸಮಯದಲ್ಲಿ ನಮ್ಮ ಆಸ್ತಿಯೆಲ್ಲಾ ಕಳೆದುಕೊಂಡಿದ್ದೇವು. ಆ ವಿಚಾರ ನಮಗೆ ತಿಳಿಯಬಾರದೆಂದು ನಮ್ಮನ್ನು ಹಾಸ್ಟೆಲ್ ನಲ್ಲಿ ಇಟ್ಟಿದ್ದರು ನಮ್ಮ ತಾಯಿ. ಆ ಸಮಯದಲ್ಲಿ ನಾವು ಹಾಕಿಕೊಳ್ಳುವ ಬಟ್ಟೆ, ಊಟ ಎಲ್ಲದರಲ್ಲೂ ವ್ಯತ್ಯಾಸಗಳು ಬಂದವು. ಜೊತೆಗೆ ನಮ್ಮ ಕಾರುಗಳು, ಮನೆಗಳೂ ಸಹ ಮಾರಿಬಿಟ್ಟರು ಎಂಬ ವಿಚಾರ ನನಗೆ ತುಂಬಾ ತಡವಾಗಿ ತಿಳಿಯಿತು. ಆದರೆ ಆ ಸಂದರ್ಭದಲ್ಲಿ ನಮ್ಮ ತಾಯಿ ನಮ್ಮ ತಂದೆಗೆ ತುಂಬಾನೆ ಸಪೋರ್ಟ್ ಆಗಿ ನಿಂತರು. ನಮ್ಮ ತಂದೆ ಸಹ ತುಂಬಾನೆ ಸ್ಟ್ರಾಂಗ್ ಅದರಿಂದಲೇ ಆ ಪರಿಸ್ಥಿತಿಯಿಂದ ಮತ್ತೆ ಚೇತರಿಸಿಕೊಂಡೆವು. ಆ ಸಮಯದಲ್ಲಿ ನಮ್ಮ ತಂದೆ ತಾಯಿ ವಿಚ್ಚೇದನ ಪಡೆದುಕೊಂಡರು ಎಂಬಾ ಸುದ್ದಿ ಸಹ ಹರಿದಾಡಿತ್ತು. ಆದರೆ ಅದರಲ್ಲಿ ಯಾವುದೇ ರೀತಿಯ ನಿಜಾಂಶ ಇಲ್ಲ ಎಂದು ಆಕಾಶ್ ಪೂರಿ ತಿಳಿಸಿದ್ದಾರೆ.