Featured

ಮಹೇಂದ್ರ ಸಿಂಗ್ ಧೋನಿ ಅವರಿಗೆ ಇದ್ದಕಿದ್ದ ಹಾಗೆ ಕರೋನ ಪರೀಕ್ಷೆ! ಕಾರಣ ಏನು ಗೊತ್ತಾ

ಐಪಿಎಲ್ ( ಇಂಡಿಯನ್ ಪ್ರೀಮಿಯರ್ ಲೀಗ್ ) ಎಂದರೆ ಭಾರತೀಯರಿಗೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪ್ರಿಯರಿಗೂ ಸಹ ಐಪಿಎಲ್ ಎಂದರೆ ಅಚ್ಚುಮೆಚ್ಚು. ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ ಐಪಿಎಲ್ ಆರಂಭವಾಗಬೇಕಿತ್ತು. ಆದರೆ ಈ ವರ್ಷ, ಕರೊನಾ ವೈರಸ್ ಲಾಕ್ ಡೌನ್ ಕಾರಣದಿಂದಾಗಿ ಐಪಿಎಲ್ ಪಂದ್ಯಾವಳಿಗಳು ಏಪ್ರಿಲ್ ತಿಂಗಳಿನಲ್ಲಿ ಶುರುವಾಗಲಿಲ್ಲ. ಈ ವರ್ಷ ಐಪಿಎಲ್ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲ ಎಲ್ಲರಲ್ಲೂ ಇತ್ತು. ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿ ಐಪಿಎಲ್ ಆರಂಭವಾಗಲಿದೆ. ಆದರೆ, ಭಾರತದಲ್ಲಿ ಕರೊನಾ ವೈರಸ್ ಸೋಂಕು ಹಿಡಿತಕ್ಕೆ ಬರದೆ ಇರುವ ಕಾರಣ, ಯುಎಇ ನಲ್ಲಿ ಐಪಿಎಲ್ ನಡೆಯುವ ಸಂಭವವಿದೆ. ಹಾಗಾಗಿ ಪೂರಗ ಸಿದ್ಧತೆಯ ಹಾಗೆ ಐಪಿಎಲ್ ನ ಫ್ರಾಂಚೈಸಿಗಳು ಈಗಾಗಲೇ ತಮ್ಮ ತಮ್ಮ ತಂಡದ ಆಟಗಾರರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ.
ಟೀಮ್ ಇಂಡಿಯಾ ತಂಡದ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಅವರು 2019ರ ಜುಲೈ ಇಂದಾಗಿ ಕ್ರಿಕೆಟ್‍ ನಿಂದ ದೂರ ಇದ್ದರು. ಪ್ರಸ್ತುತ ಧೋನಿ ಅವರು ರಾಂಚಿಯಲ್ಲಿದ್ದಾರೆ. ಅಲ್ಲಿಂದಲೇ ಐಪಿಎಲ್ ಆಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕೆಲವು ಮಾಧ್ಯಮಗಳು ವರದಿ ಮಾಡಿರುವಂತೆ ಎಂ.ಎಸ್.ಧೋನಿ ಮತ್ತು ಸಿಎಸ್‍ಕೆ ತಂಡದ ಮತ್ತೊಬ್ಬ ಆಟಗಾರ ಮೋನು ಕುಮಾರ್ ಅವರು ಇದೇ ಬುಧವಾರ ತಮ್ಮ ಗಂಟಲು ದ್ರವದ ಮಾದರಿಯನ್ನು ಕರೊನಾ ಟೆಸ್ಟ್ ಮಾಡಿಸಲು ನೀಡಿದ್ದಾರೆ ಎಂದು ವರದಿಯಾಗಿದೆ.
ಗುರುನಾನಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಭಾಗವಾಗಿರುವ ಮೈಕ್ರೊಪ್ರಾಕ್ಸಿಸ್ ಲ್ಯಾಬ್ ನ ಹಿರಿಯ ಕಾರ್ಯನಿರ್ವಾಹಕರು ಎಂ.ಎಸ್.ಧೋನಿ ಅವರ ತೋಟದ ಮನೆಗೆ ಭೇಟಿ ನೀಡಿ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿದ್ದಾರೆ. ಧೋನಿ ಮತ್ತು ಮೋನು ಕುಮಾರ್ ಇಬ್ಬರಿಗೂ ಕೂಸ ಕೊರೊನಾ ವರದಿ ನೆಗೆಟಿವ್ ಬಂದರೆ, ಆಗಸ್ಟ್ 14ರಂದು ಚೆನ್ನೈಗೆ ತೆರಳಲಿದ್ದಾರೆ. ಆಗಸ್ಟ್ 22 ರಂದು ಚೆನ್ನೈನಿಂದ ಸಿ.ಎಸ್.ಕೆ ತಂಡವ್ ಯುಎಇಗೆ ತೆರಳುವ ನಿರೀಕ್ಷೆಯಿದೆ.
ಕಳೆದ ಎರಡು ವಾರಗಳಲ್ಲಿ ಐಪಿಎಲ್ ಫ್ರಾಂಚೈಸಿಗಳಲ್ಲಿ ನಡೆದ ಕೊರೊನಾ ಪರೀಕ್ಷೆಯಲ್ಲಿ, ಆಗಸ್ಟ್ 12ರಂದು ರಾಜಸ್ಥಾನ್ ರಾಯಲ್ಸ್ ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಜೊತೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‍ಮನ್ ಕರುಣ್ ನಾಯರ್ ಸಹ ವೈರಸ್‍ಗೆ ತುತ್ತಾಗಿದ್ದರು. ಆದರೆ ಅವರು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಬಿಸಿಸಿಐ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಐಪಿಎಲ್‍ನಲ್ಲಿ ಭಾಗವಹಿಸುವ ಎಲ್ಲ ಆಟಗಾರರು ಕೊರೊನಾ ಟೆಸ್ಟ್‍ಗೆ ಒಳಪಡಬೇಕು. ವರದಿಯಲ್ಲಿ ನೆಗೆಟಿವ್ ಬಂದವರು ಮಾತ್ರ ಟೂರ್ನಿಯಲ್ಲಿ ಭಾಗವಹಿಸಬಹುದಾಗಿದೆ.

Trending

To Top