Film News

ದಿಲ್ ರಾಜು, ಶಂಕರ್, ರಾಮಚರಣ್ ಕಾಂಬಿನೇಷನ್‌ನಲ್ಲಿ ಬಿಗ್ ಪ್ರಾಜೆಕ್ಟ್ !

ಹೈದರಾಬಾದ್: ಟಾಲಿವುಡ್ ನ ಖ್ಯಾತ ನಿರ್ಮಾಪಕ ದಿಲ್ ರಾಜು, ಕಾಲಿವುಡ್ ಮೋಸ್ಟ್ ಸಕ್ಸಸ್‌ಪುಲ್ ಡೈರೆಕ್ಟರ್ ಶಂಕರ್, ಮೆಗಾ ಫ್ಯಾಮಿಲಿಯ ನಟ ರಾಮಚರಣ್ ತೇಜ್ ಈ ತ್ರಿಮೂರ್ತಿಗಳ ಕಾಂಬಿನೇಷನ್‌ನಲ್ಲಿ ಬಿಗ್ ಸಿನೆಮಾವೊಂದು ತೆರೆಗೆ ಬರಲಿದೆ ಎಂದು ತಿಳಿದು ಬಂದಿದೆ.

ನಟ ರಾಮ್‌ಚರಣ್ ಗಾಗಿಯೇ ಒಂದು ವಿಶೇಷವಾದ ಸಿನೆಮಾವೊಂದನ್ನು ನಿರ್ಮಾಣ ಮಾಡಲು ನಿರ್ಮಾಪಕ ದಿಲ್‌ರಾಜು ಪ್ಲಾನ್ ಮಾಡಿದ್ದು, ಇದಕ್ಕಾಗಿ ಖ್ಯಾತ ನಿರ್ದೇಶಕ ಶಂಕರ್ ಜೊತೆ ಕೈ ಜೋಡಿಸಿದ್ದಾರಂತೆ. RC15 ಎಂಬ ಹ್ಯಾಷ್‌ಟ್ಯಾಗ್ ನೊಂದಿಗೆ ರಾಮಚರಣ್ ರವರ 15 ನೇ ಸಿನೆಮಾ ಕುರಿತಂತೆ ಅನೇಕ ದಿನಗಳಿಂದ ಸುದ್ದಿ ಹರಿದಾಡುತ್ತಿದ್ದು, ಇದೀಗ ಅಧಿಕೃತವಾಗಿ ದಿಲ್ ರಾಜು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದ್ದಾರೆ.

ಪ್ರಸ್ತುತ ರಾಮ್‌ಚರಣ್ ರಾಜಮೌಳಿ ನಿರ್ದೇಶನ ಆರ್.ಆರ್.ಆರ್ ಹಾಗೂ ಆಚಾರ್‍ಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ಈ ಎರಡೂ ಚಿತ್ರಗಳ ಶೂಟಿಂಗ್ ಮುಗಿಯಲಿದೆ. ಈಗಾಗಲೇ ನಿರ್ದೇಶಕ ಶಂಕರ್ ರಾಮಚರಣ್ ರವರಿಗೆ ಚಿತ್ರದ ಕಥೆಯನ್ನು ಸಹ ರೆಡಿ ಮಾಡಿದ್ದಾರೆ ಎಂಬ ರೂಮರ್‍ಸ್ ಸಹ ಬಂದಿದೆ. ಇನ್ನೂ ರಾಮಚರಣ್ 15ನೇ ಸಿನೆಮಾದ ಅಪ್ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಇದು ವಿಶ್ವವ್ಯಾಪಿ ಟ್ರೆಂಡಿಂಗ್ ಕ್ರಿಯೇಟ್ ಮಾಡಿತ್ತು. ಇನ್ನೂ ಕೆಲವು ಗಂಟೆಗಳ ಹಿಂದೆಯಷ್ಟೆ ರಾಮಚರಣ್ ಹೊಸ ಸಿನೆಮಾದ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದ ನಂತರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರಂತೆ.

ಅಂದಹಾಗೆ ಈ ಚಿತ್ರ ನಿರ್ಮಾಪಕ ದಿಲ್ ರಾಜು ರವರ 50ನೇ ಸಿನೆಮಾ ಆಗಿದ್ದು, ಭರ್ಜರಿಯಾಗಿ ತಯಾರು ಮಾಡಲು ಪ್ಲಾನ್ ಮಾಡಿದ್ದಾರೆ. ಈ ನೇಪತ್ಯದಲ್ಲೇ ನಿರ್ದೇಶಕ ಶಂಕರ್ ಹಾಗೂ ರಾಮಚರಣ್ ರವರನ್ನು ಒಂದು ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈ ಚಿತ್ರ ಇತಿಹಾಸದ ಕಥನವೊಂದನ್ನು ಆಧರಿಸಿ ಬರಲಿದ್ದು, ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಇನ್ನೂ ಈ ಚಿತ್ರ 2022ನೇ ವರ್ಷದಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

Trending

To Top