Cinema

ಚಿರು ಅಗಲಿಕೆಯ ನಂತರ ಮೊದಲ ಬಾರಿಗೆ ಲೈವ್ ಬಂದು ಧ್ರುವ ಏನ್ ಹೇಳಿದ್ದಾರೆ ನೋಡಿ

ಜುಲೈ 15ರಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣ ಶಂಕರ್ ಅವರಿಗೆ ಕರೊನಾ ಸೋಂಕು ಪಾಸಿಟಿವ್ ಬಂದಿದೆ ಎಂದು ಸ್ವತಃ ಧ್ರುವ ಸರ್ಜಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಕರೊನಾ ಸೋಂಕು ಧೃಡ ಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ಪ್ರೇರಣ ಹಾಗೂ ಧ್ರುವ ಸರ್ಜಾ, ಎರಡೇ ದಿನಕ್ಕೆ ಅಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ. ಕರೊನಾ ರೋಗ ಲಕ್ಷಣಗಳು ಮೈಲ್ಡ್ ಆಗಿ ಇದ್ದ ಕಾರಣ, ಅವರಿಬ್ಬರು ಆಸ್ಪತ್ರೆಯಲ್ಲಿ ಇರುವ ಅಗತ್ಯವಿಲ್ಲ, ಹೋಮ್ ಕ್ವಾರಂಟೈನ್ ನಲ್ಲಿದ್ದು ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯಬಹುದು ದೂರವಾಣಿ ಮೂಲಕ ವೈದ್ಯರು ನೀಡುವ ಸಲಹೆಯನ್ನು ಪಾಲಿಸಿದರೆ ಸಾಕು, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ.ಸದ್ಯ ಚಿರು ಅಗಲಿಕೆಯ ನಂತರ ಮೊದಲ ಬಾರಿಗೆ ಧ್ರುವ ಲೈವ್ ಬಂದು ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿ
ಇದು ಒಂದು ರೀತಿಯಲ್ಲಿ ಎಲ್ಲರ ಆತಂಕವನ್ನು ನಿವಾರಣೆ ಮಾಡಿದೆ. ಇದರಿಂದ ಧ್ರುವ ಸರ್ಜಾ ಹಾಗೂ ಸರ್ಜಾ ಕುಟುಂಬದ ಎಲ್ಲಾ ಅಭಿಮಾನಿಗಳು ಹಾಗೂ ಪ್ರೀತಿ ಪಾತ್ರರ ಆತಂಕವನ್ನು ಸ್ವಲ್ಪ ಕಡಿಮೆ ಮಾಡಿತ್ತು. ಮನೆಗೆ ಬಂದ ನಂತರ ಆರಾಮವಾಗಿರುವ ಧ್ರುವ ಸರ್ಜಾ, ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದರು.
ನಾನು ಆರಾಮವಾಗಿದ್ದೇನೆ ಟೆನ್ಷನ್ ಬೇಡ ಎಂದು ಭರವಸೆ ನೀಡಿದ್ದಾರೆ. ಮನೆಯಲ್ಲಿ ಟ್ರೆಡ್ ಮಿಲ್ ಮೇಲೆ ಓದುತ್ತಾ, ಲೈವ್ ಬಂದಿದ್ದರು ಧ್ರುವ. ಅಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದೇನೆ, ಆರಾಮವಾಗಿದ್ದೇನೆ, ಪ್ರೇರಣ ಕೂಡ ಚೆನ್ನಾಗಿದ್ದಾರೆ. ಮನೆಯಲ್ಲಿ ಟ್ರೆಡ್ ಮಿಲ್ ಇರೋದ್ರಿಂದ ವರ್ಕ್ ಔಟ್ ಮಾಡ್ತಾ ಇದೀನಿ, ಪ್ರೇರಣ ಅವರಿಗೂ ವರ್ಕ್ ಔಟ್ ಮಾಡಿಸಬೇಕು, ಆರಂಭದಲ್ಲಿ ಸ್ವಲ್ಪ ಸುಸ್ತಾಗುತ್ತೆ ಅದು ಬಿಟ್ಟರೆ ಇನ್ನೇನು ಸಮಸ್ಯೆ ಇಲ್ಲ ಎಂದಿದ್ದಾರೆ.
ಮೇಘನಾ ರಾಜ್ ಅವರ ಬಗ್ಗೆ ಮಾತನಾಡಿ, ಅವರೂ ಕೂಡ ಚೆನ್ನಾಗಿದ್ದಾರೆ ಎಂದು ತಿಳಿಸಿರುವ ಧ್ರುವ. ಆದಷ್ಟು ಬೇಗ ಹೊರಗಡೆ ಬರ್ತೀನಿ, ಟೆನ್ಷನ್ ಬೇಡ ಎಂದಿದ್ದಾರೆ. ಜೊತೆಗೆ, ಎಲ್ಲರೂ ಬಿಸಿನೀರು ಕುಡಿಯಿರಿ, ಗಾರ್ಗಲ್ ಮಾಡಿ ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಿ, ಎಲ್ಲರೂ ಖುಷಿ ಇಂದ ಇರಬೇಕು. ಒಂದಾಗಿ ಸೇರಿ ಕರೊನಾನ ಓಡಿಸೋಣ. ನಾಳೆ ಸಿಗ್ತಿನಿ ಜೈ ಆಂಜನೇಯ. ಎಂದು ಹೇಳುವ ಮೂಲಕ ಲೈವ್ ಸೆಷನ್ ಮುಗಿಸಿದ್ದಾರೆ ಧ್ರುವ.

Trending

To Top