News

(video)ನಟ ದಿಗಂತ್ ಮತ್ತು ಐಂದ್ರಿತಾ ರೈ ಮದುವೆಯ ಮೆಹಂದಿ ಶಾಸ್ತ್ರ ಹೇಗಿತ್ತು ನೋಡಿ!

andy

ನಿಮಗೆಲ್ಲ ಗೊತ್ತಿರೋ ಹಾಗೆ ಸ್ಯಾಂಡಲ್ವುಡ್ ನ ಮುದ್ದಾದ ಜೋಡಿ ಆದ ದೂಧ್ ಪೇಡ ದಿಗಂತ್ ಹಾಗು ಐಂದ್ರಿತಾ ರೇ ಅವರು ಮದುವೆ ಆಗುತ್ತಿದ್ದಾರೆ. ಇಂದು ಅವರ ಮದುವೆ ಸಮಾರಂಭ ಬೆಂಗಳೂರಿನ ಹತ್ತಿರ ಚಿಕ್ಕಬಳ್ಳಾಪುರದ ಒಂದು ರೆಸಾರ್ಟ್ ನಲ್ಲಿ ನಡೆಯಲಿದೆ. ನೆನ್ನೆ ದಿಗಂತ್ ಹಾಗು ಆಂಡಿ ಅವರ ಅರಿಶಿನ ಶಸ್ತ್ರ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ದಿಗಂತ್ ಹಾಗು ಆಂಡಿ ಅವರ ಕುಟುಂಬದವರು, ಇಬ್ಬರ ಸ್ನೇಹಿತರು ಬಂದಿದ್ದರು. ಕನ್ನಡದ ತಾರೆಯರು ಇಂದು ದಿಗಿ ಆಂಡಿ ಅವರ ಮದುವೆಗೆ ಬರಲಿದ್ದಾರೆ. ದಿಗಿ ಹಾಗು ಆಂಡಿ ಅವರ ಅರಶಿನ ಶಾಸ್ತ್ರದ ಸುಂದರ ವಿಡಿಯೋ ನೋಡಿ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ದಿಗಂತ್ ಹಾಗು ಐಂದ್ರಿತಾ ರೇ ಅವರು ಸುಮಾರು 6 ರಿಂದ 7 ವರ್ಷದಿಂದ ಒಬ್ಬರನ್ನೊಬ್ಬರು ಬಹಳ ಇಷ್ಟ ಪಡುತ್ತಿದ್ದರು. ಇವರಿಬ್ಬರು ಯೋಗರಾಜ್ ಭಟ್ಟರ ಮನಸಾರೆ ಚಿತ್ರದಲ್ಲಿ ನಟಿಸಿದ್ದರು. ಅದಾದ ನಂತರ ಪಾರಿಜಾತ ಎಂಬ ಚಿತ್ರದಲ್ಲಿ ಕೂಡ ಒಂದಾಗಿ ನಟಿಸಿದ್ದರು. ಐಂದ್ರಿತಾ ರೇ ಅವರು ಮೂಲತಃ ಬಂಗಾಳ ದವರು. ಮದುವೆ ನಮ್ಮ ಕರ್ನಾಟಕದ ಸಂಪ್ರದಾಯ ದಂತೆ ನಡೆಯಲಿದೆ.
ಇವತ್ತು ಬೆಂಗಳೂರಿನ ಹತ್ತಿರ ಇರುವ ಚಿಕ್ಕ ಬಳ್ಳಾಪುರ ದಲ್ಲಿ ದಿಗಂತ್ ಹಾಗು ಐಂದ್ರಿತಾ ರೇ ಅವರ ಮದುವೆ ಸಮಾರಂಭ ನಡೆಯಲಿದೆ. ಇವರಿಬ್ಬರಿಗೆ ಶುಭ ಹಾರೈಸಲು ಕನ್ನಡದ ತಾರೆಯರಾದ ಶಿವಣ್ಣ, ಪುನೀತ್ ರಾಜಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ, ಯೋಗರಾಜ್ ಭಟ್, ಪ್ರೀತಮ್ ಗುಬ್ಬಿ, ಹರಿಕೃಷ್ಣ, ಪೂಜಾ ಗಾಂಧಿ, ರಾಗಿಣಿ ದ್ವಿವೇದಿ, ಹಾಗು ಹಲವಾರು ಕನ್ನಡದ ತಾರೆಯರು ಬರಲಿದ್ದಾರೆ.
ಕನ್ನಡದ ಮತ್ತೊಂದು ಹೊಸ ಜೋಡಿಗೆ ನಮ್ಮ ಕಡೆ ಇಂದ ಶುಭ ಹಾರೈಕೆಗಳು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿ.

Trending

To Top