ಜಾಲಿ ಟ್ರಿಪ್ ನಲ್ಲಿ ಧ್ರುವ ಸರ್ಜಾ ದಂಪತಿ: ವೈರಲ್ ಆದ ಪೊಟೋಸ್

ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ಪೊಗರು ರಿಲೀಸ್ ಬಳಿಕ ರಾಜ್ಯದ ಅನೇಕ ಕಡೆ ಪೊಗರು ಸಕ್ಸಸ್ ಮೀಟ್ ನಡೆಸಿದ ಧ್ರುವ ಸರ್ಜಾ ಇದೀಗ ರಿಲ್ಯಾಕ್ಸ್ ಮೂಡ್‌ಗೆ ತೆರಳಿದ್ದು, ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಜೊತೆ ಜಾಲಿ ಟ್ರಿಪ್‌ಗೆ ತೆರಳಿದ್ದು, ಕೆಲವೊಂದು ಪೊಟೋಗಳು ವೈರಲ್ ಆಗುತ್ತಿದೆ.

ಇತ್ತೀಚಿಗೆ ಸಿನೆಮಾ ಸೆಲೆಬ್ರೆಟಿಗಳು ಜಾಲಿ ಟ್ರಿಪ್‌ಗಾಗಿ ಮಾಲ್ಡೀವ್ಸ್‌ಗೆ ತೆರಳಿದ್ದರು. ಆದರೆ ಧ್ರುವ ಸರ್ಜಾ ದಂಪತಿ ಮಾತ್ರ ಗೋವಾ ಪ್ರವಾಸಕ್ಕೆ ತೆರಳಿದ್ದಾರೆ. ಪೊಗರು ಚಿತ್ರಕ್ಕಾಗಿ ಸುಮಾರು 4 ವರ್ಷಗಳಿಂದ ಬ್ಯುಸಿಯಾಗಿದ್ದ ಧ್ರುವ ಸರ್ಜಾ ಇದೀಗ ಪೊಗರು ಸಕ್ಸಸ್ ಬಳಿಕ ಪತ್ನಿ ಜೊತೆ ಗೋವಾ ಟ್ರಿಪ್‌ಗೆ ಹೋಗಿದ್ದಾರೆ. ಇನ್ನೂ ಈ ಟ್ರಿಪ್‌ನಲ್ಲಿ ತೆಗೆದ ಕೆಲವೊಂದು ಪೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಗೋವಾದಲ್ಲಿ ಸಂಜೆಯ ವೇಳೆ ಪತ್ನಿ ಪ್ರೇರಣಾ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿರುವ ಧ್ರುವ ಸರ್ಜಾ ಪ್ರೇರಣಾ ಮಡಿಯಲ್ಲಿ ತಲೆಯಿಟ್ಟು ಮಲಗಿರುವ ಪೊಟೋ ಸಖತ್ ವೈರಲ್ ಆಗುತ್ತಿದೆ. ಇನ್ನೂ ಪೊಟೋವನ್ನು ಪ್ರೇರಣಾ ಸೋಷಿಯಲ್ ಮಿಡೀಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಈ ಪೊಟೋಗೆ ಅಭಿಮಾನಿಗಳು ಲೈಕ್ಸ್ ಹಾಗೂ ಕಾಮೆಂಟ್ಸ್‌ಗಳ ಸುರಿಮಳೆಗೈದಿದ್ದಾರೆ.

ಇನ್ನೂ ಸತತವಾಗಿ ಹಿಟ್ ಸಿನೆಮಾಗಳಲ್ಲಿ ನಟಿಸುತ್ತಿರುವ ಧ್ರುವ ಸರ್ಜಾ ಗೆ ಪೊಗರು ಚಿತ್ರ ೪ನೇ ಚಿತ್ರವಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹವಾ ಕ್ರಿಯೇಟ್ ಮಾಡುತ್ತಿದ್ದೆ. ಅಷ್ಟೇ ಅಲ್ಲದೇ ದುಬಾರಿ ಚಿತ್ರದಲ್ಲಿ ಸಹ ಧ್ರುವ ಕಾಣಿಸಿಕೊಳ್ಳಲಿದ್ದು ಶೀಘ್ರದಲ್ಲೇ ಸಿನೆಮಾ ಶೂಟಿಂಗ್ ಪ್ರಾರಂಭವಾಗಲಿದೆ.

Previous articleಮಾನನಷ್ಟ ಕೇಸ್ ಸುಳಿಯಲ್ಲಿ ನಟಿ ಕಂಗನಾ!
Next articleರೊಮ್ಯಾಂಟಿಕ್ ಪೋಸ್ಟರ್ ಮೂಲಕ ಸುದ್ದಿಯಾದ ಡೈರೆಕ್ಟರ್ ಪುತ್ರ