Kannada Reality Shows

ಪುತ್ರನಿಗೆ ಅಗಸ್ತ್ಯ ಎಂದು ನಾಮಕರಣ ಮಾಡಿದ ಬಿಗ್ ಬಾಸ್ ಧನ್‌ರಾಜ್‌! ಸಕತ್ ಫೋಟೋಗಳನ್ನು ನೋಡಿ

ಬಿಗ್ ಬಾಸ್ ಕನ್ನಡ ಸೀಸನ್ 6 ಸ್ಪರ್ಧಿ ಧನರಾಜ್ ಅವರು ಕೆಲ ತಿಂಗಳುಗಳ ಹಿಂದೆ ತಮ್ಮ ಪತ್ನಿ ಗರ್ಭಿಣಿ ಆಗಿರುವ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇತ್ತೀಚೆಗೆ ಪತ್ನಿಯ ಸೀಮಂತ ಶಾಸ್ತ್ರದ ಫೋಟೋಗಳನ್ನು ಸಹ ಶೇರ್ ಮಾಡಿದ್ದರು ಧನರಾಜ್. ಈ ಸಂಭ್ರಮದಲ್ಲಿ ಕಿರುತೆರೆ ನಟಿ ಬಿಗ್ ಬಾಸ್ ಸ್ಪರ್ಧಿ ಕವಿತಾ ಗೌಡ ಸಹ ಪಾಲ್ಗೊಂಡಿದ್ದರು. ಇದಾದ ನಂತರ ನಿನ್ನೆ ಅಂದರೆ ಜುಲೈ 30ರಂದು, ಧನರಾಜ್ ಅವರ ಪತ್ನಿ ಶಾಲಿನಿ ಗಂಡುಮಗುವಿಗೆ ಜನ್ಮ ನೀಡಿದ್ದರು. ತಂದೆಯಾದ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೀಗ, ಜನ್ಮಾಷ್ಟಮಿಯ ಸಂಭ್ರಮದಂದು ತಮ್ಮ ಮಗುವಿಗೆ ನಾಮಕಾರಣ ಮಾಡಿ, ಪುಟ್ಟ ಕೃಷ್ಣನನ್ನು ಮನೆಗೆ ಬರಮಾಡಿಕೊಂಡಿದ್ದಾರೆ.
ಮಗುವಿನ ನಾಮಕಾರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಧನರಾಜ್ ದಂಪತಿ.. “ನಮ್ಮ ಲಿಟಲ್ ಮ್ಯಾನ್ ಗೆ ಇಂದು ಹೆಸರಿಟ್ಟಿದ್ದೇವೆ.. ನಮ್ಮ ಮಗುವನ್ನು ನೀವು ಅಗಸ್ತ್ಯ ಧನರಾಜ್ ಎಂದು ಕರೆಯಬಹುದು..” ಎಂದು ಪೋಸ್ಟ್ ಮಾಡಿದ್ದಾರೆ. ಧನರಾಜ್ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಧನರಾಜ್ ತಮ್ಮ ತಾಳ್ಮೆ ಹಾಗೂ ಮನೋರಂಜನಾ ಭಾವದಿಂದ ವೀಕ್ಷಕರ ಮನಗೆದ್ದಿದ್ದರು. ಬಿಗ್ ಮನೆಯಲ್ಲಿ ಶಿವಣ್ಣನ ಹಾಗೆ ಮಿಮಿಕ್ರಿ ಮಾಡಿ ಸ್ವತಃ ಅವರಿಂದಲೇ ಮೆಚ್ಚುಗೆ ಪಡೆದಿದ್ದರು. ಬಿಗ್ ಬಾಸ್ ಮನೆಗೆ ಸಾಮಾನ್ಯನಾಗಿ ಎಂಟ್ರಿ ಕೊಟ್ಟಿದ್ದ ಧನರಾಜ್, ನಂತರದ ದಿನಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದರು. ಧನರಾಜ್ ಅವರದ್ದು ಲವ್ ಮ್ಯಾರೇಜ್. ತಮ್ಮ ಪ್ರೀತಿ ಬಗ್ಗೆ ಪತ್ನಿ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಳ್ಳುತ್ತಿದ್ದರು ಧನರಾಜ್, ಅವರ ಪತ್ನಿ ಮನೆಗೆ ಬಂದಾಗ ಬಹಳ ಭಾವುಕರಾಗಿದ್ದರು. ಧನರಾಜ್ ಮತ್ತು ಅವರ ಪತ್ನಿ ಶಾಲಿನಿಯಲ್ಲಿ ಬಹಳ ಹೊಂದಾಣಿಕೆ ಇತ್ತು. ಬಿಗ್ ಬಾಸ್ ನಂತರ ಈ ದಂಪತಿಗಳ ಜೀವನ ಬದಲಾಗಿತ್ತು.

Trending

To Top