Cinema

ತಂದೆಯಾದ ಖುಷಿಯಲ್ಲಿ ಕನ್ನಡ ಬಿಗ್ ಬಾಸ್ ಸ್ಪರ್ದಿ ಧನ್ರಾಜ್! ಸುಂದರ ಫೋಟೋಗಳನ್ನು ನೋಡಿ

ಬಿಗ್ ಬಾಸ್ ಸೀಸನ್ 6 ಸ್ಪರ್ಧಿ ಧನರಾಜ್ ತಮ್ಮ ತಾಳ್ಮೆ ಹಾಗೂ ಮನೋರಂಜನಾ ಭಾವದಿಂದ ವೀಕ್ಷಕರ ಮನಗೆದ್ದಿದ್ದರು. ಬಿಗ್ ಮನೆಯಲ್ಲಿ ಶಿವಣ್ಣನ ಹಾಗೆ ಮಿಮಿಕ್ರಿ ಮಾಡಿ ಸ್ವತಃ ಅವರಿಂದಲೇ ಮೆಚ್ಚುಗೆ ಪಡೆದಿದ್ದರು. ಬಿಗ್ ಬಾಸ್ ಮನೆಗೆ ಸಾಮಾನ್ಯನಾಗಿ ಎಂಟ್ರಿ ಕೊಟ್ಟಿದ್ದ ಧನರಾಜ್, ನಂತರದ ದಿನಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದರು. ಧನರಾಜ್ ಅವರದ್ದು ಲವ್ ಮ್ಯಾರೇಜ್. ತಮ್ಮ ಪ್ರೀತಿ ಬಗ್ಗೆ ಪತ್ನಿ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಳ್ಳುತ್ತಿದ್ದರು ಧನರಾಜ್, ಅವರ ಪತ್ನಿ ಮನೆಗೆ ಬಂದಾಗ ಬಹಳ ಭಾವುಕರಾಗಿದ್ದರು. ಧನರಾಜ್ ಮತ್ತು ಅವರ ಪತ್ನಿ ಶಾಲಿನಿಯಲ್ಲಿ ಬಹಳ ಹೊಂದಾಣಿಕೆ ಇತ್ತು. ಬಿಗ್ ಬಾಸ್ ನಂತರ ಈ ದಂಪತಿಗಳ ಜೀವನ ಬದಲಾಗಿತ್ತು.
ಕೆಲ ತಿಂಗಳುಗಳ ಹಿಂದೆ ತಮ್ಮ ಪತ್ನಿ ಗರ್ಭಿಣಿ ಆಗಿರುವ ವಿಚಾರವನ್ನು ಧನರಾಜ್ ಹಂಚಿಕೊಂಡಿದ್ದರು. ಇತ್ತೀಚೆಗೆ ಪತ್ನಿಯ ಸೀಮಂತ ಶಾಸ್ತ್ರದ ಫೋಟೋಗಳನ್ನು ಸಹ ಹಂಚಿಕೊಂಡಿದ್ದರು ಧನರಾಜ್. ಈ ಸಂಭ್ರಮದಲ್ಲಿ ಕಿರುತೆರೆ ನಟಿ ಬಿಗ್ ಬಾಸ್ ಸ್ಪರ್ಧಿ ಕವಿತಾ ಗೌಡ ಸಹ ಪಾಲ್ಗೊಂಡಿದ್ದರು. ಇದಾದ ನಂತರ ನಿನ್ನೆ ಅಂದರೆ ಜುಲೈ 30ರಂದು, ಧನರಾಜ್ ಅವರ ಪತ್ನಿ ಶಾಲಿನಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯಾದ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಧನರಾಜ್. ಜೊತೆಗೆ ತಾಯಿ ಮಗು ಇಬ್ಬರು ಕೂಡ ಆರೋಗ್ಯವಾಗಿ ಇರುವುದಾಗಿ ತಿಳಿಸಿದ್ದಾರೆ.
ಬಿಗ್ ಬಾಸ್ ಇಂದ ಜರ್ನಿ ಶುರು ಮಾಡಿದ ನಟ ಇತ್ತೀಚೆಗೆ ತೆರೆಕಂಡ, ನಟ ವಿಜಯ್ ರಾಘವೇಂದ್ರ ಮುಖ್ಯಪಾತ್ರದಲ್ಲಿ ನಟಿಸಿದ್ದ ಮಾಲ್ಗುಡಿ ಡೇಸ್ ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು ಧನರಾಜ್

Trending

To Top