Film News

ಕಮಾಂಡೊ ಆಗಿ ಮಿಂಚಲಿದ್ದಾರೆ ಪೊಗರು ಹಿರೋ!

ಬೆಂಗಳೂರು: ಮಾಸ್ ಸಿನೆಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದ ಧ್ರುವ ಸರ್ಜಾ ರವರು ಹೊಸ ಸಿನೆಮಾದಲ್ಲಿ ನಟಿಸಲಿದ್ದು, ಮಿಲಟರಿ ಕಮಾಂಡೋ ಗೆಟಪ್ ನಲ್ಲಿ ಮಿಂಚಲಿದ್ದಾರೆ.

ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪೊಗರು ಚಿತ್ರ ಇನ್ನೇನು ತೆರೆ ಮೇಲೆ ಬರಲು ಸಿದ್ದವಿದ್ದು, ಇದೀಗ ಮತ್ತೊಂದು ಆಕ್ಷನ್ ಚಿತ್ರವೊಂದನ್ನು ಘೋಷಿಸಿದ್ದಾರೆ. ಈ  ಚಿತ್ರದಲ್ಲಿ ಪ್ಯಾರಾ ಮಿಲಿಟರಿ ಕಮಾಂಡೋ ಲುಕ್ ನಲ್ಲಿ ಧ್ರುವ ಸರ್ಜಾ ದರ್ಶನ ನೀಡಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಜಗ್ಗುದಾದ ಜೊತೆ ಸಿನೆಮಾ ಮಾಡಿದ ರಾಘವೇಂದ್ರ ಹೆಗಡೆ ರವರೇ ಧ್ರುವ ಸರ್ಜಾ ಜೊತೆ  ಚಿತ್ರ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಮೊದಲ ಭಾಗದ ಕಥೆಯನ್ನು ಕೇಳಿರುವ ಧ್ರುವ ಕಥೆಯನ್ನು ಇಷ್ಟಪಟ್ಟಿದ್ದು, ಈ ಕುರಿತು ರಾಘವೇಂದ್ರ ಸರ್ ಕಥೆ ಹೇಳಿದ್ದು, ತುಂಬಾ ಅದ್ಬುತವಾದ ಕಥೆಯಾಗಿದೆ, ಜೈ ಹನುಮಾನ್ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು.

ಇನ್ನೂ ಈಗಾಗಲೇ ಚಿತ್ರದ ಮೊದಲ ಭಾಗದ ಕಥೆಯನ್ನು ಧ್ರುವ ರವರಿಗೆ ಹೇಳಿದ್ದು, ಉಳಿದ ಭಾಗವನ್ನು ಜನವರಿಯೊಳಗೆ ಹೇಳಿ ಮುಗಿಸುತ್ತಾರಂತೆ. ನಂತರ ಚಿತ್ರದಲ್ಲಿನ ಪಾತ್ರಗಳಿಗೆ ನಟರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಎಲ್ಲಾ ಮುಗಿದ ಬಳಿಕ ಶೂಟಿಂಗ್ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.

ಈ ಚಿತ್ರವನ್ನು ನಿರ್ದೇಶಕ ರಾಘವೇಂದ್ರ ಹೆಗಡೆ ನಿರ್ದೇಶಿಸಲಿದ್ದು, ಮಿಲಟರಿ ಕುರಿತ ಸಿನೆಮಾ ಆಗಿದೆ. ಇನ್ನೂ ಈ ಚಿತ್ರವನ್ನು ನಾಲ್ಕೈದು ಭಾಷೆಗಳಲ್ಲಿ ಬಿಡುಗಡೆ ಮಾಡಬೇಕು ಎಂಬ ಯೋಚನೆ ಸಹ ನಿರ್ದೇಶಕರಿಗೆ ಇದೆಯಂತೆ. ಇನ್ನೂ ಈಗಾಗಲೇ ಖರಾಬು ಹಾಡಿನ ಮೂಲಕ ಯುವಜನತೆಯಲ್ಲಿ ಕಿಚ್ಚು ಹಬ್ಬಿಸಿದ ಪೊಗರು ಚಿತ್ರ ರಿಲೀಸ್ ಗಾಗಿ ಧ್ರುವ ಸರ್ಜಾ ಅಪಾರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Trending

To Top