Film News

ಹಾಲಿವುಡ್ ಚಿತ್ರದಲ್ಲಿ ಧನುಷ್: 1500 ಕೋಟಿ ಬಿಗ್ ಬಜೆಟ್ ಸಿನೆಮಾ

ಚೆನೈ: ಬರೋಬ್ಬರಿ 1500 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಹಾಲಿವುಡ್ ಸಿನೆಮಾವೊಂದರಲ್ಲಿ ತಮಿಳು ನಟ ಧನುಷ್ ಅಭಿನಯಿಸಲಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ.

ತಮಿಳು ಸಿನಿರಂಗದ ಯೂತ್ ಐಕಾನ್ ಎಂದೇ ಕರೆಯುವ ನಟ ಧನುಷ್ ತಮಿಳು ಮಾತ್ರವಲ್ಲದೇ ಹಿಂದಿ ಚಿತ್ರರಂಗದಲ್ಲೂ ತಮ್ಮ ಪ್ರತಿಭೆಯನ್ನು ಗುರ್ತಿಸಿಕೊಂಡಿದ್ದು, ದಕ್ಷಿಣ ಭಾರತದ ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇನ್ನೂ ಈಗಾಗಲೇ 2 ವರ್ಷದ ಹಿಂದೆ ’ದಿ ಎಕ್ಸ್ಟ್ರಾಡಿನರಿ ಜರ್ನಿ ಆಫ್ ದಿ ಫಕೀರ್’ಎಂಬ ಹಾಲಿವುಡ್ ಚಿತ್ರದಲ್ಲಿ ನಟಿಸಿದ್ದರು. ಈಗ ಮತ್ತೋಂದು ಬಿಗ್ ಬಜೆಟ್ ಸಿನೆಮಾದಲ್ಲಿ ನಟಿಸುವಂತೆ ಆಹ್ವಾನ ಬಂದಿದೆ.

ಹಾಲಿವುಡ್ ನ ಫೇಮಸ್ ನಿರ್ದೇಶಕರಾದ ರುಸ್ಸೋ ಬ್ರದರ್ಸ್ ರವರು ದೊಡ್ಡ ಬಜೆಟ್ ಸಿನೆಮಾವೊಂದಕ್ಕೆ ಪ್ಲಾನ್ ಮಾಡಿದ್ದು, ಆ ಚಿತ್ರಕ್ಕೆ ’ದಿ ಗ್ರೇ ಮ್ಯಾನ್’ಎಂಬ ಶೀರ್ಷಿಕೆಯನ್ನು ಇಟ್ಟಿದ್ದಾರೆ. ಕ್ಯಾಪ್ಟನ್ ಅಮೇರಿಕಾ, ಅವೆಂಜರ್‍ಸ್ ಮೊದಲಾದ ಸರಣಿ ಸಿನೆಮಾಗಳ ಮೂಲಕ ಖ್ಯಾತಿ ಗಳಿಸಿರುವು ರೊಸ್ಸೋ ಬ್ರದರ್ಸ್ ನೆಟ್ ಫ್ಲಿಕ್ಸ್ ನಿರ್ಮಾಣದಲ್ಲಿ ಸುಮಾರು 1500 ಕೋಟಿ ವೆಚ್ಚದಲ್ಲಿ ದಿ ಗ್ರೇ ಮ್ಯಾನ್ ನಿರ್ಮಿಸಲಿದ್ದು, ಇದು ನೆಟ್ ಫ್ಲಿಕ್ಸ್ ನಿರ್ಮಿಸಿದ ಎಲ್ಲಾ ಸಿನೆಮಾಗಳಿಗಿಂದ ದುಬಾರಿಯಾಗಿದೆ ಎನ್ನಲಾಗುತ್ತಿದೆ.

ಇನ್ನೂ ಈ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಧನುಷ್ ನಟಿಸಲಿದ್ದು, ಧನುಷ್ ಜೊತೆ ಕ್ರಿಸ್ ಇವಾನ್ಸ್, ರಯಾನ್ ಗ್ಲೋಸಿಂಗ್, ಅನಾ ಡೇ ಅರ್ಮಸ್ ಸೇರಿದಂತೆ ಜೆಸ್ಸಿಕಾಆ, ಹೆನ್ವಿಕ್, ವ್ಯಾಗ್ನರ್ ಮೌರಾ ಬಣ್ಣ ಹಚ್ಚಲಿದ್ದಾರೆ. ಈಗಾಗಲೇ ಪಟ್ಟಾಸ್ ಸಿನೆಮಾದ ನಂತರ ಬಾಲಿವುಡ್ ನ ಅತರಂಗೀ ರೇ ಸಿನೆಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ನಟಿಸುತ್ತಿದ್ದು, ಜಗಮೇ ತಂದೀರಂ ಬಿಡುಗಡೆ ಸಿದ್ದವಾಗಿದೆ. ಜೊತೆಗೆ ಕರ್ಣನ್ ಸಿನೆಮಾದ ಶೂಟಿಂಗ್ ಕೂಡ ಕೊನೆ ಹಂತದಲ್ಲಿ ನಡೆಯುತ್ತಿದೆ ಎನ್ನಲಾಗಿದೆ.

Trending

To Top