ಕಾಲಿವುಡ್ ಸ್ಟಾರ್ ನಟನ ಜೊತೆ ವರನಟ ಡಾ.ರಾಜ್ ಕುಮಾರ್ ಮೊಮ್ಮಗಳ ನಟನೆ…!

ಸ್ಯಾಂಡಲ್ ವುಡ್ ನಲ್ಲಿ ದೊಡ್ಮನೆಯ ಕುಟುಂಬದ ಕುಡಿ ಧನ್ಯಾ ರಾಮ್ ಕುಮಾರ್‍ ಕಾಲಿವುಡ್ ದಳಪತಿ ವಿಜಯ್ ಜೊತೆ ಬಣ್ಣ ಹಚ್ಚಲಿದ್ದಾರೆ. ಈಗಾಗಲೇ ರಾಜ್ ಮೊಮ್ಮಗಳಾದ ಧನ್ಯಾ ರಾಮ್ ಕುಮಾರ್‍ ಸಿನಿರಂಗಕ್ಕೆ ಎಂಟ್ರಿಕೊಟ್ಟಾಗಿದೆ. ರಾಜ್ ಕುಮಾರ್‍ ರವರ ಮಗಳ ಮಗಳು ಧನ್ಯಾರಾಮ್ ಕುಮಾರ್‍. ನಿನ್ನ ಸನಿಹಕೆ ಎಂಬ ಸಿನೆಮಾದ ಮೂಲಕ ಧನ್ಯಾ ರಾಮ್ ಕುಮಾರ್‍ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಸಿನೆಮಾ ಮೂಲಕವೇ ಧನ್ಯಾ ಖ್ಯಾತಿ ಪಡೆದುಕೊಂಡಿದ್ದಾರೆ.

ನಟಿ ಧನ್ಯಾ ರಾಮ್ ಕುಮಾರ್‍ ಮೊದಲನೇ ಸಿನೆಮಾ ಮೂಲಕವೇ ಉತ್ತಮ ನಟಿಯಾಗಿ ಖ್ಯಾತಿ ಪಡೆದುಕೊಂಡಿದ್ದಾರೆ. ಈ ಹಿಂದೆಯೇ ಧನ್ಯಾ ರಾಮ್ ಕುಮಾರ್‍ ಕಾಲಿವುಡ್ ಹಾಗೂ ಟಾಲಿವುಡ್ ನಲ್ಲೂ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಈ ಸುದ್ದಿ ನಿಜವಾಗಿದ್ದು, ತಮಿಳಿನಲ್ಲಿ ಸ್ಟಾರ್‍ ನಟನೊಂದಿಗೆ ತೆರೆ ಹಂಚಿಕೊಳ್ಳುವುದು ಬಹುತೇಕ ಖಚಿತವಾಗಿದೆ. ನಟಿ ಧನ್ಯಾ ತಮಿಳಿನ ದಳಪತಿ ವಿಜಯ್ ಜೊತೆ ತೆರೆಹಂಚಿಕೊಳ್ಳಿದ್ದು, ಯಾವ ಸಿನೆಮಾ ಯಾವ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ ಎಂಬ ಕುರಿತು ಈಗಾಗಲೇ ಕುತೂಹಲ ಮೂಡಿದೆ. ಇನ್ನೂ ಧನ್ಯಾ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಒಂದು ಪೋಸ್ಟ್ ವಿಜಯ್ ಜೊತೆ ಸಿನೆಮಾ ಮಾಡಲಿದ್ದಾರೆ ಎಂಬ ವಿಚಾರಕ್ಕೆ ಮತಷ್ಟು ಬಲತಂದಿದೆ.

