Kannada Cinema News

ಧಾರವಾಡದಲ್ಲಿ 30 ಜಮುನಾಪೂರಿ ಮೇಕೆ, ಕುದುರೆ ಖರೀದಿ ಮಾಡಿ, ಎತ್ತಿನ ಗಾಡಿ ಓಡಿಸಿದ ಡಿಬಾಸ್! ವಿಡಿಯೋ ನೋಡಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಾಣಿಪ್ರಿಯ ಹಾಗೂ ಪ್ರಕೃತಿಪ್ರಿಯ. ಹಾಗೂ ಫೋಟೋಗ್ರಫಿ ಇವರ ಪ್ಯಾಷನ್. ಸಮಯ ಸಿಕ್ಕಾಗಲೆಲ್ಲಾ ಸ್ನೇಹಿತರ ಜೊತೆ ಕಾಡುಮೇಡು ಸುತ್ತಿ, ಅಲ್ಲಿನ ಪ್ರಕೃತಿ ಸೌಂದರ್ಯ ಸವಿದು, ಒಂದಷ್ಟು ವಿಶೇಷವಾದ ಫೋಟೋಗಳನ್ನು ಕ್ಲಿಕ್ ಮಾಡುವ ಹವ್ಯಾಸ ದರ್ಶನ್ ಅವರದ್ದು. ಅವರ ಟ್ರೆಕಿಂಗ್ ಫೋಟೋಗಳನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ನಟ ದರ್ಶನ್ ಅವರ ಪ್ರಾಣಿಪ್ರೇಮ ಎಂಥದ್ದು ಎಂಬುದು ನಮಗೆಲ್ಲಾ ಗೊತ್ತು. ಈಗಾಗಲೇ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ, ಹಸುಗಳು, ಕುದುರೆಗಳು ಸೇರಿದಂತೆ ಅನೇಕ ಪ್ರಾಣಿ ಪಕ್ಷಿಗಳನ್ನು ಸಾಕಿದ್ದರೆ. ಇದೀಗ ದರ್ಶನ್ ಅವರು ಹೊಸ ಯೋಜನೆಯನ್ನು ಶುರು ಮಾಡಲಿದ್ದಾರೆ.ಸ್ಕ್ರಾಲ್ ಡೌನ್ ಮಾಡಿ, ಡಿಬಾಸ್ ಎತ್ತಿನ ಗಾಡಿ ಓಡಿಸುತ್ತಿರುವ ವಿಡಿಯೋ ನೋಡಿ

ಇದೀಗ ಡಿಬಾಸ್ ಮೇಕೆ ಸಾಕಾಣಿಕೆ ಮಾಡಲಿದ್ದಾರೆ. ಈ ವಿಚಾರವಾಗಿ ಧಾರವಾಡಕ್ಕೆ ತೆರಳಿದ್ದರು ನಟದರ್ಶನ್. ಅಲ್ಲಿನ ಮಾಜಿ ಸಚಿವರಾದ ವಿನಯ್ ಕುಲಕರ್ಣಿ ಅವರ ಡೈರಿಗೆ ಭೇಟಿ ನೀಡಿದ್ದರು. ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಂದ 30 ಜಮುನಾಪೂರಿ ಮೇಕೆಗಳನ್ನು ಖರೀದಿ ಮಾಡಿದ್ದಾರೆ. ನಾನು ಮೇಕೆ ಸಾಕಾಣಿಕೆ ಮಾಡಲು ಪ್ಲಾನ್ ಮಾಡಿರುವ ಕಾರಣದಿಂದ ಮೇಕೆ ಖರೀದಿ ಮಾಡಲು ಧಾರವಾಡಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ ದರ್ಶನ್. ಬೆಳಿಗ್ಗೆಯಿಂದ ಡೈರಿಯಲ್ಲಿ ಚಕ್ಕಡಿ ಓಡಿಸಿ ಸಂತೋಷ ಪಟ್ಟ ದರ್ಶನ್, ನಾನು ಲ್ಯಾಂಬೊರ್ಗಿನಿ ಓಡಿಸೋದಕ್ಕೂ ರೇಡಿ, ಚಕ್ಕಡಿ ಓಡಿಸೋದಕ್ಕೂ ರೆಡಿ ಎಂದು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ

ಇದಕ್ಕೂ ಮೊದಲು ಹಸುಗಳನ್ನು ಸಹ ಇಲ್ಲಿಂದಲೇ ಖರೀದಿ ಮಾಡಿದ್ದೇನೆ..ವಿನಯ ಕುಲಕರ್ಣಿ ಅವರ ಬಳಿ ಎತ್ತುಗಳು ಚನ್ನಾಗಿವೆ ಎಂದು ದರ್ಶನ್ ಹೇಳಿದ್ದಾರೆ. ಈ ಸಮಯದಲ್ಲಿ ದರ್ಶನ್ ಅವರ ಬಗ್ಗೆ ಮಾತನಾಡಿರುವ ವಿನಯ್ ಕುಲಕರ್ಣಿ ಅವರು.. “ದರ್ಶನ್ ಮೊದಲಿನಿಂದಲೂ ಪ್ರಾಣಿ ಪ್ರಿಯ. ಮೊದಲು ಹಸುಗಳ ಹಾಲನ್ನು ಕೂಡಾ ಅವರು ಮನೆಗಳಿಗೆ ಕೊಟ್ಟಿದ್ದನ್ನು ನಾನು ನೋಡಿದ್ದೇನೆ. ಇಂದು ನಾನು ದರ್ಶನ್ ಅವರಿಗೆ ಮೇಕೆಗಳನ್ನು ಪ್ರತಿ ಕೆಜಿಗೆ 400ರಂತೆ ಕೊಟ್ಟಿದ್ದೇನೆ..” ಎಂದು ಹೇಳಿದ್ದಾರೆ ವಿನಯ್ ಕುಲಕರ್ಣಿ.ಮೇಕೆಗಳ ಜೊತೆ ಇದೇ ಡೈರಿಯಲ್ಲಿ ಒಂದು ಕುದುರೆಯನ್ನು ಕೂಡಾ ಖರೀದಿ ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ ಡಿಬಾದ್. ವಿನಯ್ ಕುಲಕರ್ಣಿ ಅವರ ಡೈರಿಗೆ ನಟ ದರ್ಶನ್ ಬಂದಿದ್ದಾರೆ ಎಂದು ತಿಳಿದ ನಂತರ ಅಭಿಮಾನಿಗಳು ಸಾಲು ಸಾಲಾಗಿ ಬಂದು ಕಾದರು. ನಂತರ ದರ್ಶನ್ ಅವರನ್ನು ಭೇಟಿ ಮಾಡಿದ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ.

Trending

To Top