ಕ್ರಿಕೆಟಿಗ ಎಂ.ಎಸ್.ಧೋನಿ ಕ್ರಿಕೆಟ್ ವರ್ಲ್ಡ್‌ನಲ್ಲಿ ದೊಡ್ಡ ಹೆಸರು. ಧೋನಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಹ ಇದೆ. ಇತ್ತೀಚಿಗಷ್ಟೆ ಧೋನಿ ಕುರಿತ ಸಿನೆಮಾ ಒಂದು ಸಹ ಬಿಡುಗಡೆಯಾಗಿ, ದೊಡ್ಡ ಮಟ್ಟದಲ್ಲಿ ಹಿಟ್ ಸಾಧಿಸಿತ್ತು. ಸಿನೆಮಾ ರಂಗದಲ್ಲೂ ಸಹ ಧೋನಿಗೆ ಇಂಟ್ರಸ್ಟ್ ಇದ್ದೂ, ನಿರ್ಮಾಪಕರಾಗಿ ಸಿನೆಮಾ ಒಂದು ನಿರ್ಮಾಣ ಮಾಡಲು ಮುಂದಾಗಿದ್ದಾರಂತೆ. ಇನ್ನೂ ಈ ಸಿನೆಮಾದಲ್ಲಿ ದೊಡ್ಡ ನಟಿ ಸಹ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಲಿವುಡ್ ರಂಗದ ಲೇಡಿ ಸೂಪರ್ ಸ್ಟಾರ್ ಎಂತಲೇ ಕರೆಯಲಾಗುವ ನಟಿ ನಯನತಾರಾ ಜೊತೆ ಸಿನೆಮಾ ಮಾಡಲಿದ್ದಾರೆ ಧೋನಿ. ತಮಿಳು ಸಿನೆಮಾವನ್ನು ನಿರ್ಮಾಣ ಮಾಡಲು ಧೋನಿ ಹೊರಟಿದ್ದು, ಈಗಾಗಲೇ ಸಿನೆಮಾ ಕೆಲಸಗಳನ್ನು ಶುರು ಮಾಡಿದ್ದಾರಂತೆ. ತಮಿಳುನಾಡಿನ ಜೊತೆ ವಿಶೇಷ ನಂಟಿರುವ ಧೋನಿ ತಮಿಳು ಸಿನೆಮಾ ಮಾಡಲು ಮುಂದಾಗಿದ್ದಾರೆ. ದೊಡ್ಡ ಅಭಿಮಾನಿ ಬಳಗ ಹೊಂದಿರುವ ಧೋನಿಗೆ ತಮಿಳುನಾಡಿದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಗುಂಪಿದೆ. ಅಲ್ಲಿ ಧೋನಿಯನ್ನು ತಲಾ ಎಂದು ಕರೆಯುತ್ತಾರೆ. ಜೊತೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಐಪಿಎಲ್ ನಲ್ಲಿ ಅನೇಕ ಬಾರಿ ಗೆಲುವು ತಂದುಕೊಟ್ಟಿದ್ದಾರೆ. ಈ ಎಲ್ಲಾ ಕಾರಣಗಳಿಂದ ತಮಿಳುನಲ್ಲಿ ಸಿನೆಮಾ ಮಾಡಲಿದ್ದಾರಂತೆ ಧೋನಿ.
ಇನ್ನೂ ಧೋನಿ ಕಾಲಿವುಡ್ ನಲ್ಲಿ ಸಿನೆಮಾ ನಿರ್ಮಾಣಕ್ಕೆ ಮುಂದಾಗಿದ್ದು, ರಜನಿಕಾಂತ್ ರವರ ಆಪ್ತ ಸಹಾಯಕ ಸಂಜಯ್ ಎಂಬುವವರನ್ನು ವ್ಯವಸ್ಥಾಪಕರನ್ನಾಗಿ ಸಹ ನೇಮಿಸಿಕೊಂಡಿದ್ದಾರಂತೆ. ಸಿನೆಮಾ ನಿರ್ಮಾಣಕ್ಕಾಗಿ ಈಗಾಗಲೇ ಪಕ್ಕಾ ಯೋಜನೆ ಸಹ ರೂಪಿಸಿಕೊಂಡಿದ್ದಾರೆ. ಸಿನೆಮಾದಲ್ಲಿ ಪ್ರಧಾನ ಪಾತ್ರಧಾರಿಯಾಗಿ ಲೇಡಿ ಸೂಪರ್ ಸ್ಟಾರ್ ನಯನತಾರ ನಟಿಸಲಿದ್ದಾರಂತೆ. ಮತ್ತೊಂದು ರೂಮರ್ ಸಹ ಈ ಸಿನೆಮಾದಿಂದ ಬಲವಾಗಿ ಕೇಳಿಬರುತ್ತಿದೆ. ಸಿನೆಮಾದಲ್ಲಿ ರಜನಿಕಾಂತ್ ರವರು ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಧೋನಿ ದೊಡ್ಡ ಪ್ಲಾನ್ ಮಾಡಿಕೊಂಡೇ ಸಿನೆಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ ಈ ವರ್ಷದ ಅಂತ್ಯಕ್ಕೆ ಸಿನೆಮಾ ಕೆಲಸಗಳೂ ಸಹ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಕ್ರಿಕೆಟ್ ಜಗತ್ತಿನಲ್ಲಿ ಮಿಂಚಿನ ಧೋನಿ ಇದೀಗ ಸಿನೆಮಾ ನಿರ್ಮಾಣ ಕ್ಕೆ ಮುಂದಾಗಿದ್ದು, ಸಿನೆಮಾ ಮೇಲೆ ಕ್ರೇಜ್ ಹೆಚ್ಚಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷದಲ್ಲೇ ಸಿನೆಮಾ ಕೆಲಸಗಳು ಸಹ ಪ್ರಾರಂಭವಾಗಬಹುದಾಗಿದೆ. ಧೋನಿ ಮಾತ್ರ ದೊಡ್ಡ ಪ್ಲಾನ್ ನಲ್ಲೇ ಸಿನೆಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