ನಟ ವಿಜಯ್ ನಿನ್ನೆಯಷ್ಟೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ವಿಜಯ್ ರವರ ಹುಟ್ಟುಹಬ್ಬಕ್ಕೆ ಸಾಕಷ್ಟು ಮಂದಿ ಶುಭಾಷಯಗಳನ್ನು ಕೋರಿದ್ದರು. ಅದರಲ್ಲೂ ಸಿನೆಮಾ ಸೆಲೆಬ್ರೆಟಿಗಳು ಸಹ ಶುಭ ಕೋರಿದ್ದರು. ತೆಲುಗು, ಕನ್ನಡ, ತಮಿಳು, ಹಿಂದಿ ಹೀಗೆ ಅನೇಕ ಭಾಷೆಗಳ ನಟರು ವಿಶೇಷವಾಗಿ ಶುಭಾಷಯ ಕೋರಿದ್ದರು. ಇನ್ನೂ ಕನ್ನಡದ ನಟಿ ಧನ್ಯಾ ರಾಮ್ ಕುಮಾರ್‍ ಮಾತ್ರ ವಿಶೇಷವಾಗಿ ಶುಭಾಷಯ ಕೋರಿದ್ದು, ಎಲ್ಲರ ಗಮನ ಸೆಳೆದಿತ್ತು.  ನಟಿ ಧನ್ಯಾ ವಿಶೇಷ ಸಂದೇಶವನ್ನುಮೂಲಕ ಶುಭಾಷಯ ಕೋರಿ ಟ್ವೀಟ್ ಮಾಡಿದ್ದಾರೆ. ಧನ್ಯಾ ಟ್ವೀಟ್ ಮಾಡಿದಂತೆ “ನಿಮ್ಮ ಅಭಿನಯ ನನಗೆ ತುಂಬಾ ಇಷ್ಟವಾಗಿದೆ, ನಿಮ್ಮ ವಾರಿಸು ಚಿತ್ರದ ಪೋಸ್ಟರ್‍ ಸಹ ತುಂಬಾ ಇಷ್ಟವಾಗಿದೆ. ನಿಮಗೆ ಹುಟ್ಟುಹಬ್ಬದ ಶುಭಾಷಯಗಳು ಎಂದು ಬರೆದುಕೊಂಡಿದ್ದಾರೆ. ಈ ಕಾರಣಕ್ಕೆ ಧನ್ಯಾ ಮುಂದಿನ ಸಿನೆಮಾ ಕಾಲಿವುಡ್ ನಲ್ಲಿ ವಿಜಯ್ ಜೊತೆ ನಟಿಸಲಿದ್ದಾರೆ ಎಂಬ ಮಾತುಗಳು ಜೋರಾಗಿಯೇ ಕೇಳಿಬರುತ್ತಿದೆ.

ಇನ್ನೂ ಕನ್ನಡದಲ್ಲೂ ಸಹ ಬ್ಯುಸಿಯಾಗಿರುವ ನಟಿ ಧನ್ಯಾ ಈಗಾಗಲೇ ಕೆಲವೊಂದು ಸಿನೆಮಾಗಳನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಕಾಲಪತ್ತರ್‍ ಸಿನೆಮಾದಲ್ಲಿ ಧನ್ಯಾ ಬ್ಯುಸಿಯಾಗಿದ್ದಾರೆ. ಜೊತೆಗೆ  ತೆಲುಗು ಸಿನೆಮಾವೊಂದರಲ್ಲೂ ಸಹ ನಟಿಸಲಿದ್ದಾರೆ ಎಂಬ ಸುದ್ದಿಗಳು ಸಹ ಕೇಳಿಬರುತ್ತಿದ್ದು, ತೆಲುಗು ಸಿನೆಮಾವೊಂದರ ಕಥೆಯನ್ನು ಕೇಳಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈ ಸಿನೆಮಾದ ಬಗ್ಗೆ ಶೀಘ್ರದಲ್ಲೇ ಅಪ್ಡೇಟ್ ಸಹ ಹೊರಬರಲಿದೆ ಎಂದು ಹೇಳಲಾಗುತ್ತಿದೆ.

Previous articleಬಹುನಿರೀಕ್ಷಿತ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್…! ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದ ಟ್ರೈಲರ್..!
Next articleಜಾನ್ವಿ ಇಂತಹ ಪೋಸ್ ಕೊಟ್ಟರೇ, ಪಡ್ಡೆ ಹುಡುಗರು ನಿದ್ದೆ ಮಾಡುವುದಾದರೂ ಹೇಗೆ?