ಮುಂಬೈ: ಬಾಲಿವುಡ್ ನಟಿ ದಿಯಾ ಮಿರ್ಜಾ ಮುಂಬೈನ ಉದ್ಯಮಿ ವೈಭವ್ ರೇಖಿ ರವರೊಂದಿಗೆ ಎರಡನೇ ಮದುವೆಯಾಗಿದ್ದು, ಇವರಿಬ್ಬರಿಗೂ ಮದುವೆ ಮಾಡಿಸಿದ ಮಹಿಳಾ ಪುರೋಹಿತೆಯ ಪೊಟೋಬೊಂದು ಸಖತ್ ವೈರಲ್ ಆಗುತ್ತಿದೆ.
ಫೆ.15 ರಂದು ದಿಯಾ ಮಿರ್ಜಾ ಹಾಗೂ ವೈಭವ್ ರೇಖಿ ಇಬ್ಬರ ಮದುವೆ ಸರಳವಾಗಿ ಕೆಲವೇ ಗಣ್ಯರ ಸಮ್ಮುಖದಲ್ಲಿ ನಡೆದಿದೆ. ದಿಯಾ ಮಿರ್ಜಾ ತನ್ನ ಮದುವೆಯ ವಿಚಾರವನ್ನು ಗೌಪ್ಯವಾಗಿಟ್ಟಿದ್ದು, ಮದುವೆಯಾದ ಬಳಿಕ ಕೆಲವೊಂದು ಪೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಈ ಪೈಕಿ ಇವರಿಬ್ಬರಿಗೂ ಮದುವೆ ಮಾಡಿದ ಮಹಿಳಾ ಪುರೋಹಿತೆಯ ಪೊಟೋ ಸಖತ್ ವೈರಲ್ ಆಗಿದೆ.
ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಮದುವೆ ಮಾಡಲು ಪುರುಷರು ಪೌರೋಹಿತ್ಯ ವಹಿಸಿಕೊಳ್ಳುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈಗಲೂ ಕೂಡ ಅದೇ ಮುಂದವರೆದುಕೊಂಡು ಬರುತ್ತಿದೆ. ಆದರೆ ಮಹಿಳೆಯರಿಗೂ ಸಮಾನ ಅವಕಾಶ ನೀಡಬೇಕೆಂದು ಮಹಿಳೆಯರೂ ಸಹ ಪೌರೋಹಿತ್ಯ ಮಾಡಬಹುದೆಂಬ ಸಂದೇಶ ಸಾರುವ ಸಲುವಾಗಿ ದಿಯಾ ಮಿರ್ಜಾ ಅವರ ಮದುವೆಗೆ ಮಹಿಳೆಯೊಬ್ಬರನ್ನು ಪೌರೋಹಿತ್ಯ ವಹಿಸುವಂತೆ ತಿಳಿಸಿದ್ದು, ಆ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಪೊಟೋ ಹಂಚಿಕೊಂಡಿರುವ ದಿಯಾ ಒಂದು ಸಂದೇಶವನ್ನು ಸಹ ನೀಡಿದ್ದಾರೆ. ನಮ್ಮ ಮದುವೆ ನೆರವೇರಿಸಿಕೊಟ್ಟ ಶೀಲಾ ರವರಿಗೆ ಧನ್ಯವಾದಗಳು, ಸಮಾನತೆಗಾಗಿ ನಾವು ಜೊತೆಯಾಗಿ ಹೋರಾಟಲು ಹೆಮ್ಮೆ ಎನ್ನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ. ಕಳೆದ 2004 ರಲ್ಲಿ ದಿಯಾ ಹಾಗೂ ಸಾಹಿಲ್ ಸಂಘ ಇವರಿಬ್ಬರಿಗೂ ಮದುವೆ ಆಗಿದ್ದು, ಕೆಲವೊಂದು ಕಾರಣಗಳಿಂದ ೨೦೧೯ ರಲ್ಲಿ ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಚೇದನ ಪಡೆದುಕೊಂಡಿದ್ದರು.
