Film News

ಎರಡನೇ ಮದುವೆ ತಯಾರಿಯಲ್ಲಿ ದಿಯಾ ಮಿರ್ಜಾ!

ಮುಂಬೈ: ಬಾಲಿವುಡ್‌ನ ನಟಿ ಹಾಗೂ ನಿರ್ಮಾಪಕಿಯಾಗಿರುವ ದಿಯಾ ಮಿರ್ಜಾ ಇದೀಗ ಎರಡನೇ ಮದುವೆ ಸಿದ್ದತೆಯಲ್ಲಿದ್ದಾರಂತೆ. 40ವರ್ಷ ವಯಸ್ಸಿನ ದಿಯಾ ಮಿರ್ಜಾ ವೈಭವ್ ರೇಖಿ ಎಂಬುವವರ ಜೊತೆಗೆ ಸರಳವಾಗಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ.

ನಟಿ ದಿಯಾ ಮಿರ್ಜಾ ಕಳೆದ 2001 ರಲ್ಲಿ ರೆಹನಾ ಹೇ ತೇರಿ ದಿಲ್ ಮೇ ಎಂಬ ಚಿತ್ರದ ಮೂಲಕ ಬಾಲಿವುಡ್ ಸಿನಿರಂಗಕ್ಕೆ ಪ್ರವೇಶ ನೀಡಿದ್ದರು. ನಂತರ ಖ್ಯಾತ ಬಾಲಿವುಡ್ ನಟಿಯಾಗಿ ಅಪಾರ ಸಂಖ್ಯೆಯ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಸಹನಟಿಯಾಗಿ ಹಾಗೂ ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಮುಂದುವರೆಯುತ್ತಿದ್ದಾರೆ. ಇನ್ನೂ ದಿಯಾ ಮಿರ್ಜಾ ತನ್ನ ಬ್ಯುಸಿನಸ್ ಪಾಟರ್ನರ್ ಆಗಿದ್ದ ಸಾಹುಲ್ ಸಂಘಾ ಎಂಬುವವರೊಂದಿಗೆ ಮದುವೆಯಾಗಿದ್ದರು. ನಂತರ ಇಬ್ಬರಲ್ಲಿ ಹೊಂದಾಣಿಕೆಯಾಗದ ಕಾರಣ 2019 ರಲ್ಲಿ ಪರಸ್ಪರ ಒಪ್ಪಿಗೆಯಿಂದ ವಿಚ್ಚೇದನ ಪಡೆದಿದ್ದರು.

ಇದೀಗ ನಟಿ ದಿಯಾ ಮಿರ್ಜಾ ಮತ್ತೊಂದು ಮದುವೆಯಾಗುವ ಸಿದ್ದತೆಯಲ್ಲಿದ್ದಾರೆ. ಮುಂಬೈನ ಉದ್ಯಮಿಯಾದ ವೈಭವ್ ರೇಖಿ ಎಂಬುವವರ ಜೊತೆ ಸರಳವಾದ ಸಮಾರಂಭವೊಂದರಲ್ಲಿ ಮದುವೆಯಾಗುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು, ಈ ಕುರಿತು ದಿಯಾ ಮಿರ್ಜಾ ಸ್ಪಷ್ಟ ಹೇಳಿಕೆ ನೀಡಿಲ್ಲ. ಪಿರಾಮಿಲ್ ಫಂಡ್ ಮ್ಯಾನೆಜ್‌ಮೆಂಟ್ ಸಂಸ್ಥೆಯ ಮಾಲೀಕರಾದ ವೈಭವ್ ರೇಖಿ ಈ ಹಿಂದೆ ಯೋಗ ತರಬೇತಿಗಾರ್ತಿಯಾದ ಸುನೈನಾ ರೇಖಿ ಎಂಬುವವರ ಜೊತೆ ವಿವಾಹವಾಗಿದ್ದು, ವಿಚ್ಚೇಧನ ಪಡೆದಿದ್ದಾರೆ. ಇದೀಗ ದಿಯಾ ಮಿರ್ಜಾ ರವರೊಂದಿಗೆ ಪುನಃ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ದಿಯಾ ಮಿರ್ಜಾ ಹಾಗೂ ವೈಭವ್ ರೇಖಿ ಮದುವೆ ಇಂದೇ (ಫೆ.15) ರಂದು ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದರೂ ಕೂಡ ಈ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇನ್ನೂ ವೈಭವ್ ರವರಿಗೆ ಓರ್ವ ಮಗಳು ಸಹ ಇದ್ದಾರೆ. ಇನ್ನೂ ಈ ಹಿಂದೆ ದಿಯಾ ಮಿರ್ಜಾ ಹಾಗೂ ಸಾಹಿಲ್ ಸಂಘಾ ರವರೊಂದಿಗೆ ವಿಚ್ಚೇದನ ಪಡೆದಿದ್ದು, ನಾವು ಪರಸ್ಪರ ಒಪ್ಪಿ ವಿಚ್ಚೇದನ ಪಡೆದಿದ್ದು, ಮುಂದಿನ ದಿನಗಳಲ್ಲಿ ಗೆಳೆಯರಾಗಿ ಇರುತ್ತೇವೆ ಎಂದಿದ್ದರು.

Trending

To Top